ಜಂಜಗೀರ್ ಚಂಪಾ (ಛತ್ತೀಸಗಢ):ಆಟವಾಡುತ್ತಿದ್ದ ವೇಳೆ ದಿಢೀರ್​ ಎಂದು ಬೋರ್​ವೆಲ್​ನ 80 ಅಡಿ ಆಳದ ಗುಂಡಿಗೆ ಬಿದ್ದು ಅಲ್ಲಿಯೇ ಸಿಲುಕಿಕೊಂಡಿದ್ದ ಛತ್ತೀಸಗಢದ ಜಂಜಗೀರ್ ಚಂಪಾ ಗ್ರಾಮದ ಬಾಲಕ ಸುಮಾರು 100 ಗಂಟೆಗಳ ಕಾರ್ಯಾಚರಣೆಯ ಬಳಿಕ ಬದುಕಿ ಬಂದಿದ್ದಾನೆ. ಈ ಮೂಲಕ 10 ವರ್ಷದ ರಾಹುಲ್​ ಸಾಹುಲ್​ ಮರುಜೀವ ಪಡೆದುಕೊಂಡಿದ್ದಾನೆ.
ಒಂದು ಕಲ್ಲು ಒಡೆಯುವ ಯಂತ್ರ, 10 ಟ್ರ್ಯಾಕ್ಟರ್‌ಗಳು, 1 ಅಗ್ನಿಶಾಮಕ ದಳ, 3 ಪೊಕ್ಲೇನ್, 2 ಡೀಸೆಲ್ ಟ್ಯಾಂಕರ್‌ಗಳು, 3 ಜೆಸಿಬಿ, 3 ಹೈವಾ, 3 ನೀರಿನ ಟ್ಯಾಂಕರ್‌ಗಳು,1 ಹೈಡ್ರಾ,1 ಜಂಜಗಿರ್‌ನ ಪಿಹ್ರಿದ್ ಗ್ರಾಮದಲ್ಲಿ ಸಾಗಿಸುವ ಟ್ರೈಲರ್ , ಮೂರು ಪಿಕಪ್‌ಗಳು, 1 ಸಮತಲ ಟ್ರಂಕ್ ಮೇಕರ್, ಡ್ರಿಲ್ ಯಂತ್ರ, ರೋಬೋಟ್ ಯಂತ್ರ ಮತ್ತು 2 ಜನರೇಟರ್‌ಗಳನ್ನು ಕಾರ್ಯಾಚರಣೆಗೆ ಬಳಸಲಾಗಿತ್ತು. . ಸ್ಥಳದಲ್ಲಿ ಆಂಬುಲೆನ್ಸ್ ಕೂಡ ನಿಯೋಜಿಸಲಾಗಿತ್ತು.
ಕಳೆದ ಶುಕ್ರವಾರ ದುರ್ಘಟನೆ ಸಂಭವಿಸಿತ್ತು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಾಲಕ ಮನೆಯ ಹಿಂಭಾಗದಲ್ಲಿ ಆಡುತ್ತಿದ್ದ ವೇಳೆ ಅಚಾನಕ್​ ಆಗಿ ಕೊಳವೆಬಾವಿಗೆ ಬಿದ್ದಿದ್ದಾನೆ. ರಾಹುಲ್ ತಂದೆ ಲಾಲಾ ಸಾಹು ಅವರು ತಮ್ಮ ಮನೆಯ ಆವರಣದಲ್ಲಿ ನೀರಿನ ವ್ಯವಸ್ಥೆಗಾಗಿ ಬೋರ್​ವೆಲ್​ ಕೊರಿಸಿದ್ದರು. ಈ ಬೋರ್​ವೆಲ್​ಗೆ ಕವಚವನ್ನು ಅಳವಡಿಸಲಾಗಿತ್ತು. ಆದರೆ ಬೋರ್‌ನಲ್ಲಿನ ದೋಷದಿಂದಾಗಿ ಅದರ ಕೇಸಿಂಗ್ ಪೈಪ್ ಅನ್ನು ತೆಗೆದುಹಾಕಲಾಗಿತ್ತು. 80 ಅಡಿ ಆಳದ ಬೋರ್‌ವೆಲ್‌ ಇದಾಗಿದ್ದು, ಬಾಲಕ 60 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ.
ವಿಷಯ ತಿಳಿಯುತ್ತಲೇ ಭಾರತೀಯ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ಜಿಲ್ಲಾಡಳಿತ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದವು. ಆಮ್ಲಜನಕ ಪೂರೈಕೆಗಾಗಿ ಪೈಪ್ ಲೈನ್ ಅಳವಡಿಸಲಾಗಿತ್ತು. 500ಕ್ಕೂ ಹೆಚ್ಚು ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು ಈಗ ಬಾಲಕನನ್ನು ರಕ್ಷಿಸಿದ್ದಾರೆ.
ಮೊದಲ ಹಂತದ ರೊಬೊಟಿಕ್ ರಕ್ಷಣಾ ಕಾರ್ಯಾಚರಣೆ ವಿಫಲವಾದ ಹಿನ್ನೆಲೆ ಸುರಂಗ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಸುರಂಗವನ್ನು ನಿರ್ಮಿಸಲು ಅಧಿಕಾರಿಗಳ ಜತೆ ಚರ್ಚೆ ನಡೆಸಲಾಯಿತು. ಜಿಲ್ಲಾಧಿಕಾರಿ ಜಿತೇಂದ್ರ ಶುಕ್ಲಾ ಸೇರಿದಂತೆ ಎಲ್ಲ ಅಧಿಕಾರಿಗಳು ಈ ವೇಳೆ ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಶೀಲನೆ ನಡೆಸಿದ್ದರು. ಕೊನೆಗೂ ಬಾಲಕ ಬದುಕಿ ಬಂದಿದ್ದಾನೆ.
ಎಲ್ಲರ ಪ್ರಾರ್ಥನೆ ಮತ್ತು ರಕ್ಷಣಾ ತಂಡದ ನಿರಂತರ ಪ್ರಯತ್ನಗಳಿಂದ, ರಾಹುಲ್ ಸಾಹು ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಬಾಲಕ ಆದಷ್ಟು ಬೇಗ ಸಂಪೂರ್ಣ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಛತ್ತೀಸಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಟ್ವೀಟ್ ಮಾಡಿದ್ದಾರೆ.
ನಾವು ಗೆದ್ದಿದ್ದೇವೆ, ನಮ್ಮ ತಂಡ ಗೆದ್ದಿದೆ. ಇದು ಸವಾಲಿನ ಪರಿಸ್ಥಿತಿಯಾಗಿತ್ತು. ಆಡಳಿತದಿಂದ ನಮಗೆ ಎಲ್ಲಾ ರೀತಿಯ ನೆರವು ನೀಡಲಾಯಿತು. ಸಿಎಂ ಭೂಪೇಶ್ ಬಾಘೇಲ್ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದರು. ನಾವು ರಾಹುಲ್ ಅನ್ನು ನೇರವಾಗಿ ಬಿಲಾಸ್‌ಪುರದ ಅಪೋಲೋ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಹೇಳಿಕೆ ನೀಡಿದ್ದಾರೆ. ಸದ್ಯ ಬಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಇರಿಸಲಾಗಿದೆ.
ಇಲ್ಲಿದೆ ನೋಡಿ ಕಾರ್ಯಾಚರಣೆಯ ವಿಡಿಯೋ:
Chhattisgarh | Rescue operation continues for the retrieval of 10-year-old Rahul who fell into a borewell in Pihrid village of Janggir-Champa district. A new tunnel is being dug up for his rescue.Video source: District Administrationpic.twitter.com/DohrdTWp1C— ANI MP/CG/Rajasthan (@ANI_MP_CG_RJ)June 14, 2022
Chhattisgarh | Rescue operation continues for the retrieval of 10-year-old Rahul who fell into a borewell in Pihrid village of Janggir-Champa district. A new tunnel is being dug up for his rescue.Video source: District Administrationpic.twitter.com/DohrdTWp1C
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 3 =
Remember me
