ಪಾಲಕ್ಕಾಡ್:ಜನರು ಹೆಚ್ಚೆಚ್ಚು ಶಿಕ್ಷಿತರಾದಷ್ಟೂ ಮೌಢ್ಯವೂ ಹೆಚ್ಚುತ್ತಿದೆ ಎನ್ನುವುದಕ್ಕೆ ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಭೀಕರ ಘಟನೆ ಸಾಕ್ಷಿಯಾಗಿತ್ತು. ಪ್ರಾಂಶುಪಾಲ ಹಾಗೂ ಗೋಲ್ಡ್‌ಮೆಡಲಿಸ್ಟ್‌ ದಂಪತಿ ಮೌಢ್ಯದ ಹೆಸರಿನಲ್ಲಿ ವಯಸ್ಸಿಗೆ ಬಂದ ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಕೊಲೆ ಮಾಡಿದ್ದರು. ಇದೀಗ ಅಂಥದ್ದೇ ಒಂದು ಭಯಾನಕ ಘಟನೆ ಕೇರಳದ ಪಾಲಕ್ಕಾಡ್‌ನಲ್ಲಿ ನಡೆದಿದೆ.
ಅಲ್ಹಾನನ್ನು ಮೆಚ್ಚಿಸುವುದಕ್ಕಾಗಿ ಗರ್ಭಿಣಿ ಶಿಕ್ಷಕಿಯೊಬ್ಬರು ತಮ್ಮ ಆರು ವರ್ಷದ ಮಗುವನ್ನು ಕೊಲೆ ಮಾಡಿದ್ದಾಳೆ! 30 ವರ್ಷದ ಮದರಸಾ ಶಿಕ್ಷಕಿ ಶಾಹಿದಾ ಇಂಥದ್ದೊಂದು ಕೃತ್ಯ ಎಸಗಿದ್ದಾರೆ. ತನ್ನ ಮಗನನ್ನು ಅಲ್ಲಾಹನಿಗೆ ಅರ್ಪಿಸಿದ್ದೇನೆ ಎಂದು ಕೊಲೆ ಮಾಡಿರುವುದಾಗಿ ಪೊಲೀಸರ ಎದುರು ಮಹಿಳೆ ಹೇಳಿದ್ದಾಳೆ.
ಗಲ್ಫ್‌ನಿಂದ ಹಿಂದಿರುಗಿದ ಪತಿ ಇನ್ನಿಬ್ಬರು ಗಂಡು ಮಕ್ಕಳೊಂದಿಗೆ ಮತ್ತೊಂದು ಕೋಣೆಯಲ್ಲಿ ಮಲಗಿದ್ದರು. ಮುಂಜಾನೆ 4 ಗಂಟೆ ಸುಮಾರಿಗೆ ಈ ಕೃತ್ಯ ನಡೆದಿದೆ. ಮಹಿಳೆಗೆ ಮೂವರು ಗಂಡು ಮಕ್ಕಳಿದ್ದು, ಪುನಃ ಗರ್ಭಿಣಿಯಾಗಿದ್ದಾರೆ. ತನ್ನ ಕೊನೆಯ ಮಗುವನ್ನು ಇವರು ಕೊಲೆ ಮಾಡಿದ್ದಾರೆ. ನಸುಕಿನಲ್ಲಿ ಮಗುವನ್ನು ಬಾತ್‌ರೂಂಗೆ ಕರೆದುಕೊಂಡು ಹೋಗಿ ಕೈಕಾಲುಗಳನ್ನು ಕಟ್ಟಿ ನಂತರ ಕತ್ತು ಸೀಳಿ ಕೊಲೆ ಮಾಡಿದ್ದಾಳೆ.
ಕೊಲೆ ಮಾಡಿದ ಬಳಿಕ ಪಾಲಕ್ಕಾಡ್ ಎಮೆರ್ಜೆನ್ಸಿ ಕಂಟ್ರೋಲ್​ ರೂಮ್​ಗೆ ಕರೆ ಮಾಡಿ, ತಾನು ಎಸಗಿದ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ಈ ಘಟನೆ ನಡೆದಿರುವುದು ಮುಂಜಾನೆ 3ರಿಂದ 4 ಗಂಟೆ ಸಮಯದಲ್ಲಿ. ಈ ವಿಷಯ ಪಕ್ಕದ ಕೋಣೆಯಲ್ಲೇ ಮಲಗಿದ್ದ ಗಂಡ ಮತ್ತು ಇನ್ನಿಬ್ಬರು ಮಕ್ಕಳಿಗೆ ತಿಳಿದಿರಲಿಲ್ಲ.
ಪೊಲೀಸರು ಬರುವ ವೇಳೆ ಮಗುವಿನ ಮೃತದೇಹವು ಸ್ನಾನದ ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಕೊಲೆ ಆರೋಪಿತೆ ಶಾಹಿದಾ ಮೇಲೆ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈಕೆ ಅಲ್ಲಾಹನಿಗೆ ತ್ಯಾಹ ಮಾಡಲು ಈ ಕೊಲೆ ಮಾಡಿದ್ದಾಳೋ ಅಥವಾ ಬೇರೆ ಕಾರಣಕ್ಕೋ ಎಂಬುದನ್ನು ತನಿಖೆ ನಡೆಸಿದ ನಂತರವೇ ನಿರ್ಧರಿಸಲಾಗುತ್ತದೆ ಎಂದು ಎಸ್​​ಪಿ ಆರ್​. ವಿಶ್ವನಾಥ್ ತಿಳಿಸಿದ್ದಾರೆ.
ಬಿಜೆಪಿ ಮುಖಂಡನ ಮುಖಕ್ಕೆ ಮಸಿ ಬಳಿದರೆ ಲಕ್ಷ ಬಹುಮಾನ: ಕಾಂಗ್ರೆಸ್‌ ನಾಯಕಿ ಘೋಷಣೆ

ಬೆಂಗಳೂರಿಗೆ ಬೈ ಬೈ: ಜ್ಯೋತಿಷಿಯ ಅಣತಿಯಂತೆ ಚೆನ್ನೈನತ್ತ ಚಿನ್ನಮ್ಮ- ಕುಂಬಳಕಾಯಿ ಸ್ವಾಗತ

ಪತ್ನಿ, ಲವರ್‌ ಮಧ್ಯೆ ಸಿಲುಕಿ ಹೈರಾಣಾಗಿದ್ದೇನೆ, ಇಬ್ಬರೂ ಬೇಕು… ಏನು ಮಾಡಲಿ?

ಬಾಹ್ಯಾಕಾಶದಲ್ಲಿ ಘಮಘಮಿಸಲಿದೆ ಮೈಸೂರಿನ ಎಗ್‌ರೋಲ್ಸ್, ವೆಜ್‌ರೋಲ್ಸ್, ಇಡ್ಲಿ, ಹಲ್ವಾ‌…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + sixteen =
Remember me
