ಹುಬೇಯಿ (ಚೀನಾ):ಮಗುವನ್ನು ಹೊರಜಗತ್ತಿಗೆ ತರುವುದು ಹೆಣ್ಣಿನ ಎರಡನೆಯ ಜನ್ಮ ಎನ್ನುತ್ತಾರೆ. ಗರ್ಭದಲ್ಲಿ ಇರುವ ಮಗುವಿಗೆ ಅಮ್ಮ ಎಷ್ಟೇ ಜಾಗರೂಕತೆಯಿಂದ ನೋಡಿಕೊಂಡರೂ ಗ್ರಹಚಾರ ನೆಟ್ಟಗಿಲ್ಲದಿದ್ದರೆ ಚಿತ್ರ-ವಿಚಿತ್ರ ಮಗು ಹುಟ್ಟುವುದುಂಟು.
ಆದರೆ ವೈದ್ಯಲೋಕಕ್ಕೇ ವಿಸ್ಮಯ ಎಸಗಿರುವ ಮಗುವೊಂದು ಚೀನಾದ ಹುಬೇಯಿ ಪ್ರಾಂತ್ಯದಲ್ಲಿ ಹುಟ್ಟಿದೆ. ಈ ಮಗು ಹುಟ್ಟುವಾಗಲೇ ಆರು ಸುತ್ತು ಉರುಳು ಹಾಕಿಕೊಂಡು ಹುಟ್ಟಿದೆ.
ನಾರ್ಮಲ್‌ ಡೆಲಿವರಿ ಮೂಲಕವೇ ಮಗುವನ್ನು ಹೊರಕ್ಕೆ ತೆರೆದು ಮಗುವನ್ನು ಬದುಕಿಸಿ ವೈದ್ಯಲೋಕವೇ ಅಚ್ಚರಿಪಡುವಂಥ ಕಾರ್ಯವನ್ನು ಇಲ್ಲಿಯ ವೈದ್ಯರು ಮಾಡಿದ್ದರೆ, ಆ ಮಗುಕೂಡ ವೈದ್ಯರಿಗೇ ಸವಾಲು ಎನಿಸುವಂತೆ ಹುಟ್ಟಿದೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಆಗಿದ್ದೇನೆಂದರೆ ಈ ಮಗುವಿನ ಕತ್ತಿನ ಸುತ್ತ ಗರ್ಭದಲ್ಲೇ ಗರ್ಭನಾಳ ಬಿಗಿಯಾಗಿ ಸುತ್ತಿಕೊಂಡಿತ್ತು. ಸಾಮಾನ್ಯವಾಗಿ ಮಹಿಳೆಯ ಗರ್ಭನಾಳವು 11.8 ಇಂಚಿನಷ್ಟು ಉದ್ದವಿರುತ್ತದೆ. ಆದರೆ ಈ ಮಗುವನ್ನು ಹೊತ್ತಿದ್ದ ಮಹಿಳೆ ಹೊಟ್ಟೆಯಲ್ಲಿ 35 ಇಂಚಿನ ಗರ್ಭನಾಳ ಇದ್ದ ಹಿನ್ನೆಲೆಯಲ್ಲಿ ಅದು ಮಗುವಿನ ತಲೆಯನ್ನು ಸುತ್ತಿಕೊಂಡು ಬಿಟ್ಟಿದ್ದೇ ಇಷ್ಟೆಲ್ಲಾ ಆವಾಂತರಕ್ಕೆಯಾವುದೇ ಡೇಂಜರಸ್‌ ಕೇಸ್‌ ಇರುವಾಗಿ ಶಸ್ತ್ರಚಿಕಿತ್ಸೆ (ಸಿಜರಿಯನ್‌) ಮೂಲಕ ಮಗುವನ್ನು ಹೊರಕ್ಕೆ ತೆರೆಯಲಾಗುತ್ತದೆ. ಆದರೆ ಇಲ್ಲಿಯ ವೈದ್ಯರು ನಾರ್ಮಲ್‌ ಡೆಲವರಿ ಮಾಡಿಸಿ, ಮಗುವನ್ನು ಹೊರಕ್ಕೆ ಎಳೆದಿದ್ದಾರೆ.
ತಮ್ಮ 23 ವರ್ಷಗಳ ವೈದ್ಯಕೀಯ ವೃತ್ತಿಯಲ್ಲಿ ಇಂಥದ್ದೊಂದು ಘಟನೆ ಸಂಭವಿಸಿಯೇ ಇಲ್ಲ ಎಂದು ಡೆಲಿವರಿ ಮಾಡಿರುವ ವೈದ್ಯೆ ಲೇ ಹುವಾ ಹೇಳಿದ್ದರೆ, ಇತಿಹಾಸದಲ್ಲಿಯೇ ಇದೇ ಮೊದಲು ಎಂದು ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸುಶಾಂತ್‌ ಸಿಂಗ್‌ ಕುರಿತು ಬರೆದಿದ್ದ ನಟ ಸಮೀರ್‌!
ಅನೇಕ ತಾಸು ಆ ಮಹಿಳೆ ಹೆರಿಗೆ ನೋವು ಅನುಭವಿಸಿದ್ದಾಳೆ. ಇದಾದ ಬಳಿಕ ಆರೋಗ್ಯಕರ ಮಗುವಿಗೆ ಜನ್ಮ ನೀಡಿದ್ದಾಳೆ. ಇದನ್ನು ಚಮತ್ಕಾರ ಎನ್ನಬಹುದು, ಯಾಕೆಂದರೆ ಮಗು ಇದ್ದ ಸ್ಥಿತಿಯಲ್ಲಿ ಉಸಿರುಗಟ್ಟಿ ಸಾಯುವ ಸಾಧ್ಯತೆಗಳೂ ಇದ್ದವು ಎಂದಿದ್ದಾರೆ ಕೇ ಹುವಾ. ಮಗು ಜನಿಸಿದಾಗ ಕೇವಲ 6.6 ಪೌಂಡ್ ತೂಕ ಹೊಂದಿತ್ತು. ಈ ಮಗುವಿಗೆ ನಾನು ಮಿರಾಕಲ್ ಬೇಬಿ ಎಂದು ಹೆಸರು ಇಟ್ಟಿರುವುದಾಗಿ ಹೇಳಿದ್ದಾರೆ.
ಇಷ್ಟೆಲ್ಲಾ ಸಮಸ್ಯೆ ಇದ್ದರೆ ಮಗುವಿಗೆ ಯಾವುದೇ ಹಾನಿಯಾಗಿಲ್ಲ. ನನಗೆ ಬಹಳ ಖುಷಿಯಾಗಿದೆ. ಮಗುವಿನ ಸ್ಥಿತಿ ಹೊಟ್ಟೆಯೊಳಗೆ ಹೇಗಿದೆ ಎಂದು ವೈದ್ಯರು ವಿವರಿಸಿದ್ದಾಗ ಭಯದಿಂದ ನಲುಗಿ ಹೋಗಿದ್ದೆ. ಆದರೆ ಇದೀಗ ಮಗು ಕ್ಷೇಮವಾಗಿದೆ ಎಂದು ಮಗುವಿನ ಅಮ್ಮ ಖುಷಿ ಹಂಚಿಕೊಂಡಿದ್ದಾರೆ.
ಗರ್ಭನಾಳ ಹೊಟ್ಟೆಯಲ್ಲಿರುವ ಮಗುವಿಗೆ ಆಮ್ಲಜನಕ, ರಕ್ತ, ನ್ಯೂಟ್ರಿಯೆಂಟ್ಸ್‌ಗಳನ್ನು ಸರಬರಾಜು ಮಾಡುವ ಕಾರ್ಯ ನಿರ್ವಹಿಸುತ್ತದೆ.
ಮೊಟ್ಟೆಯೊಳಗಿದ್ದ ಗಿಣಿಮರಿಯ ತೆಗೆದು ಸಾಕಿದರು! ವಿಡಿಯೋ ವೈರಲ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 + four =
Remember me
