ಚಂಡೀಗಢ :ನಾಳೆ (ಮಾರ್ಚ್​ 8) ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಈ ಸಂದರ್ಭದಲ್ಲಿ ಮಹಿಳೆಯ ಕುರಿತು ಹೊಗಳಿಕೆ, ಆಕೆಯ ಕಾರ್ಯಸಾಧನೆ, ಸವಾಲು ಇತ್ಯಾದಿಗಳ ಕುರಿತು ಭರ್ಜರಿ ಮಾತುಕತೆ ನಡೆಯುತ್ತದೆ. ಮತ್ತೆ ಈ ಮಾತುಕತೆ, ಭಾಷಣ ಮಾಡಲು ಮುಂದಿನ ವರ್ಷದ ಮಹಿಳಾ ದಿನಾಚರಣೆಯೇ ಬರಬೇಕು.
ಆದರೆ ಗೃಹಿಣಿಯಾಗಿ, ನೌಕರಸ್ಥೆಯಾಗಿ ಮಹಿಳೆಯ 24/7 ಕೆಲಸದ ಪರಿ ಎಷ್ಟು ಬಣ್ಣಿಸಿದರೂ ಸಾಲದು. ಅದಕ್ಕೆ ಉದಾಹರಣೆ ಈ ಘಟನೆ.ಪ್ರಿಯಾಂಕಾ ಎಂಬ ಮಹಿಳಾ ಪೊಲೀಸ್​ ಕಾನ್ಸ್​ಟೆಬಲ್​ ಒಬ್ಬರು ತಮ್ಮ ಹಸುಗೂಸನ್ನು ಕಂಕುಳಲ್ಲಿ ಹಿಡಿದುಕೊಂಡು ಬಿಸಿಲಿನಲ್ಲಿ ಟ್ರಾಫಿಕ್​ ಕಂಟ್ರೋಲ್​ ಮಾಡುತ್ತಿದ್ದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಶ್ಲಾಘನೆಗೆ ಒಳಗಾಗಿದೆ. ಚಂಡೀಗಢದಲ್ಲಿ ನಡೆದಿರುವ ಈ ಘಟನೆ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮಹಿಳೆಯ ಕರ್ತವ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಟ್ರಾಫಿಕ್ ಪೊಲೀಸ್ ಆಗಿರುವ ಪ್ರಿಯಾಂಕಾ ಸುಡುವ ಬಿಸಿಲಿನಲ್ಲೂ ಲೆಕ್ಕಸಿದೇ ಎಳೆ ಕಂದನನ್ನು ಹಿಡಿದುಕೊಂಡು ಕರ್ತವ್ಯ ನಿರ್ವಹಿಸುತ್ತಿರುವುದನ್ನು ವಾಹನ ಸವಾರರೊಬ್ಬರು ವಿಡಿಯೋ ಮಾಡಿಕೊಂಡು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದನ್ನು ಇಷ್ಟಪಟ್ಟ ನೂರಾರು ಮಂದಿ ಇದನ್ನು ಶೇರ್​ ಮಾಡಿಕೊಂಡಿದ್ದಾರೆ.
ಅಷ್ಟಕ್ಕೂ ಮಗುವನ್ನು ಹಿಡಿದು ಇವರು ಬರಲು ಕಾರಣ ಎಂದರೆ, ರಜೆಯಲ್ಲಿದ್ದ ಅವರನ್ನು ಕಡ್ಡಾಯವಾಗಿ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಮಗುವನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ಆದ್ದರಿಂದ ಮಗುವನ್ನು ಕರೆದುಕೊಂಡೇ ಕರ್ತವ್ಯಕ್ಕೆ ಹಾಜರು ಆಗಿದ್ದಾರೆ.ಇದರಿಂದಾಗಿ ಇಷ್ಟು ಚಿಕ್ಕ ವಯಸ್ಸಿನ ಮಗುವಿದ್ದರೂ ಅವರಿಗೆ ರಜೆ ಮಂಜೂರು ಮಾಡದೇ ಇರುವುದಕ್ಕೆ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ.
ನೀವೂ ನೋಡಿ ಪ್ರಿಯಾಂಕಾ ಅವರ ಈ ಕರ್ತವ್ಯನಿಷ್ಠೆ: ಕೃಪೆThe Tribune

ಬಾಲಕರಿಬ್ಬರು ಅಪ್ರಾಪ್ತನ ಕಾಡಿಗೆ ಎಳೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿ 20 ರೂ. ನೀಡಿದರು!

ಮದುವೆಯಾಗಿ ವರ್ಷ ಆಗುತ್ತಾ ಬಂದರೂ ಒಂದು ದಿನವೂ ಅವಳಿಂದ ಸುಖ ಸಿಕ್ಕಿಲ್ಲ- ವಿಚ್ಛೇದನ ನೀಡಬಹುದಾ?

ಆಕೆಯ ದೇಹ ಬಯಸಿ ಬಂದ ಗ್ರಾಹಕ ಕಥೆ ಕೇಳಿ ಕಣ್ಣೀರಾದ… ಮುಂದೆ ನಡೆದದ್ದು ಸಿನಿಮಾ ಕಥೆಯೆ!

ಹಾಲುಂಡ ತವರನ್ನು ಬಿಟ್ಟು ಗಂಡನ ಮನೆಗೆ ಹೋಗುವಾಗ ಬಿಕ್ಕಿಬಿಕ್ಕಿ ಅತ್ತ ವಧು ಮಸಣ ಸೇರಿದಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
