ನವದೆಹಲಿ:ನಕಲಿ ಪಾಸ್‌ಪೋರ್ಟ್‌ ಮೂಲಕ ಭಾರತಕ್ಕೆ ನುಸುಳಿ ಇಲ್ಲಿ ಹವಾಲಾ ದಂಧೆ ನಡೆಸುತ್ತಿದ್ದ ಚೀನಿ ವ್ಯಕ್ತಿಯೊಬ್ಬ, ಟಿಬೆಟಿಯನ್‌ ಬೌದ್ಧಗುರು ದಲೈ ಲಾಮಾ ವಿರುದ್ಧ ಬೇಹುಗಾರಿಕೆ ನಡೆಸುತ್ತಿರುವ ವಿಷಯ ಬೆಳಕಿಗೆ ಬಂದಿದೆ.
ಅಕ್ರಮ ಹಣ ವರ್ಗಾವಣೆ ಮತ್ತು ಹವಾಲಾ ದಂಧೆ ಆರೋಪದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಬಲೆಗೆ ಬಿದ್ದಿರುವ ಲ್ಯೂ ಸಾಂಗ್‌ ಎಂಬ ಚೀನಾದವ, ದಲೈ ಲಾಮಾ ಮೇಲೆ ಕಣ್ಣಿಟ್ಟಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಭಾರತದಲ್ಲಿ ವಾಸವಿದ್ದ ಹಲವು ಟಿಬೆಟಿಯನ್‌ ಬೌದ್ಧರಿಗೆ ಈತ ಲಂಚ ನೀಡಿದ್ದ. ಅಲ್ಲದೆ, ದೆಹಲಿಯ ಮಜುಕಾಟೀಲಾ ಬಳಿ ಹಲವರಿಗೆ 2- 3 ಲಕ್ಷ ರೂಪಾಯಿ ಅಕ್ರಮ ಹಣ ನೀಡಿದ್ದ. ಈ ಮೂಲಕ ದಲೈ ಲಾಮಾ ಮತ್ತು ಸಹಚರರ ವಿಚಾರಗಳನ್ನು ಕಲೆಹಾಕುತ್ತಿದ್ದ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ದೆಹಲಿಯಲ್ಲಿ ಇತ್ತೀಚೆಗಷ್ಟೇ ಚೀನೀ ಹವಾಲಾ ಕಂಪನಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಚಾರ್ಲಿ ಪೆಂಗ್‌ ಎಂಬ ಹೆಸರಿನಿಂದ ಕಾರ್ಯನಿರ್ವಹಿಸುತ್ತಿದ್ದ ಲ್ಯೂಸಾಂಗ್‌ ಎಂಬಾತನನ್ನೂ ಈ ವೇಳೆ ಬಂಧಿಸಿದ್ದರು.
ಆತನನ್ನು ವಿಚಾರಣೆ ನಡೆಸಲಾಗುತ್ತಿತ್ತು. ಇದೀಗ ಈ ವಿಷಯ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಜಪಾನ್ ಪ್ರಧಾನಿ ಶಿಂಜೋ ಅಬೆ ಆಸ್ಪತ್ರೆಗೆ ದಾಖಲು
ನೇಪಾಳ ಮೂಲಕ ಪಾಸ್‌ಪೋರ್ಟ್‌ ಇಲ್ಲದೇ ಅಕ್ರಮವಾಗಿ 2014ರಲ್ಲಿ ಭಾರತವನ್ನು ಪ್ರವೇಶಿಸಿದ್ದ ಲ್ಯೂ ಸಾಂಗ್‌ ಮಿಝೋರಾಂನ ಮಹಿಳೆಯನ್ನು ವಿವಾಹವಾಗಿದ್ದ. ನಕಲಿ ಆಧಾರ್‌ ಕಾರ್ಡ್‌ ಕೂಡ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ. 2018ರಲ್ಲಿ ಗೂಢಚಾರ ನಡೆಸಿದ ಆರೋಪ ಕೂಡ ಈತ ಎದುರಿಸಿದ್ದ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ವೀ ಚ್ಯಾಟ್‌ ಮೂಲಕ ಸಂವಹನ ನಡೆಸುತ್ತಿದ್ದ ಈತ ಚಾರ್ಟರ್ಡ್‌ ಅಕೌಂಟಂಟ್ ಮೂಲಕ 40ಕ್ಕೂ ಹೆಚ್ಚು ಬ್ಯಾಂಕ್‌ ಖಾತೆಗಳನ್ನು ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ. ಕೊರಿಯರ್‌ ಮೂಲಕ ಅಕ್ರಮ ಹಣ ಕಳುಹಿಸುತ್ತಿದ್ದ. ಈತನಿಗೆ ನೆರವಾದ ದೆಹಲಿ ಮೂಲದ ಚಾರ್ಟೆಡ್‌ ಅಕೌಂಟೆಂಟ್‌ನನ್ನೂ ಬಂಧಿಸಲಾಗಿದೆ.
ಹಿಂದು ದೇವರ ಬಗ್ಗೆ ಕೆಟ್ಟ ಪೋಸ್ಟ್ ಹಾಕಿದ್ರು, ಅವರಿಗೆ ತಿರುಗೇಟು ನೀಡುವಂತೆ ಕಮೆಂಟ್ ಮಾಡಿದ್ದಕ್ಕೆ ಈ ರಾದ್ಧಾಂತ ಎಂದ ನವೀನ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 3 =
Remember me
