ಚೆನ್ನೈ:ಮಗುವಿಗೆ ದೆವ್ವ ಹಿಡಿದಿರುವುದಾಗಿ ಸ್ವಾಮೀಜಿಯೊಬ್ಬ ಹೇಳಿದ ಕಾರಣಕ್ಕೆ ಜ್ವರದಿಂದ ಬಳಲುತ್ತಿರುವ ಏಳು ವರ್ಷದ ಮಗುವನ್ನು ತಾಯಿಯೇ ಕೊಲೆ ಮಾಡಿರುವ ಭಯಾನಕ ಘಟನೆ ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಅರಾನಿಯಲ್ಲಿ ನಡೆದಿದೆ.
ಬಾಲಕನಿಗೆ ಕೆಲವು ದಿನಗಳಿಂದ ಆರೋಗ್ಯ ಕೆಟ್ಟಿತ್ತು. ಮಾನಸಿಕವಾಗಿಯೂ ಆತನಿಗೆ ಏನೋ ಸಮಸ್ಯೆಯಾಗಿತ್ತು.. ಆಸ್ಪತ್ರೆಗೆ ಹೋಗುವ ಬದಲು ಈ ತಾಯಿ ಸ್ವಾಮೀಜಿಯನ್ನು ಭೇಟಿಯಾಗಿದ್ದಾಳೆ. ಆತನಿಗೆ ದೆವ್ವ ಹಿಡಿದಿದೆ ಎಂದು ಆತ ಹೇಳಿದ್ದಾನೆ.
ಮನೆಗೆ ಬಂದವಳೇ ಮಗನನ್ನು ಹಿಗ್ಗಾಮುಗ್ಗ ಥಳಿಸಿದ ತಾಯಿ, ಮೂರು ದಿನಗಳಿಂದ ಆತನಿಗೆ ಆಹಾರ ನೀಡದೇ ಪೀಡಿಸಿದ್ದಾಳೆ. ಸಾಲದು ಎಂಬುದಕ್ಕೆ ಇದಕ್ಕೆ ನೆರೆಹೊರೆಯ ಇನ್ನಿಬ್ಬರು ಮಹಿಳೆಯರು ಸಹಕರಿಸಿದ್ದಾರೆ! ಹೀಗೆ ಮಾಡಿದರೆ ಮಗನ ಮೈಮೇಲೆ ಇರುವ ಭೂತ ಹೊರಟುಹೋಗುತ್ತದೆ ಎಂದು ನಂಬಿದ್ದಾಳೆ. ಇದರಿಂದ ಮಗು ನರಳಿ ನರಳಿ ಸತ್ತು ಹೋಗಿದೆ.
ಘಟನೆಯ ಬಗ್ಗೆ ತಿಳಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ತಲುಪುವ ಮೊದಲೇ ಬಾಲಕ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತಾಯಿ ಹಾಗೂ ಇಬ್ಬರು ಮಹಿಳೆಯರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
https://www.vijayavani.net/s-british-woman-abbie-bela-says-she-fell-in-love-with-alien/
ಅಪಘಾತದಲ್ಲಿ ಸತ್ತವನ ಡಿಎನ್‌ಎ ಆಯ್ತು ಮ್ಯಾಚ್‌- 10 ವರ್ಷಗಳ ಬಳಿಕ ಪ್ರತ್ಯಕ್ಷನಾದವ ಯಾರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − five =
Remember me
