ಚಿತ್ತೂರು: ಕರೊನಾ ವೈರಸ್‌ ಬಂದದ್ದು ವುಹಾನ್‌ನಿಂದ ಅಲ್ಲ, ಅದು ಹೇಗೆ ಬಂತು ಎಂದು ನಮಗೆ ಗೊತ್ತು. ಅದು ಬಂದದ್ದು ಶಿವನ ಕೂದಲಿನಿಂದ. ಈಗ ನಮಗೆ ಕರೊನಾನೂ ಬರಲ್ಲ… ಯಾವ ರೋಗವೂ ಬರಲ್ಲ ಎಂದು ದಂಪತಿಯೊಬ್ಬರು ಹೇಳುತ್ತಾ ವಿಲಕ್ಷಣವಾಗಿ ಕುಣಿದಾಡಿದ ಘಟನೆ ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ನಡೆದಿದೆ.
ಪುರುಷೋತ್ತಮ ನಾಯ್ಡು ಮತ್ತು ಪದ್ಮಜಾ ಅವರೇ ಈ ದಂಪತಿ. ತಮ್ಮ ಇಬ್ಬರು ವಯಸ್ಸಿಗೆ ಬಂದ ಹೆಣ್ಣುಮಕ್ಕಳನ್ನು ಬೆತ್ತಲೆಗೊಳಿಸಿ, ಪೂಜೆ ಮಾಡಿ ನಂತರ ಇಬ್ಬರನ್ನೂ ಕೊಲೆ ಮಾಡಿದ್ದರು ಈ ದಂಪತಿ. ಸಾಯಿ ದಿವ್ಯಳನ್ನು ತ್ರಿಶೂಲದಿಂದ ಮತ್ತು ಅಲೈಕ್ಯಳನ್ನು ತಾಮ್ರದ ಮುಚ್ಚಳವನ್ನು ಬಾಯಿಗೆ ಹಾಕಿ ವ್ಯಾಯಾಮ ಮಾಡಲು ಬಳಸುವ ಡಂಬೆಲ್ಸ್‌ನಿಂದ ಸಾಯಿಸಿದ್ದರು. ಈ ಪ್ರಕರಣದ ಆಳಕ್ಕೆ ಹೋದಷ್ಟೂ ವಿಚಿತ್ರಗಳೇ ತುಂಬಿಕೊಂಡಿವೆ. ಪುರುಷೋತ್ತಮ ನಾಯ್ಡು ಕಾಲೇಜೊಂದರಲ್ಲಿ ಪ್ರಾಂಶುಪಾಲರಾಗಿದ್ದರೆ, ಪತ್ನಿ ಪದ್ಮಜಾ ಗಣಿತದಲ್ಲಿ ಚಿನ್ನದ ಪದಕ ವಿಜೇತೆ.
ನಿನ್ನೆ ಮಕ್ಕಳನ್ನು ಕೊಂದ ಆರೋಪದ ಮೇಲೆ ಇಬ್ಬರನ್ನೂ ಬಂಧಿಸಲಾಗಿದೆ. ಇವರು ತಾಂತ್ರಿಕ ವಿದ್ಯೆ ಕಲಿಯುತ್ತಿದ್ದು, ಮೂಢನಂಬಿಕೆ ಹೆಸರಿನಲ್ಲಿ ತಮ್ಮ ಮಕ್ಕಳನ್ನೇ ಬಲಿಕೊಟ್ಟರು ಎನ್ನಲಾಗಿದೆ. ಇದರ ಹಿಂದೆ ಸ್ವಾಮೀಜಿಯೊಬ್ಬನ ಕೈವಾಡ ಇದೆ ಎಂದೂ ಹೇಳಲಾಗುತ್ತಿದೆ.ಮರುದಿನ ತಮ್ಮ ಪುತ್ರಿಯರು ಬದುಕಿ ಬರುತ್ತಾರೆ ಎಂದು ಪದೇ ಪದೇ ಈ ದಂಪತಿ ಹೇಳುತ್ತಿದ್ದರು. ಸದ್ಯ ಇಬ್ಬರ ವಿರುದ್ಧ ಮದನಪಲ್ಲಿ ಪೊಲೀಸರು ಭಾರತೀಯ ದಂಡ ಸಂಹಿತೆ ಸೆಕ್ಷನ್ 302ರಡಿಯಲ್ಲಿ ಕೊಲೆ ಕೇಸನ್ನು ದಾಖಲಿಸಿದ್ದಾರೆ.
ಇಬ್ಬರನ್ನೂ ಬಂಧಿಸಿದ ನಂತರ ಅವರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲು ಪೊಲೀಸರು ಹರಸಾಹಸಪಡಬೇಕಾಯಿತು. “ನಮಗೆ ಈ ಪರೀಕ್ಷೆ ಎಲ್ಲಾ ಬೇಡ. ಪರೀಕ್ಷೆಗೊಳಪಡಿ ಎಂದು ಹೇಳಲು ನೀವ್ಯಾರು, ವೈರಸ್ ನನಗೆ ತೊಂದರೆ ನೀಡಲು ಸಾಧ್ಯವಿಲ್ಲ, ಅದು ಬಂದಿರುವುದು ಶಿವದೇವರ ತಲೆಯಿಂದ ಹೊರತು ಚೀನಾದ ವುಹಾನ್ ನಿಂದಲ್ಲ. ನಾನು ಶಿವನ ಭಕ್ತೆ. ಈ ವೈರಸ್‌ ಇನ್ನೆರಡು ತಿಂಗಳಿನಲ್ಲಿ ಕೊನೆಯಾಗುತ್ತದೆ. ಅದಕ್ಕೆ ಲಸಿಕೆ ಎಲ್ಲಾ ಬೇಡ” ಎಂದು ಪದ್ಮಜಾ ಪದೇ ಪದೇ ಹೇಳುತ್ತಿದ್ದರು.
ಇಷ್ಟೇ ಅಲ್ಲದೇ, ತಮ್ಮ ಮಕ್ಕಳು ಬದುಕಿಬರುತ್ತಾರೆ ಎಂದೇ ಹೇಳುತ್ತಿದ್ದ ದಂಪತಿ ಮಕ್ಕಳ ಸಾವಿನಿಂದ ಆಘಾತಕ್ಕೊಳಗಾಗುವುದಾಗಲಿ, ಬೇಸರಗೊಳ್ಳುವುದಾಗಲಿ ಕಂಡುಬರಲಿಲ್ಲ. ಪೊಲೀಸರು ವಶಕ್ಕೆ ಪಡೆದ ಬಳಿಕ ಅವರಿಬ್ಬರೂ ಒಂದಿಷ್ಟೂ ವಿಚಲಿತರಾಗದೆ ಪೊಲೀಸ್ ವಾಹನದಲ್ಲೇ ನೃತ್ಯ ಮಾಡುತ್ತಾ ಸಾಗಿದರು! ಕೊಲೆ ಮಾಡಿದ ನಂತರ ಪುರುಷೋತ್ತಮ ನಾಯ್ಡು ಕಾಲೇಜಿನ ತಮ್ಮ ಸಹೋದ್ಯೋಗಿಗೆ ಈ ವಿಷಯವನ್ನು ತಿಳಿಸಿದ್ದರಂತೆ. ಅದಕ್ಕಾಗಿಯೇ ಪ್ರಕರಣ ಬೆಳಕಿಗೆ ಬಂದಿತ್ತು.
ಮರುದಿನ ಬದುಕುತ್ತಾರೆಂದು ಹೆಣ್ಣುಮಕ್ಕಳನ್ನು ಕೊಲೆ ಮಾಡಿದ ಪ್ರಾಂಶುಪಾಲರ ಪತ್ನಿ!

ಸ್ವಂತ ಹೆಣ್ಣುಮಕ್ಕಳನ್ನು ಬೆತ್ತಲೆಗೊಳಿಸಿ ಪೂಜೆ ಮಾಡಿದ್ರು, ಬಳಿಕ ತಲೆ ಒಡೆದು ಕೊಂದೇಬಿಟ್ರು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ

ತಂದೆ ಪ್ರಾಂಶುಪಾಲ, ತಾಯಿ ಗಣಿತದಲ್ಲಿ ಗೋಲ್ಡ್​ ಮೆಡಲಿಸ್ಟ್: ಆದ್ರೂ ಹೆತ್ತಮಕ್ಕಳ ಬಲಿ ಹಿಂದಿರುವ 3ನೇ ವ್ಯಕ್ತಿ ಯಾರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − nine =
Remember me
