ನವದೆಹಲಿ:ಪ್ರತಿ ವರ್ಷದ ದಸರಾ ಸಮಯದಲ್ಲಿ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಬೋನಸ್ ನೀಡುತ್ತದೆ. ಆದರೆ ಈ ಈ ಬಾರಿ ಕರೊನಾ ವೈರಸ್​ ಹಿನ್ನೆಲೆಯಲ್ಲಿ ಬೋನಸ್​ ನೀಡಿಕೆ ಕಷ್ಟ ಎಂದೇ ಹೇಳಲಾಗುತ್ತಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ ಬೋನಸ್ ನೀಡುವ ನಿರ್ಧಾರ ತೆಗೆದುಕೊಂಡಿದ್ದು, ತನ್ನ ನೌಕರರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ.
ಸಿ ಮತ್ತು ಡಿ ದರ್ಜೆ ನೌಕರರಿಗೆ 2019-20ನೇ ಸಾಲಿನ ಬೋನಸ್ ನೀಡಲು ಸಚಿವ ಸಂಪುಟದಲ್ಲಿ ನಿರ್ಧಾರವಾಗಿದೆ. ಇದರಿಂದ 30 ಲಕ್ಷ ನೌಕರರಿಗೆ ಒಟ್ಟು 3,737 ಕೋಟಿ ರೂಪಾಯಿ ಬೋನಸ್​ ಸಿಗಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ಇದು ಸದಸ್ಯ ನಾನ್​ ಗೆಜೆಟೆಡ್​ ನೌಕರರಿಗೆ ಮಾತ್ರ ಅನ್ವಯ ಆಗಲಿದೆ. ಅಂದರೆ ಸಿ ಮತ್ತು ಡಿ ದರ್ಜೆ ನೌಕರರು ನಾನ್​ಗೆಜೆಡೆಟ್​ ವ್ಯಾಪ್ತಿಯಲ್ಲಿ ಬರುತ್ತಾರೆ. ರೈಲ್ವೆ, ಅಂಚೆ, ಇಪಿಎಫ್​ಒ, ಇಸಿಐಸಿಯಂಥ ವಾಣಿಜ್ಯ ಸರ್ಕಾರಿ ಸಂಸ್ಥೆಗಳಲ್ಲಿ ನಾನ್-ಗೆಜೆಟೆಡ್ ಉದ್ಯೋಗಿಗಳಿದ್ದಾರೆ. ಕೇಂದ್ರ ಸರ್ಕಾರದ ಅಧೀನದ ವಿವಿಧ ಇಲಾಖೆಗಳಲ್ಲಿ ಇಂಥ 30 ಲಕ್ಷ ನೌಕರರಿದ್ದಾರೆ. ಅವರಿಗೆ ಇದು ಅನ್ವಯ ಆಗಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಕೈ, ಕಮಲದ ಮಾರಾಮಾರಿ- ಆರೋಪ, ಪ್ರತ್ಯಾರೋಪ; ಪ್ರತಿಭಟನೆ
ಅಕ್ಟೋಬರ್ 26ರಂದು ಇರುವ ವಿಜಯದಶಮಿ ಹಬ್ಬಕ್ಕೆ ಮುನ್ನ ಬೋನಸ್ ಹಣವನ್ನು ಎಲ್ಲಾ ಅರ್ಹ ಉದ್ಯೋಗಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಬೋನಸ್​ಗೆ ಆಗ್ರಹಿಸಿ ನಿನ್ನೆಯಷ್ಟೇ ಸೌತ್​ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಕರೊನಾ ಇದ್ದರೂ ಈ ವರ್ಷ ಕಳೆದ ವರ್ಷಕ್ಕಿಂತ ಗೂಡ್ಸ್ ರೈಲುಗಳಿಂದ ಶೇಕಡಾ 110 ರಷ್ಟು ಆದಾಯ ಪಡೆಯಲಾಗಿದೆ. ಅದೇ ರೀತಿ ವಿಶೇಷ ಪ್ರಯಾಣಿಕರ ರೈಲಿನಿಂದಲೂ ಉತ್ತಮ ಆದಾಯ ಗಳಿಸಿದೆ, ಆದರೂ ಬೋನಸ್​ ಪ್ರಕಟಿಸಿಲ್ಲ ಎಂದು ಅವರು ಹೇಳಿದ್ದರು. ಇದೀಗ ಎಲ್ಲರಿಗೂ ಬೋನಸ್​ ಸಿಗಲಿದೆ.
ಹೊಸ ಲವರ್​ಗೆ ಗ್ರಹಚಾರ ತಂದಿಟ್ಟ ಪ್ರೇಯಸಿ- ಸಾಗರದ ಡಬಲ್​ ಮರ್ಡರ್​ ಕೇಸ್​ ಭೇದಿಸಿದ ಪೊಲೀಸರು!

ಕಾಶ್ಮೀರವನ್ನು ಭಯೋತ್ಪಾದನಾ ಕಾರ್ಖಾನೆ ಮಾಡುತ್ತಿರುವುದೇ ಮದರಸಾಗಳು ಎಂದ ಸಚಿವೆ!

ಯೋಗಿ ರಾಜ್ಯದಲ್ಲಿ ಅಪರಾಧಿಗಳಿಗೆ ನಡುಕ- 125 ಎನ್​ಕೌಂಟರ್​, 14 ಗಲ್ಲು, 24 ಗಂಟೆಗಳಲ್ಲಿ 23 ಜೀವಾವಧಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × 1 =
Remember me
