ಚಂಡೀಗಢ:ಮಗುವನ್ನು ದತ್ತು ಪಡೆಯುವುದಕ್ಕೆ ಸಂಬಂಧಿಸಿದಂತೆ ಹಿಂದೂ ದತ್ತಕ ಕಾಯ್ದೆಯಲ್ಲಿ ಇದಾಗಲೇ ಹಲವಾರು ಷರತ್ತುಗಳನ್ನು ವಿಧಿಸಲಾಗಿದೆ. ಅದರಲ್ಲಿ ಒಂದು ಗರ್ಭದಲ್ಲಿರುವಾಗಲೇ ಮಗುವನ್ನು ದತ್ತು ಪಡೆದುಕೊಳ್ಳುವುದು. ಹಲವಾರು ಮಂದಿ ಕೂಸು ಹುಟ್ಟುವ ಮೊದಲೇ ಈ ಮಗು ನನಗೆ ಸೇರಿದ್ದು ಎಂದು ಮಾತನಾಡಿಕೊಳ್ಳುವುದೂ ಅಲ್ಲದೇ, ಅದನ್ನು ದತ್ತು ಪಡೆಯುವುದಕ್ಕೆ ಸಂಬಂಧಿಸಿದಂತೆ ಕೆಲವೊಂದು ದಾಖಲೆಗಳನ್ನೂ ಸೃಷ್ಟಿಸಿಕೊಳ್ಳುತ್ತಿದ್ದಾರೆ.
ಆದರೆ ಇದು ಕಾನೂನುಬದ್ಧವಲ್ಲ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಹೇಳಿದೆ. ಗರ್ಭದಲ್ಲಿರುವ ಮಗುವನ್ನು ಯಾವುದೇ ಕಾರಣಕ್ಕೂ ದತ್ತು ತೆಗೆದುಕೊಳ್ಳುವಂತಿಲ್ಲ ಎಂದು ಕೋರ್ಟ್​ ಸ್ಪಷ್ಟಪಡಿಸಿದೆ. ಮಗುವನ್ನು ಗರ್ಭದಲ್ಲಿದ್ದಾಗಲೇ ದತ್ತು ಪಡೆಯುವಂತಿಲ್ಲ. ಇದು ಹಿಂದೂ ದತ್ತು ಸ್ವೀಕಾರ ಕಾಯ್ದೆಯ ವಿರುದ್ಧವಾಗಿದೆ ಎಂದು ಕೋರ್ಟ್​ ಹೇಳಿದೆ.
ಗರ್ಭದಲ್ಲಿರುವ ಮಗು ದತ್ತು ಪಡೆದಿರುವುದಕ್ಕೆ ಸಂಬಂಧಿಸಿದಂತೆ ಪಟಿಯಾಲಾದ ಮಹಿಳೆಯೊಬ್ಬರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್​ ಈ ಆದೇಶ ಹೊರಡಿಸಿದೆ.
ಏನಿದು ಘಟನೆ?ಪಟಿಯಾಲಾದ ಮಹಿಳೆಯೊಬ್ಬರು ಗರ್ಭ ಧರಿಸಿದ್ದರು. ಆದರೆ ಕುಟುಂಬದಲ್ಲಿ ಕೆಲವೊಂದು ಭಿನ್ನಾಭಿಪ್ರಾಯಗಳು ಇದ್ದ ಹಿನ್ನೆಲೆಯಲ್ಲಿ ಮಗು ತನಗೆ ಬೇಡ ಎಂದು ನಿರ್ಧರಿಸಿದ್ದರು. ಈ ಮಗುವನ್ನು ದತ್ತು ಪಡೆದುಕೊಳ್ಳಲು ದಂಪತಿಯೊಬ್ಬರು ಕೋರಿದ್ದರು. ಗರ್ಭ ಧರಿಸಿದ್ದ ಮಹಿಳೆ ಕೂಡ ಇದಕ್ಕೆ ಅನುಮತಿ ಕೊಟ್ಟಿದ್ದರು.
ಆದರೆ ಮಗು ಹುಟ್ಟುತ್ತಲೇ ಈ ಅಮ್ಮನ ಮನಸ್ಸು ಬದಲಾಗಿದೆ. ತನ್ನ ಕರುಳ ಕುಡಿಯನ್ನು ನೋಡಿ ದತ್ತು ನೀಡದೇ ಇರಲು ತೀರ್ಮಾನಿದ್ದಾಳೆ. ಈ ತೀರ್ಮಾನಕ್ಕೆ ಬರುವ ಮೊದಲೇ ದತ್ತು ಪಡೆಯಲು ನಿರ್ಧರಿಸಿದ್ದ ದಂಪತಿ ಮಗುವನ್ನು ವಾಪಸ್​ ನೀಡಲಿಲ್ಲ. ಎಷ್ಟೇ ಕಾಡಿ ಬೇಡಿದರೂ ಅವರು ಅದನ್ನು ನೀಡಲಿಲ್ಲ.
ಇದನ್ನು ಪ್ರಶ್ನಿಸಿ ಮಹಿಳೆ ಕೋರ್ಟ್​ ಮೊರೆ ಹೋಗಿದ್ದರು. ಮಗು ಜನಿಸುವ ಮುನ್ನವೇ ದತ್ತು ಪಡೆಯಲಾಗಿದೆ. ಮಗುವಿನ ನೋಂದಾಯಿತ ಪತ್ರವೂ ಇಲ್ಲ. ಹೀಗಾಗಿ ಮಗುವನ್ನು ತನಗೆ ವಾಪಸ್​ ಕೊಡಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಇಂಥ ದತ್ತಕಕ್ಕೆ ಕಾನೂನಿನ ಅನುಮತಿ ಇಲ್ಲ. ಆದ್ದರಿಂದ ಇದು ಕಾನೂನು ಬಾಹಿರ ಎಂದು ಹೇಳಿದ್ದು, ಮಗುವನ್ನು ವಾಪಸ್​ ಕೊಡುವಂತೆ ದಂಪತಿಗೆ ಆದೇಶಿಸಿದೆ.
ಟೈಲರ್​ನಂತೆ ಉದ್ಯಮಿ ರುಂಡ ತುಂಡರಿಸಲು ನಡೆದಿತ್ತು ಸಂಚು: ತಪ್ಪಿಸಿಕೊಂಡದ್ದು ಹೇಗೆ? ತಂದೆ ಹೇಳಿದ್ದೇನು?

ಜು.1ರಿಂದ ಏಕಬಳಕೆ ಪ್ಲಾಸ್ಟಿಕ್ ನಿಷೇಧ​: ಐದು ವರ್ಷ ಜೈಲು, ಒಂದು ಲಕ್ಷ ರೂ. ದಂಡ: ಸಂಪೂರ್ಣ ವಿವರ ಇಲ್ಲಿದೆ…

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:2 × 5 =
Remember me
