ವಾಷಿಂಗ್ಟನ್​:ಈ ಚಿತ್ರದಲ್ಲಿ ಕಾಣಿಸುತ್ತಿರುವ ಪುಟಾಣಿಯ ಹೆಸರು ಬ್ರಿಗ್ಸ್​. ಅಮೆರಿಕದ ವಾಷಿಂಗ್ಟನ್‌ ನಿವಾಸಿಯಾಗಿರುವ ಈ ಮಗುವಿಗೆ ಸರಿಸುಮಾರು ಒಂದು ವರ್ಷ ವಯಸ್ಸು. ಆದರೆ ಈ ವಯಸ್ಸಿನಲ್ಲಿಯೇ ಈ ಮಗು ತಿಂಗಳಿಗೆ ಏನಿಲ್ಲವೆಂದರೂ 75 ಸಾವಿರ ರೂಪಾಯಿ ಸಂಪಾದನೆ ಮಾಡುತ್ತದೆ!
ಕೇಳಲು ಅಚ್ಚರಿ ಎನಿಸಿದರೂ ಇದು ನಿಜ. ಅಷ್ಟೇ ಅಲ್ಲದೇ ಇದಾಗಲೇ 45 ಸಲ ವಿಮಾನದಲ್ಲಿ ಹಲವಾರು ದೇಶಗಳನ್ನು, ಅಮೆರಿಕದ ಹಲವು ರಾಜ್ಯಗಳನ್ನು ಸುತ್ತಿ ಬಂದಿದ್ದಾನೆ ಈ ಪೋರ. ಈ ಸುತ್ತಾಣವೇ ಈತನ ಆದಾಯದ ಮೂಲ. ಅದ್ಹೇಗೆ ಅಂತೀರಾ?
ಹೀಗೆ ಸುತ್ತಾಡುವ ವೇಳೆ ಈತನ ತಾಯಿ ಜೇಸ್‌ ಪುಟಾಣಿಯ ವಿವಿಧ ಭಂಗಿಗಳ ಹಲವಾರು ರೀತಿಯ ವಿಡಿಯೋಗಳನ್ನು ಮಾಡಿಕೊಳ್ಳುತ್ತಿದ್ದಾಳೆ. ಮಗುವಿನ ಆಟೋಟ ಮಾತ್ರವಲ್ಲದೇ ಅದು ಮಲಗುವುದು ಹೇಗೆ? ತಿರುಗಾಟದ ವೇಳೆ ತಾನು ಮಗುವಿಗಾಗಿ ಬಳಸುವ ವಸ್ತುಗಳು ಏನೇನು? ಅದನ್ನು ಹೇಗೆ ಉಪಯೋಗಿಸುತ್ತೇನೆ, ಇದರಿಂದ ಮಗುವಿಗೆ ಹೇಗೆ ಪ್ರಯೋಜನವಾಗುತ್ತದೆ? ಮಗು ತಿರುಗಾಟದ ವೇಳೆ ಏನೆಲ್ಲಾ ಚೇಷ್ಠೆಗಳನ್ನು ಮಾಡುತ್ತದೆ ಇತ್ಯಾದಿ ಸಂಪೂರ್ಣ ಮಾಹಿತಿಗಳ ವಿಡಿಯೋ ಮಾಡುತ್ತಾಳೆ ಜೇಸ್‌. ಅಷ್ಟೇ… ಇದನ್ನು ತನ್ನ ಇನ್ಸ್‌ಸ್ಟಾಗ್ರಾಂ. ಯೂಟ್ಯೂಬ್‌ಗಳಲ್ಲಿ ಹಾಕುತ್ತಾಳೆ.
ಈ ಮುದ್ದುಮೊಗದ ಕಂದನ ಚೇಷ್ಠೆ, ತುಂಟಾಟ ಹಾಗೂ ಆಟೋಟಗಳನ್ನು ನೋಡಲು ಜನರು ಕಾತರದಿಂದ ಕಾಯುತ್ತಿರುತ್ತಾರೆ. ಈ ಇನ್ಸ್‌ಸ್ಟಾಗ್ರಾಂನಲ್ಲಿ 30 ಸಾವಿರಕ್ಕೂ ಹೆಚ್ಚು ಜನ ಫಾಲೋವರ್ಸ್​ ಇದ್ದು, ಯುಟ್ಯೂಬ್‌ನಲ್ಲಿಯೇ ಸಾವಿರಾರು ಅಭಿಮಾನಿಗಳು ಇದ್ದಾರೆ. ಅವರು ಈ ವಿಡಿಯೋಗಳನ್ನು ಶೇರ್‌ ಮಾಡಿಕೊಳ್ಳುತ್ತಾರೆ.
ಹೀಗೆ ಲಕ್ಷ ಲಕ್ಷ ವೀಕ್ಷಣೆ ಬಂದು ಜಾಹೀರಾತು ಭರಪೂರ ಬಂದು ಕನಿಷ್ಠ 75 ಸಾವಿರ ರೂಪಾಯಿಗಳನ್ನು ಸಂಪಾದನೆ ಮಾಡುತ್ತಿದ್ದಾಳೆ. ಇದು ನಾನು ದುಡಿಯುತ್ತಿರುವುದು ಅಲ್ಲ, ಬದಲಿಗೆ ಇವೆಲ್ಲವೂ ನನ್ನ ಕಂದನಿಗೆ ಸೇರಬೇಕಾದದ್ದು ಎನ್ನುತ್ತಾಳೆ ಜೇಸ್‌. ಇದು ನಿಜ ಕೂಡ. ಹೀಗೆ ಒಂದು ವರ್ಷದ ಬ್ರಿಗ್ಸ್​ ಈಗಾಗಲೇ ಇಷ್ಟೊಂದು ಸಂಪಾದನೆ ಮಾಡುತ್ತಿದ್ದಾನೆ.


A post shared by Baby Travel With Briggs (@whereisbriggs)


ಸ್ನಾನನೂ ಮಾಡ್ತಿಲ್ಲ, ಶೌಚಕ್ಕೂ ಹೋಗ್ತಿಲ್ಲ- ಅಧಿಕಾರಿಗಳಿಗೆ ತಲೆನೋವು ತಂದ ಶಾರುಖ್‌ ಪುತ್ರ

ಪ್ರಿಯಾಂಕಾ ಗಾಂಧಿ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಮಹಿಳಾ ಕಾನ್ಸ್‌ಟೆಬಲ್‌ಗಳಿಗೆ ಗ್ರಹಚಾರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 11 =
Remember me
