ಬಿಲಾಸಪುರ್ (ಛತ್ತೀಸಗಢ):ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಶೇ.58ರಷ್ಟು ಮೀಸಲಾತಿಯನ್ನು ನೀಡುವ ಸಂಬಂಧ ಸರ್ಕಾರ ಹೊರಡಿಸಿರುವ ಆದೇಶವನ್ನು ಛತ್ತೀಸಗಢ ಹೈಕೋರ್ಟ್​ ರದ್ದು ಮಾಡಿದೆ. ನಿಯಮದ ಪ್ರಕಾರ ಶೇ.50ರಷ್ಟು ಮೀಸಲಾತಿ ಇರಬೇಕು. ಇದನ್ನು ಮೀರಿದ ಹಿನ್ನೆಲೆಯಲ್ಲಿ ಈ ಮೀಸಲಾತಿಯ ಅಸಂವಿಧಾನಿಕ ಎಂದು ಮುಖ್ಯ ನ್ಯಾಯಮೂರ್ತಿ ಅರುಪ್ ಕುಮಾರ್ ಗೋಸ್ವಾಮಿ ನೇತೃತ್ವದ ಪೀಠ ಹೇಳಿದೆ.
2012ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಮೀಸಲಾತಿ ನಿಯಮಗಳನ್ನು ತಿದ್ದುಪಡಿ ಮಾಡಲಾಗಿತ್ತು. ಅದನ್ನು ಗುರು ಘಾಸಿದಾಸ್ ಸಾಹಿತ್ಯ ಸಮಿತಿ ಮತ್ತು ಇತರರು ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದರು. ಈ ತಿದ್ದುಪಡಿಯ ಪ್ರಕಾರ ಪರಿಶಿಷ್ಟ ಜಾತಿಗಳ ಕೋಟಾವನ್ನು ಶೇಕಡಾ 4 ರಷ್ಟು ಕಡಿತಗೊಳಿಸಿ ಶೇ. 12ಕ್ಕೆ ಇಳಿಸಲಾಯಿತು. ಆದರೆ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ. 12 ರಷ್ಟು ಹೆಚ್ಚಿಸಲಾಗಿತ್ತು. ಮೊದಲು ಇದ್ದ ಶೇ.20 ರಿಂದ ಶೇ.32ಕ್ಕೆ ಅದನ್ನು ಏರಿಸಲಾಗಿತ್ತು. ಒಬಿಸಿ ಮೀಸಲಾತಿಯನ್ನು ಶೇ. 14ಕ್ಕೆ ಯಥಾಸ್ಥಿತಿಯಲ್ಲಿ ಇರಿಸಲಾಗಿತ್ತು.
ತಿದ್ದುಪಡಿಯ ನಂತರ ರಾಜ್ಯದಲ್ಲಿ ಸಂಚಿತ ಮೀಸಲಾತಿಯು ಶೇಕಡಾ 50ರ ಮಿತಿಯನ್ನು ಮೀರಿ ಶೇಕಡಾ 58ಕ್ಕೆ ಏರಿಕೆಯಾಯಿತು. ಮೀಸಲಾತಿ ಪ್ರಮಾಣ ಶೇ 50 ಮೀರಿರುವುದರಿಂದ ಸಂವಿಧಾನದ 16(1)ನೇ ಪರಿಚ್ಛೇದದ ಅಡಿಯಲ್ಲಿ ಸಮಾನತೆಯ ತತ್ವಗಳನ್ನು ಉಲ್ಲಂಘಿಸಲಾಗಿದೆ ಎಂಬ ವಕೀಲರ ವಾದವನ್ನು ಕೋರ್ಟ್ ಮಾನ್ಯ ಮಾಡಿದೆ.(ಏಜೆನ್ಸೀಸ್​)

ಕೇಂದ್ರ ಸಚಿವ ರಾಣೆಗೆ ಬಿಗ್​ ಶಾಕ್​! ಬಂಗಲೆ ಕೆಡವಲು ಹೈಕೋರ್ಟ್​ ಆದೇಶ, 10 ಲಕ್ಷ ರೂ. ದಂಡ
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:18 − one =
Remember me
