ಬಿಲಾಸ್‌ಪುರ: ಪತ್ನಿ ತನ್ನ ಗಂಡನ ಕಚೇರಿಗೆ ಹೋಗಿ ಆತನನ್ನು ಮನಸ್ಸಿಗೆ ಬಂದಂತೆ ಬೈದು ನಿಂದಿಸಿದರೆ ಅದು ಪತಿಗೆ ಆಗುವ ಮಾನಸಿಕ ಕ್ರೌರ್ಯ ಎಂದು ಛತ್ತೀಸಗಢ ನ್ಯಾಯಮೂರ್ತಿಗಳಾದ ಗೌತಮ್ ಭಾದುರಿ ಮತ್ತು ರಾಧಾಕಿಶನ್ ಅಗರವಾಲ್ ಅವರ ವಿಭಾಗೀಯ ಪೀಠ ಹೇಳಿದೆ. ಹೀಗೆ ಪತಿಯ ಕಚೇರಿಗೆ ಹೋಗಿ ನಿಂದಿಸಿದರೆ ಗಂಡನಾದವ ಪತ್ನಿಗೆ ವಿಚ್ಛೇದನ ಕೊಡಬಹುದು ಎಂದು ಕೋರ್ಟ್​ ಹೇಳಿದೆ.
ಪದೇ ಪದೇ ಗಂಡನ ಕಚೇರಿಗೆ ಹೋಗಿ ನಿಂದಿಸುವ ಪತ್ನಿಯಿಂದ ರಾಯ್‌ಪುರ ನಿವಾಸಿಗೆ ವಿಚ್ಛೇದನಕ್ಕೆ ಅವಕಾಶ ನೀಡಿ ಕೋರ್ಟ್​ ಆದೇಶಿಸಿದೆ. ನನ್ನ ಹೆಂಡತಿ ನನ್ನನ್ನು ನಿಂದಿಸುತ್ತಾಳೆ, ನನ್ನ ಹೆತ್ತವರು ಮತ್ತು ಇತರ ಕುಟುಂಬದ ಸದಸ್ಯರನ್ನು ಭೇಟಿಯಾಗದಂತೆ ತಡೆಯುತ್ತಾಳೆ ಎಂದು ಪತಿ ಮೊದಲಿಗೆ ಕೌಟುಂಬಿಕ ಕೋರ್ಟ್​ನಲ್ಲಿ ದೂರಿ ಅರ್ಜಿ ಸಲ್ಲಿಸಿದ್ದರು. ತಮ್ಮ ಪತಿ ಅಕ್ರಮ ಸಂಬಂಧ ಹೊಂದಿರುವ ಶಂಕೆ ಇದೆ. ಈ ಹಿನ್ನೆಲೆಯಲ್ಲಿ ಪದೇ ಪದೇ ಕಚೇರಿಗೆ ಹೋಗುತ್ತೇನೆ ಎಂದು ಪತ್ನಿ ಹೇಳಿದ್ದಳು.
ವಿಚಾರಣೆ ನಡೆಸಿದ್ದ ಕೌಟುಂಬಿಕ ಕೋರ್ಟ್​, ಡಿವೋರ್ಸ್​ ನೀಡಿ ಆದೇಶಿಸಿತ್ತು. ಈ ಆದೇಶ ಸರಿಯಲ್ಲ, ನಾನು ವಿಚ್ಛೇದನ ಕೊಡಲ್ಲ ಎಂದು ಪತ್ನಿ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದಳು. ಆದರೆ ಪತ್ನಿಯನ್ನು ಮೇಲ್ಮನವಿಯನ್ನು ನ್ಯಾಯಮೂರ್ತಿಗಳು ವಜಾ ಮಾಡಿದ್ದಾರೆ. ಕಚೇರಿಗೆ ಹೋಗಿ ನಿಂದಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮನಾಗಿರುವ ಕಾರಣ ವಿಚ್ಛೇದನಕ್ಕೆ ಅರ್ಹಳು ಎಂದಿದೆ ಕೋರ್ಟ್​.
ಬೆತ್ತಲಾಗಿ ಪೊಲೀಸರ ಕೈಗೆ ಸಿಕ್ಕಿಕೊಂಡ ನಟ ರಣವೀರ್​: 2 ಗಂಟೆ ಪೊಲೀಸ್​ ಡ್ರಿಲ್- ನಟ ಹೇಳಿದ್ದೇನು ನೋಡಿ…

ಬಹು ಚರ್ಚಿತ ‘ಜೊತೆಜೊತೆಯಲಿ’ ಧಾರಾವಾಹಿಗೆ ಬಂತು ಹೊಸಮುಖ: ಆದ್ರೆ ಇವರು ಅವರಲ್ಲ…

ಕಾಂಗ್ರೆಸ್​ ಅಧ್ಯಕ್ಷ ಗಾದಿಯ ಮೇಲೆ ಸಂಸದ ಶಶಿ ತರೂರ್​ ಕಣ್ಣು? ಕುತೂಹಲ ಕೆರಳಿಸಿದ ಬರಹ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
