ನವದೆಹಲಿ:ಕೋವಿಡ್‌ನ ಈ ಬಿಕ್ಕಟ್ಟಿನ ದಿನಗಳಲ್ಲಿ ತನ್ನ ನೌಕರರ ಯೋಗಕ್ಷೇಮದ ಕುರಿತು ವಿಶೇಷ ಕಾಳಜಿ ವಹಿಸಿರುವ ಕೇಂದ್ರ ಸರ್ಕಾರ, ಎಲ್ಲಾ ಕೇಂದ್ರ ಸರ್ಕಾರಿ ನೌಕರಿಗೆ ವಿಶೇಷ ರಜಾ ಸೌಲಭ್ಯವನ್ನು ನಿಗದಿ ಮಾಡಿದೆ.
ಕೇಂದ್ರ ಸರ್ಕಾರಿ ನೌಕರ ಕರೊನಾ ಸೋಂಕಿಗೆ ಒಳಗಾದರೆ ಅಥವಾ ಕ್ವಾರಂಟೈನ್‌ನಲ್ಲಿ ಇದ್ದರೆ ಅಂಥ ಸಂದರ್ಭಗಳಲ್ಲಿ 20 ದಿನಗಳವರೆಗೆ ರಜೆ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಇದರ ಜತೆಗೆ ಕೇಂದ್ರ ಸರ್ಕಾರಿ ನೌಕರರ ಪಾಲಕರು ಅಥವಾ ಅವರ ಅವಲಂಬಿತ ಕುಟುಂಬ ಸದಸ್ಯರು ಕರೊನಾ ಸೋಂಕಿಗೆ ಒಳಗಾದರೆ ಅಂಥ ನೌಕರರಿಗೆ 15 ದಿನಗಳ ವಿಶೇಷ ಸಾಂದರ್ಭಿಕ ರಜೆ (ಎಸ್‌ಸಿಎಲ್) ಮಂಜೂರು ಮಾಡಿದೆ. ಒಂದು ವೇಳೆ ಕುಟುಂಬದ ಸದಸ್ಯರು 15 ದಿನಗಳಿಗಿಂತಲೂ ಹೆಚ್ಚಿನ ಕಾಲ ಆಸ್ಪತ್ರೆಯಲ್ಲಿ ಇದ್ದರೆ ಅಥವಾ ಇನ್ನೂ ಹೆಚ್ಚಿನ ಅವಶ್ಯತಕತೆ ಕಂಡುಬಂದರೆ ಅಂಥವರಿಗೆ ಹೆಚ್ಚುವರಿ ರಜೆಯನ್ನು ಕೂಡ ಮಂಜೂರು ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಈ ರಜೆಯು 2020ರ ಮಾರ್ಚ್‌ 25ರಿಂದಲೇ ಅನ್ವಯ ಆಗಲಿದೆ. ಇದರರ್ಥ ಕಳೆದ ವರ್ಷದ ಮಾರ್ಚ್‌ 25ರಿಂದ ಯಾರು 15 ದಿನಗಳವರೆಗೆ ಅಥವಾ ಅಗತ್ಯ ಸಂದರ್ಭಗಳಲ್ಲಿ ಅದಕ್ಕಿಂತ ಹೆಚ್ಚು ರಜೆ ಪಡೆದಿರುತ್ತಾರೆಯೋ ಅವುಗಳನ್ನು ಗೈರು ಎಂದು ಪರಿಗಣಿಸದೇ ವಿಶೇಷ ಸಾಂದರ್ಭಿಕ ರಜೆ ಎಂದು ಪರಿಗಣಿಸಬೇಕು ಎಂದು ಇದರಲ್ಲಿ ಸೂಚಿಸಲಾಗಿದೆ.
ಇಷ್ಟೇ ಅಲ್ಲದೇ, ಕೇಂದ್ರ ಸರ್ಕಾರಿ ನೌಕರ ಕರೊನಾ ಸೋಂಕಿತ ವ್ಯಕ್ತಿಯೊಂದಿಗೆ ನೇರ ಸಂಪರ್ಕಕ್ಕೆ ಬಂದರೆ ಅಥವಾ ಹೋಂ ಕ್ವಾರಂಟೈನ್‌ನಲ್ಲಿ ಇದ್ದರೆ ಅಂಥ ಸಂದರ್ಭಗಳಲ್ಲಿ ಏಳು ದಿನಗಳ ಅವಧಿಗೆ ಮನೆಯಿಂದ ಕರ್ತವ್ಯ/ಕೆಲಸ ಎಂದು ಪರಿಗಣಿಸಲಾಗುವುದು’ ಎಂದು ಕೇಂದ್ರ ಸರ್ಕಾರ ಹೇಳಿದೆ.
ತೆರಿಗೆ ಕಟ್ಟಲು ದುಡ್ಡಿಲ್ಲ- ಜಾಲತಾಣದಲ್ಲಿ ದುಃಖ ತೋಡಿಕೊಂಡ ನಟಿ ಕಂಗನಾ ಏನು ಹೇಳಿದ್ದಾರೆ ನೋಡಿ…

ಸೇನೆಯಲ್ಲಿ ಮಹಿಳೆಯರಿಗೆ ಭರ್ಜರಿ ಅವಕಾಶ: 100 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
