ಸಿಕ್ಕಿಂ:ಗಲ್ವಾನ್ ಗಡಿ ಘರ್ಷಣೆ ಸಂಭವಿಸಿದ ಆರು ತಿಂಗಳ ಬಳಿಕ ಸಿಕ್ಕಿಂನ ನಾಕು ಲಾ ಗಡಿ ಭಾಗದಲ್ಲಿ ಚೀನಾ ಮತ್ತೆ ಕ್ಯಾತೆ ತೆಗೆದಿದೆ. ಇತ್ತೀಚೆಗೆ ಚೀನಾ ಗಡಿ ಭಾಗದಲ್ಲಿದ್ದ ಕೆಲವು ಸೇನಾ ತುಕಡಿಗಳನ್ನು ಹಿಂಪಡೆದಿತ್ತು. ಶಾಂತಿ ಮಾತುಕತೆಗೆ ಸಹಾಯಕವಾಗುವಂತೆ ಚೀನಾ ಒಂದು ಹೆಜ್ಜೆ ಮುಂದೆ ಹಿಂದೆ ಇ ಟ್ಟಿದೆ ಎಂದು ನಿರೀಕ್ಷಿಸಿರುವ ಮಧ್ಯೆಯೇ ಸಿಕ್ಕಿಂ ಭಾಗದಲ್ಲಿ ತನ್ನ ಕುತಂತ್ರ ಬುದ್ಧಿಯನ್ನು ತೋರಿಸಿದೆ.
ಉತ್ತರ ಸಿಕ್ಕಿಂನ ನಾಥುಲಾ ಗಡಿಭಾಗದಲ್ಲಿ ಭಾರತದ ಭೂ ಭಾಗ ಅತಿಕ್ರಮಿಸಲು ಚೀನೀ ಸೈನಿಕರು ಯತ್ತಿಸಿದ್ದಾರೆ. ಈ ಯತ್ನವನ್ನು ಭಾರತೀಯ ಯೋಧರು ತಡೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ನಡುವೆಯೇ, ಎರಡೂ ದೇಶಗಳ ಸೈನಿಕರ ನಡುವೆ ಘರ್ಷಣೆ ಎದುರಾಗಿದ್ದು, ಎರಡೂ ಕಡೆಯ ಸೈನಿಕರಿಗೆ ಗಾಯಗಳಾಗಿರುವುದಾಗಿ ವರದಿಯಾಗಿದೆ.
ಪ್ರತಿಕೂಲ ಹವಾಮಾನದ ಮಧ್ಯೆಯೂ ಚೀನಾ ಸೈನಿಕರನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ಸೇನೆ ಸಫಲವಾಗಿದೆ. ಉಭಯ ರಾಷ್ಟ್ರದ ಸೈನಿಕರ ನಡುವೆ ಘರ್ಷಣೆ ಸಂಭವಿಸಿದ್ದು, ಇದರಲ್ಲಿ ನಾಲ್ವರು ಭಾರತೀಯ ಹಾಗೂ 20 ಚೀನಾ ಯೋಧರು ಗಾಯಗೊಂಡಿದ್ದಾರೆಂದು ವರದಿಗಳು ತಿಳಿಸಿವೆ.
ಶಾಂತಿ ಮಾತುಕತೆ ನಡೆಯುತ್ತಿರುವ ಲಡಾಖ್‌ನಿಂದ ಸಾಕಷ್ಟು ದೂರವಿರುವ ಪ್ರದೇಶದಲ್ಲಿ ಕಳೆದ ಮೂರು ದಿನಗಳ ಹಿಂದೆ ಸಂಘರ್ಷ ನಡೆಯುತ್ತಿದೆ. ಚೀನಾದ ಲಿಬರೇಷನ್ ಆರ್ಮಿ ಭಾರತದ ಗಡಿರೇಖೆಯ ಒಳಗೆ ನುಸುಳುವ ಪ್ರಯತ್ನ ನಡೆಸಿದೆ. ಇದಕ್ಕೆ ಪ್ರತಿಯಾಗಿ ಭಾರತೀಯ ಯೋಧರು ಪ್ರತಿರೋಧ ವ್ಯಕ್ತಪಡಿಸಿದ್ದು, ಚೀನಾ ಸೇನೆ ಕುಕೃತ್ಯ ವಿಫಲವಾಗಿದೆ. ಭಾರತೀಯ ಯೋಧರ ಆಕ್ರಮಣಕ್ಕೆ ಹೆದರಿ ಚೀನಿ ಸೈನಿಕರು ಕಾಲ್ಕಿತ್ತಿರುವುದಾಗಿ ಸೇನೆ ಹೇಳಿದೆ. ಸದ್ಯ, ಘರ್ಷಣೆ ನಡೆದ ಸಿಕ್ಕಿಂ ಪ್ರದೇಶ ಪ್ರಕ್ಷುಬ್ದವಾಗಿದ್ದರೂ ಸ್ಥಿರವಾಗಿದೆ.
ಕಳೆದ ವರ್ಷದ ಜೂನ್ 15ರಂದು, ಪೂರ್ವ ಲಡಾಖ್​ನ ಗಾಲ್ವಾನ್ ಕಣಿವೆಯ ಭಾಗದಲ್ಲಿ ಚೀನಾ-ಭಾರತ ಸೈನಿಕರ ನಡುವೆ ನಡೆದ ಮುಖಾಮುಖಿಯ ಬಳಿಕ ಇದೀಗ ಈ ಘಟನೆ ಸಂಭವಿಸಿದೆ.
‌ಇತ್ತ ಲಡಾಖ್‌ನಲ್ಲಿ ಕಳೆದ 15 ಗಂಟೆಗಳ ಕಾಲ ಎರಡು ದೇಶಗಳ ನಡುವೆ ಶಾಂತಿ ಮಾತುಕತೆ ನಡೆದಿದೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ನಡೆದ ಸಂಘರ್ಷದ ಬಳಿಕ ನಡೆಯುತ್ತಿರುವ 9ನೇ ಸುತ್ತಿನ ಮಾತುಕತೆ ಕೂಡ ನಿರೀಕ್ಷಿತ ಫಲಿತಾಂಶ ನೀಡಿಲ್ಲ.
‘ಜೈಶ್ರೀರಾಮ್‌ ಎಂದರೆ ಕೋಪವೇಕೆ? ಅವರಿವರನ್ನ ಒಲಿಸೋ ಬದ್ಲು ಇದನ್ನೋದಿ ಕೂಲ್‌ ಆಗಿ’

ಲವರ್‌ ಜತೆ ಸಿಕ್ಕಿಬಿದ್ದು ರಾಜಸ್ಥಾನದಿಂದ ಓಡಿಹೋದವ ಗೊತ್ತಿಲ್ಲದೇ ಸೇರಿಬಿಟ್ಟ ಪಾಕಿಸ್ತಾನ!

ವಿಮಾನ ದುರಂತ: ಟೂರ್ನಿಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ಫುಟ್‌ಬಾಲ್‌ ಆಟಗಾರರ ಸಾವು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × three =
Remember me
