ಬರ್ಲಿನ್‌ (ಜರ್ಮನಿ): ಬರ್ಲಿನ್‌ನ ಜಹ್ಲೆಂಡೋರ್ಫ್ ಎಂಬಲ್ಲಿ ಪ್ರತಿದಿನವೂ ಹೊರಗಡೆ ಇಡುತ್ತಿದ್ದ ಚಪ್ಪಲಿಗಳ ಕಳ್ಳತನವಾಗುತ್ತಿತ್ತು. ಕಳೆದ ಎರಡು ವಾರಗಳಿಂದ ದಿನನಿತ್ಯವೂ ಈ ಘಟನೆ ನಡೆಯುತ್ತಿದ್ದು ಜನರಿಗೆ ಕಳ್ಳನನ್ನು ಹಿಡಿಯುವುದೇ ದೊಡ್ಡ ತಲೆನೋವಾಗಿತ್ತು.
ಅದರಲ್ಲಿಯೂ ಹೆಣ್ಣುಮಕ್ಕಳ ಕಲರ್‌ ಕಲರ್‌ ಚಪ್ಪಲಿಗಳು ಇದ್ದಕ್ಕಿದ್ದಂತೆಯೇ ಮಾಯವಾಗುತ್ತಿದ್ದವು. ಕಳ್ಳನನ್ನು ಹಿಡಿಯಲು ಜನರು ರಾತ್ರಿಯಲ್ಲಿ ಕಾದು ಕುಳಿತಿದ್ದರು. ಜನರು ಸದ್ದು ಮಾಡುತ್ತಿದ್ದರೆ ಕಳ್ಳತನವಾಗುತ್ತಿರಲಿಲ್ಲ, ಆದರೆ ಸದ್ದುಮಾಡದೇ ಕತ್ತಲಲ್ಲಿ ಕುಳಿತುಕೊಂಡಿದ್ದರೆ ಚಪ್ಪಲ್‌ಗಳು ಮಾಯವಾಗುತ್ತಿದ್ದವು!
ಯಾವ ಮನುಷ್ಯರೂ ಬಂದುಹೋಗಿರುವ ಸದ್ದು ಕೇಳಿಸುತ್ತಿರಲಿಲ್ಲ. ಆದರೂ ಇದ್ಹೇಗೆ ಕಳುವಾಗುತ್ತಿದೆ ಎಂದು ರಹಸ್ಯ ಭೇದಿಸುವುದೇ ಕಷ್ಟವಾಗತೊಡಗಿತು.ನಂತರ ಕಳ್ಳನನ್ನು ಹಿಡಿಯಲು ಕಳ್ಳತನವಾಗುತ್ತಿದ್ದ ಕಡೆಗಳಲ್ಲಿ ಕೆಲವು ಸಿಸಿಟಿವಿಗಳನ್ನು ಅಳವಡಿಸಲಾಯಿತು. ನಂತರ ಸಿಸಿಟಿವಿಯ ದೃಶ್ಯ ಕಂಡ ಜನರು ಕಂಗಾಲಾಗಿ ಹೋಗಿದ್ದರು. ಏಕೆಂದರೆ ಚಪ್ಪಲ್‌ ಕದ್ದುಕೊಂಡು ಹೋಗುತ್ತಿದ್ದುದು ಒಂದು ನರಿ!
Fuchs, Du hast die Schuh gestohlen…🎶In#Zehlendorfwurden mehr als 100 Schuhe von einem Fuchs gemopst. Die ganze Geschichte morgen@TspCheckpoint. (📸: Christian Meyer)pic.twitter.com/pjnKhvobOa
— Felix Hackenbruch (@FHackenbruch)July 26, 2020

ಚಿಕ್ಕ ದೇಹದ ಈ ನರಿ ಸದ್ದಿಲ್ಲದೇ ಬಂದು ಚಪ್ಪಲ್‌ ಕದ್ದು ಹೋಗುತ್ತಿತ್ತು. ಜನರು ಕಾದು ಕುಳಿತಿದ್ದರೂ ಆ ಕತ್ತಲಲ್ಲಿ ಈ ನರಿ ಬಂದು ಹೋಗಿದ್ದೇ ತಿಳಿಯುತ್ತಿರಲಿಲ್ಲ.ಈ ರೀತಿಯಾಗಿ ನೂರಾರು ಚಪ್ಪಲ್‌ಗಳನ್ನು ಅದು ಕದ್ದುಕೊಂಡು ಹೋಗಿದೆ. ಕಳ್ಳನನ್ನು ಕೊನೆಗೂ ಹಿಡಿದುಬಿಟ್ಟ ಖುಷಿಯಲ್ಲಿ ಜನರು ಇದ್ದಾರೆ. ಅವರೆಲ್ಲಾ ಸೇರಿ ನರಿಯ ಹಿಂದಿಂದೆ ಹೋಗಿ ನೋಡಿದಾಗ ಕದ್ದಿರು ಚಪ್ಪಲ್‌ಗಳನ್ನು ರಾಶಿರಾಶಿಯಾಗಿ ಒಂದು ಸ್ಥಳದಲ್ಲಿ ಇಟ್ಟಿರುವುದನ್ನು ಜನರು ನೋಡಿ ಅಚ್ಚರಿ ಪಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಆ ಚಪ್ಪಲ್‌ಗಳನ್ನು ನರಿ ಹಾಳು ಮಾಡದೇ ಇರುವುದು ಇನ್ನೂ ಅಚ್ಚರಿ ತಂದಿದೆ.
ಕೆಲವರಿಗೆ ತಮ್ಮ ಕಳೆದುಹೋಗಿರುವ ಚಪ್ಪಲ್‌ಗಳು ಸಿಕ್ಕರೆ, ಇನ್ನು ಕೆಲವರಿಗೆ ತಮ್ಮ ಚಪ್ಪಲಿ ಎಲ್ಲಿಯೂ ಸಿಕ್ಕಿಲ್ಲ.
ಈ ಘಟನೆಯನ್ನು ಸ್ಥಳೀಯ ನಿವಾಸಿಯೊಬ್ಬರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಾಕಿಕೊಂಡಿದ್ದು, ಅದೀಗ ವೈರಲ್‌ ಆಗಿದೆ. ನರಿ ಶೂ ತೆಗೆದುಕೊಂಡು ಹೋಗುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಜಹ್ಲೆಂಡೋರ್ಫ್ ನಿವಾಸಿಗಳ ಶೂ, ಚಪ್ಪಲಿ, ಸ್ಯಾಂಡಲ್ ಗಳ ಕಳ್ಳತನವಾಗುತ್ತಿದ್ದವು. ಆದ್ರೆ ಯಾರಿಗೂ ಕಳ್ಳ ಸಿಕ್ಕಿರಲಿಲ್ಲ. ಇದೀಗ ಶೂ ಕದಿಯುತ್ತಿರೋದು ನರಿ ಎಂಬ ವಿಚಾರ ಬೆಳಕಿಗೆ ಬಂದಿದೆ. ಕಳೆದ ಎರಡು ವಾರಗಳಿಂದ ಶೂಗಳು ಕಳ್ಳತನವಾಗಿದ್ದು, ನರಿ ಸಂಗ್ರಹಿಸಿಟ್ಟಿದ್ದ ಸ್ಥಳವನ್ನು ಸಹ ನಿವಾಸಿಗಳು ಪತ್ತೆ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಪತ್ನಿಯ ಕೊಲೆ ಮಾಡಿ ಪರಾರಿ: ಅಮ್ಮನ ಶವದೊಂದಿಗೆ ರಾತ್ರಿ ಕಳೆದ ಕಂದಮ್ಮಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
