ಲಡಾಖ್‌:ಇತ್ತ ಪಾಕಿಸ್ತಾನ ತನ್ನ ನರಿಬುದ್ಧಿ ತೋರಿಸುತ್ತಾ ಕಾಲು ಕೆದಕಿ ಜಗಳ ತೆಗೆಯುತ್ತಿದ್ದರೆ, ಅತ್ತ ಚೀನಾ ಕೂಡ ಇಂಥದ್ದೇ ಕುಕೃತ್ಯಕ್ಕೆ ಇಳಿದಿದೆ. ಲಡಾಖ್‌ ಬಳಿಯ ವಾಸ್ತವ ಗಡಿ ರೇಖೆಯ ಬಳಿ ಮತ್ತೆ ಜಗಳಕ್ಕೆ ನಿಂತಿದ್ದು, ಯಥಾ ಸ್ಥಿತಿ ಕಾಯ್ದುಕೊಳ್ಳದೆ ಉದ್ಧಟತನ ಪ್ರದರ್ಶಿಸುತ್ತಿದೆ ಎಂದು ಕರ್ನಲ್‌ ಅಮನ್‌ ಆನಂದ್ ಹೇಳಿದ್ದಾರೆ.
ಚೀನಾ ಪ್ರಚೋದನಕಾರಿ ಮಿಲಿಟರಿ ಕಾರ್ಯಾಚರಣೆ ನಡೆಸುವ ಮೂಲಕ ಭಾರತವನ್ನು ಕೆಣಕಲು ಪ್ರಯತ್ನಿಸಿದೆ. ಆಗಸ್ಟ್ 29 ಹಾಗೂ 30ರ ನಡುವೆ ಈ ಕಾರ್ಯವನ್ನು ಚೀನಾ ಮಾಡಿದ್ದು, ಉಭಯ ದೇಶಗಳ ನಡುವಿನ ನಿರ್ಣಯವನ್ನು ಉಲ್ಲಂಘನೆ ಮಾಡಿದೆ.
ಯಥಾಸ್ಥಿತಿ ಕಾಯ್ದುಕೊಳ್ಳುವ ಕುರಿತು ಇರುವ ನಿರ್ಣಯವನ್ನು ಉಲ್ಲಂಘನೆ ಮಾಡಿ ಪ್ರಚೋದನಾರಿ ಕಾರ್ಯಾಚರಣೆ ನಡೆಸಲಾಗಿದೆ. ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‍ಎ) ಆಗಸ್ಟ್ 29 ಹಾಗೂ 30ರಂದು ಮಧ್ಯರಾತ್ರಿ ಪಾಂಗೊಂಗ್ ತ್ಸೋ ಸರೋವರದ ದಕ್ಷಿಣ ತಟದಲ್ಲಿ ಉಭಯ ದೇಶಗಳ ನಿರ್ಣಯವನ್ನು ಉಲ್ಲಂಘಿಸಿ ಭಾರತವನ್ನು ಕೆದಕಲು ಹವಣಿಸಲಾಗಿದೆ ಎಂದು ಅಮನ್ ಆನಂದ್ ಹೇಳಿದ್ದಾರೆ.
ಇದನ್ನೂ ಓದಿ:ಗಲ್ವಾನ್‌ ಘರ್ಷಣೆಯಲ್ಲಿ ತನ್ನ ಸೈನಿಕರು ಸತ್ತೇ ಇಲ್ಲ ಎಂದಿದ್ದ ಚೀನಾಕ್ಕೆ ಹೀಗಾಗಬಾರದಿತ್ತು!
ಶಾಂತಿ ಕಾಪಾಡಲು ಭಾರತೀಯ ಸೇನೆ ಬದ್ಧವಾಗಿದೆ. ಮಾತುಕತೆ ಮೂಲಕ ಶಾಂತಿ ಕಾಪಾಡಲು ಸಿದ್ಧವಾಗಿದೆ. ಅದೇ ರೀತಿ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಹಾಗೂ ಕಾಯ್ದುಕೊಳ್ಳಲು ನಿರ್ಧಸಿದೆ. ಸಮಸ್ಯೆಗಳನ್ನು ಪರಿಹರಿಸಲು ಚುಶುಲ್‍ನಲ್ಲಿ ಬ್ರಿಗೇಡ್ ಕಮಾಂಡರ್ ಮಟ್ಟದಲ್ಲಿ ಸಭೆ ನಡೆಯುತ್ತಿದೆ. ಇಷ್ಟಾದರೂ ಚೀನಾ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಆದರೆ ಇತ್ತ ಕುತಂತ್ರಿ ಪಾಕಿಸ್ತಾನದಿಂದ ಸಾಕಷ್ಟು ಪಾಠ ಕಲಿತಿರುವ ಭಾರತೀಯ ಯೋಧರು ಚೀನಾದ ಸೈನಿಕರ ಬುದ್ಧಿಯನ್ನೂ ಚೆನ್ನಾಗಿ ಬಲ್ಲರು ಇದೇ ಕಾರಣಕ್ಕೆ, ಪಾಂಗೊಂಗ್ ತ್ಸೋ ಸರೋವರದ ದಕ್ಷಿಣ ಭಾಗದಲ್ಲಿ ಪಿಎಲ್‍ಎ ಕಾರ್ಯಾಚರಣೆ ನಡೆಸುವ ಕುರಿತು ಅರಿತಿದ್ದ ಯೋಧರು ಮೊದಲೇ ತೀವ್ರ ಕಟ್ಟೆಚ್ಚರ ವಹಿಸಿದ್ದರು.
ಚೀನಾ ಸ್ಥಳದಲ್ಲಿ ಕ್ಯಾತೆ ತೆಗೆಯಬಹುದು ಎಂಬ ಅರಿವಿತ್ತು. ಇದರಿಂದಾಗಲೇ ಕಟ್ಟುನಿಟ್ಟಿನ ಎಚ್ಚರಿಕೆ ತೆಗೆದುಕೊಳ್ಳಲಾಗಿತ್ತು ಎಂದು ಸೇನೆ ಹೇಳಿದೆ. ತನ್ನ 40ಕ್ಕೂ ಅಧಿಕ ಸೈನಿಕರನ್ನು ಕಳೆದುಕೊಂಡಿದ್ದರೂ ಚೀನಾಕ್ಕೆ ಬುದ್ಧಿ ಬಂದಂತೆ ತೋರುತ್ತಿಲ್ಲ. ಉದ್ಧಟತನ ಪ್ರದರ್ಶಿಸುತ್ತಿದೆ.
ಕರೊನಾ ಸೋಂಕಿಗೆ ಬಲಿಯಾದ ದೇಶದ ಮೊದಲ ಮಹಿಳಾ ಹೃದ್ರೋಗ ತಜ್ಞೆ

ಮಧ್ಯಾಹ್ನ ಮಲಗುವ ಅಭ್ಯಾಸವಿದೆಯೆ? ಹಾಗಿದ್ದರೆ ಇದನ್ನೊಮ್ಮೆ ಓದಿ ನೋಡಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 + one =
Remember me
