ಪುಟ್ಟ ಮಕ್ಕಳಿಗೆ ಏನೂ ತಿಳಿಯುವುದಿಲ್ಲ ಎಂದು ಅಂದುಕೊಳ್ಳುವವರೇ ಹೆಚ್ಚು. ಅಂಥವರು ಈ ವಿಡಿಯೋ ನೋಡಿದರೆ ನಿಬ್ಬೆರಗಾಗುವುದು ಗ್ಯಾರೆಂಟಿ. ಆರು ಮಹಿಳೆಯರು ಒಂದೇ ತೆರನಾದ ಸೀರೆಯುಟ್ಟು ಕುಳಿತುಕೊಂಡರೂ ಅವರ ನಡುವೆ ಪುಟ್ಟ ಕಂದ ತಮ್ಮ ಅಮ್ಮನನ್ನು ಹುಡುಕಿ ಹೋಗಿರುವ ವಿಡಿಯೋ ಇದಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಇದಾಗಲೇ 18 ಲಕ್ಷಕ್ಕೂ ಅಧಿಕ ಮಂದಿ ಇದನ್ನು ನೋಡಿದ್ದಾರೆ.
ಈ ವಿಡಿಯೋದಲ್ಲಿ ಈ ವಿಡಿಯೋದಲ್ಲಿ ಆರು ಮಹಿಳೆಯರು ಒಂದೇ ಬಣ್ಣದ ಸೀರೆ ಧರಿಸಿ ಕುಳಿತಿದ್ದಾರೆ. ಮುಖಕ್ಕೆ ಸೆರಗು ಹಾಕಿರೋದರಿಂದ ಮಗುವಿಗೆ ತಾಯಿ ಮುಖ ಕಾಣಲ್ಲ. ಓಡಿ ಬರುವ ಕಂದ ಒಂದೇ ರೀತಿಯಾಗಿರುವ ಮಹಿಳೆಯರನ್ನು ನೋಡಿ ಅಚ್ಚರಿಗೊಳಗಾಗಿ, ಅಮ್ಮನಿಗಾಗಿ ಹುಡುಕಾಟ ನಡೆಸುತ್ತದೆ.
ಮೊದಲಿಗೆ ಓರ್ ಮಹಿಳೆ ಬಳಿ ಬರುವ ಮಗು ಬರುತ್ತದೆ. ಆದರೆ ಆಕೆಯ ಸ್ಪರ್ಶದಿಂದಲೇ ಅಮ್ಮ ಅಲ್ಲ ಎಂದು ತಿಳಿದು ವಾಪಸ್​ ಬರುತ್ತದೆ. ಕೊನೆಗೆ ಎಲ್ಲರನ್ನೂ ಮುಟ್ಟಿ ಮುಟ್ಟಿ ಕೊನೆಗೆ ತನ್ನ ಅಮ್ಮನನ್ನು ಹುಡುಕಲು ಮಗು ಸಕ್ಸಸ್​ ಆಗಿದೆ.
ಮಾರ್ಚ್ 6ರಂದು ಈ ವಿಡಿಯೋವನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದ್ದು, 18 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಅಮ್ಮ- ಮಗುವಿನ ಈ ವಿಡಿಯೋಗೆ ನೆಟ್ಟಿಗರು ಫಿದಾ ಆಗಿದ್ದಾರೆ.


A post shared by SFT (@status.fan.tranding)

ಎಡಗೈಯಲ್ಲಿ ಊಟ ಮಾಡಿದ ವಧು! ರೊಚ್ಚಿಗೆದ್ದು ಹೊರ ನಡೆದೇಬಿಟ್ಟ ವರ… ದಾಂಡೇಲಿಯಲ್ಲೊಂದು ಘಟನೆ…

ಉ. ಪ್ರದೇಶದಲ್ಲಿ 36 ಮುಸ್ಲಿಂ ಅಭ್ಯರ್ಥಿಗಳಿಗೆ ಜಯಭೇರಿ: ಯಾರನ್ನು ಸೋಲಿಸಿದರು ಈ ಧುರೀಣರು? ಇಲ್ಲಿದೆ ಡಿಟೇಲ್ಸ್​

Sign in to your account
Please enter an answer in digits:7 − six =
Remember me
