ಭೋಸಾರಿ (ಉತ್ತರ ಪ್ರದೇಶ):ವೈಯಕ್ತಿಕ ಕಾರಣದಿಂದಾಗಿ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದನ್ನು ತಿಳಿಯದ ಆಕೆಯ ಒಂದು ವರ್ಷದ ಮಗು ಅಳುತ್ತಲೇ ಶವದ ಜತೆ ಎರಡು ದಿನ ಕಳೆದಿರುವ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ ಭೋಸಾರಿಯಲ್ಲಿ ನಡೆದಿದೆ.
ಪಿಂಪ್ರಿ-ಚಿಂಚ್‌ವಾಡ್‌ ನಿವಾಸಿ 29 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರನ್ನು ಸರಸ್ವತಿ ರಾಜೇಶ್‌ಕುಮಾರ್‌ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷದ ಬಾಟಲಿ ಪಕ್ಕದಲ್ಲಿಯೇ ಕಂಡುಬಂದಿದೆ. ಆದರೆ ಮಗುವಿಗೆ ಮಾತ್ರ ಅಮ್ಮ ಬದುಕಿಲ್ಲ ಎಂದು ತಿಳಿಯದೇ ಅಲ್ಲಿಯೇ ಎದ್ದೇಳು ಎದ್ದೇಳು ಎನ್ನುತ್ತಾ ಎರಡು ದಿನ ಶವದ ಜತೆಯೇ ಕಳೆದಿದೆ.ಇವರ ಪತಿ ಕೆಲಸದ ನಿಮಿತ್ತ ಬೇರೆ ಕಡೆ ಹೋದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ವಿಷದ ಬಾಟಲ್‌ಗಳು ಪತ್ತೆಯಾಗಿವೆ. ಮಗು ಮಾತ್ರ ಅತ್ತೂ ಅತ್ತೂ ಸುಸ್ತಾಗಿತ್ತು. ಅಮ್ಮನನ್ನು ಏಳಿಸುವ ಪ್ರಯತ್ನ ಮಾಡುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಮನೆಯಿಂದ ಎರಡು ದಿನ ಯಾರೂ ಹೊರಕ್ಕೆ ಬರದ ಹಿನ್ನೆಲೆಯಲ್ಲಿ ಸಂದೇಹಗೊಂಡ ನೆರೆಹೊರೆಯವರು ಮನೆಯ ಸಮೀಪ ಹೋದಾಗ ಅಲ್ಲಿಂದ ಕೊಳೆತ ವಾಸನೆ ಬರುತ್ತಿತ್ತು. ಇದರಿಂದ ಹೆದರಿ ಅವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಅದಾಗಲೇ ಪ್ರಕರಣ ಬೆಳಕಿಗೆ ಬಂದಿದೆ. ಇದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಊಟ- ನಿದ್ದೆ ಇಲ್ಲದೇ ಎರಡು ದಿನ ಬಳಲಿಹೋಗಿದ್ದ ಮಗುವನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಹಿಳಾ ಪೊಲೀಸ್‌ ಸಿಬ್ಬಂದಿ ಮಗುವಿನ ಆರೈಕೆ ಮಾಡುತ್ತಿದ್ದಾರೆ.
ಹೆಣ್ಣುಮಕ್ಕಳನ್ನು ಕಂಡರೆ ಹಿಂದೆ ಮುಂದೆ ಯೋಚನೆ ಮಾಡಬೇಕಲ್ವೆ?

ವಿಕ್ಟೋರಿಯಾ ಆಸ್ಪತ್ರೆಯ ಕಟ್ಟಡದಿಂದ ಹಾರಿ ಕರೊನಾ ಸೋಂಕಿತ ಆತ್ಮಹತ್ಯೆ

‘ಇಲ್ಲಿಂದ ಹುಲ್ಲು ಹಾಕಿದ್ರೆ ಅಲ್ಲಿಂದ ಹಾಲು ಬರತ್ತೆ’ ಎಂದ ಜಾಹೀರಾತು ಕಂಪೆನಿಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತರು!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:thirteen + 20 =
Remember me
