ಮದನಪಲ್ಲಿ (ಆಂಧ್ರಪ್ರದೇಶ):ಮೂಢನಂಬಿಕೆ, ಮಾಟ, ಮಂತ್ರ ಇತ್ಯಾದಿಗಳನ್ನು ನಂಬಿ ಎಷ್ಟೋ ಮಂದಿ ಸಿಕ್ಕಸಿಕ್ಕದವರ ಮಕ್ಕಳನ್ನು ಕೊಲೆ ಮಾಡಿ ನರಬಲಿ ನೀಡುವ ಘಟನೆಗಳು ಒಂದೆಡೆ ನಡೆಯುತ್ತಿದ್ದರೆ, ತಾವೇ ಹೆತ್ತ ಮಕ್ಕಳನ್ನು ಕೊಲೆ ಮಾಡುವ ಘಟನೆಗಳೂ ವರದಿಯಾಗುತ್ತಿವೆ.ಅಂಥದ್ದೇ ಒಂದು ಭಯಾನಕ ಘಟನೆ ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ನಡೆದಿದೆ. ತಂತ್ರವಾದಿಯ ಮಾತನ್ನು ಕೇಳಿದ ತಾಯಿಯೊಬ್ಬಳು ವಯಸ್ಸಿಗೆ ಬಂದ ತನ್ನ ಹೆಣ್ಣುಮಕ್ಕಳನ್ನು ಕೊಲೆ ಮಾಡಿರುವ ಘಟನೆ ಇದಾಗಿದೆ!ಅನಕ್ಷರಸ್ಥರು, ಹಳ್ಳಿಗಾಡಿನಲ್ಲಿ ವಾಸಿಸುವವರು ಇಂಥದ್ದೊಂದು ಮೌಢ್ಯಕ್ಕೆ ಗುರಿಯಾಗುತ್ತಾರೆ ಎಂಬ ನಂಬಿಕೆ ಇದೆ. ಆದರೆ ಅಚ್ಚರಿಯ ವಿಷಯವೆಂದರೆ, ಕಾಲೇಜೊಂದರ ಪ್ರಾಂಶುಪಾಲರಾಗಿದ್ದವರ ಪತ್ನಿಯೊಬ್ಬರು ಇಂಥದ್ದೊಂದು ಕೃತ್ಯ ಎಸಗಿದ್ದಾರೆ.ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪುರುಷೋತ್ತಮ ನಾಯ್ಡು ಅವರ ಪತ್ನಿಯ ಕೆಲಸವಿದುಈಕೆಯ ಮೌಢ್ಯಕ್ಕೆ ಬಲಿಯಾದವರು 22 ಮತ್ತು 27 ವರ್ಷ ವಯಸ್ಸಿನ ಅಲೈಖ್ಯಾ ಮತ್ತು ಸಾಯಿ ದಿವ್ಯಾ ಸಹೋದರಿಯರು. ಈ ಹೆಣ್ಣುಮಕ್ಕಳ ಮೃತದೇಹ ಬೆತ್ತಲೆಯಾಗಿ ಸಿಕ್ಕಿದೆ. ಇದರರ್ಥ ಮಕ್ಕಳನ್ನು ಬೆತ್ತಲೆಗೊಳಿಸಿ ಪೂಜೆ ಮಾಡಿದ ಈ ‘ಮಹಾತಾಯಿ‘ ನಂತರ ಡಂಬಲ್ಸ‌ನಿಂದ ಹೊಡೆದು ಹತ್ಯೆಮಾಡಿದ್ದಾಳೆ.ಮದನಪಲ್ಲಿ ಶಿವಾಲಯಂ ದೇವಾಲಯದ ರಸ್ತೆ ಬಳಿ ಘಟನೆ ನಡೆದಿದೆ. ಭಾನುವಾರ ರಾತ್ರಿ ಪೂಜೆ ಮಕ್ಕಳನ್ನು ಬೆತ್ತಲೆಗೊಳಿಸಿ ಪೂಜೆ ಮಾಡಿದ ದಂಪತಿ ಕೊಲೆ ಮಾಡಿದ್ದಾರೆ. ಪೊಲೀಸರು ಬಂದು ವಿಚಾರಿಸಿದಾಗ ನನ್ನ ಮಕ್ಕಳು ಮೃತಪಟ್ಟಿಲ್ಲ. ಅವರನ್ನು ಮುಟ್ಟಬೇಡಿ. ನಾಳೆ ಅವರಿಗೆ ಜೀವ ಬರುತ್ತದೆ ಎಂದು ಹೇಳಿದ್ದಾಳೆ ಈ ತಾಯಿ.ನಂತರ ಕಪಟ ಸ್ವಾಮಿಯೊಬ್ಬನ ಮಾತು ನಂಬಿ ಇಂತಹ ಕೃತ್ಯವೆಸಗಿರುವುದಾಗಿ ಪೊಲೀಸರಿಗೆ ತಿಳಿದುಬಂದಿದ್ದು, ತನಿಖೆ ಕೈಗೊಂಡಿದ್ದಾರೆ.
ನಿತ್ಯ ಭವಿಷ್ಯ| ಈ ರಾಶಿಯವರಿಂದು ಅತಿ ವೇಗದ ವಾಹನ ಚಲಾಯಿಸದಿರಿ
ಚಪ್ಪಲಿ ಬಿಟ್ಟು ಮಾತನಾಡಿದ ಆ ವ್ಯಕ್ತಿ ಕೇಳಿದ ಪ್ರಶ್ನೆಯಿಂದ ಕಸಿವಿಸಿಯಾಯಿತು- ಸುರೇಶ‌ಕುಮಾರ್‌
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × three =
Remember me
