ಗಾಂಗ್ಟಕ್ (ಸಿಕ್ಕಿಂ):ತಾನು ಮುದ್ದಿನಿಂದ ಸಾಕಿರುವ ಕೋಳಿ ಮರಿಗಳನ್ನು ಪಾಲಕರು ಮಾರಾಟ ಮಾಡುತ್ತಿರುವುದನ್ನು ನೋಡಲಾಗದೇ ಪುಟ್ಟ ಬಾಲಕ ಕಣ್ಣೀರು ಹಾಕುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
ನನ್ನ ಕೋಳಿ ಮರಿಗಳನ್ನು ಮಾರಬೇಡಿ, ಅವು ನನಗೆ ಬೇಕು ಎಂದು ಈ ಬಾಲಕ ಅಳುತ್ತಿದ್ದಾನೆ. ಈತನ ಕುಟುಂಬದ ಉದ್ಯೋಗ ಕೋಳಿಗಳನ್ನು ಸಾಕಿ ಅದನ್ನು ಮಾರುವುದು. ಆದರೆ ಕೆಲವು ಕೋಳಿಗಳ ಜತೆ ಬಾಲಕನ ಒಡನಾಟ ಹೆಚ್ಚಾಗಿಬಿಟ್ಟಿದೆ. ದಿನವೂ ಅದರ ಜತೆಗೇ ಕಾಲ ಕಳೆಯುತ್ತಿದ್ದ ಈ ಬಾಲಕನಿಗೆ ಅದನ್ನು ಸಾಕಿದ್ದು ಬೇರೆಯವರು ಕಡಿದು ತಿನ್ನಲು ಎನ್ನುವ ಬಗ್ಗೆ ತಿಳಿದಿಲ್ಲ.
ಅದನ್ನು ಪಾಲಕರು ಮಾರಾಟ ಮಾಡಿದ್ದಾರೆ. ವ್ಯಾನ್‌ನಲ್ಲಿ ಅವುಗಳನ್ನು ತುಂಬಿಸಿಕೊಳ್ಳಲಾಗಿದೆ. ಆದರೆ ತನ್ನ ಆಪ್ತ ಸ್ನೇಹಿತರು ತನ್ನನ್ನು ಬಿಟ್ಟು ಹೋಗುವುದನ್ನು ಈ ಕಂದನಿಗೆ ನೋಡಲಾಗುತ್ತಿಲ್ಲ. ರಸ್ತೆ ಮೇಲೆಯೇ ಕುಳಿತು ಬಿಕ್ಕಿ ಬಿಕ್ಕಿ ಅಳುತ್ತಿದ್ದಾನೆ. ಇದೀಗ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಕಂದನ ಕಣ್ಣೀರಿಗೆ ನೆಟ್ಟಿಗರು ಕರಗಿಹೋಗಿದ್ದಾರೆ. ಈ ಕಂದನಿಗಿರುವ ಬುದ್ಧಿ ದೊಡ್ಡವರಿಗೆ ಇಲ್ಲ, ಇನ್ನಾದರೂ ಮಾಂಸ ತಿನ್ನುವುದನ್ನು ಬಿಡಿ ಎಂದು ಸಸ್ಯಾಹಾರಿಗಳು ಕಮೆಂಟ್‌ ಮಾಡಿದ್ದರೆ. ಇನ್ನು ಕೆಲವರು ಪಾಪ ಈ ಕೋಳಿಗಳನ್ನು ಕಡಿಯುವುದನ್ನು ನೋಡಿದರೆ ಈ ಬಾಲಕ ಇನ್ನೇನು ಮಾಡುತ್ತಿದ್ದನೋ ಎಂದು ಹೇಳಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ: (ಕೃಪೆ ಜಮ್ಮು ಲಿಂಕ್ಸ್‌)

ಮಗನ ವಯಸ್ಸಿನವನ ಜತೆ ಪತ್ನಿಯ ಕಾಮದಾಟಕ್ಕೆ ಬಲಿಯಾದ ಮಂಡ್ಯದ ಉಪ ಪ್ರಾಂಶುಪಾಲ! ಕೊಲೆ ರಹಸ್ಯ ಬಯಲು..

ದಿನದಿಂದ ದಿನಕ್ಕೆ ಕಲ್ಲಾಗುತ್ತಿದ್ದಾಳೆ ಈ ಮುದ್ದು ಕಂದಮ್ಮ- ಇವಳದ್ದು ಕಣ್ಣೀರ ಕಥೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 − 1 =
Remember me
