ನವದೆಹಲಿ:ಭಾರತದ ಭೂಪ್ರದೇಶ ಮಾತ್ರವಲ್ಲದೇ ಇಲ್ಲಿಯ ಉಪಗ್ರಹದ ಮೇಲೂ ಕಣ್ಣುಹಾಕಿರುವ ಚೀನಾ, 2012 ಹಾಗೂ 2018ರ ನಡುವೆ ಭಾರತದ ಸಂಪರ್ಕ ಉಪಗ್ರಹಗಳ ಮೇಲೆ ಹಲವು ಬಾರಿ ಸೈಬರ್‌ ದಾಳಿ ನಡೆಸಿ ಈ ಉಪಗ್ರಹಗಳನ್ನು ನಿಷ್ಕ್ರೀಯಗೊಳಿಸಲು ಯತ್ನಿಸಿರುವುದು ಇದೀಗ ಬಹಿರಂಗಗೊಂಡಿದೆ.
ಈ ಕುರಿತು ಅಮೆರಿಕ ಮೂಲದ ಚೀನಾ ಏರೋಸ್ಪೇಸ್ ಸ್ಟಡೀಸ್ ಇನ್ಸ್ಟಿಟ್ಯೂಟ್ (ಸಿಎಎಸ್ಐ) ತನ್ನ ವರದಿಯಲ್ಲಿ ವಿಸ್ಕೃತವಾಗಿ ವರದಿ ಮಾಡಿದೆ. 142 ಪುಟಗಳ ವರದಿಯಲ್ಲಿ ಚೀನಾದ ಕುತಂತ್ರ ಬುದ್ಧಿಯನ್ನು ಉಲ್ಲೇಖಿಸಲಾಗಿದ್ದು, 2017ರಲ್ಲಿ ಭಾರತೀಯ ಉಪಗ್ರಹ ಸಂವಹನಗಳ ಮೇಲೆ ಕಂಪ್ಯೂಟರ್ ನೆಟ್‌ವರ್ಕ್ ದಾಳಿ ನಡೆದಿರುವುದು ಚೀನಾದಿಂದಲೇ ಎಂದು ಹೇಳಿದೆ. ಆದರೆ ಅವೆಲ್ಲವೂ ವಿಫಲವಾಗಿವೆ ಎಂಬ ಮಾಹಿತಿಯನ್ನು ನೀಡಿದೆ (ಈ ಸಂಸ್ಥೆ ಅಮೆರಿಕದ ವಾಯುಪಡೆ ಹಾಗೂ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳಿಗೆ ರಹಸ್ಯ ವರದಿಗಳನ್ನು ನೀಡುತ್ತಿರುತ್ತದೆ. ಅದರಲ್ಲಿ ಭಾರತಕ್ಕೆ ಸಂಬಂಧಪಟ್ಟ ವರದಿ ಭಾರತದ ಕೆಲ ಮಾಧ್ಯಮಗಳಿಗೆ ಲಭ್ಯವಾಗಿದೆ).
ಚೀನದ ಕಂಪ್ಯೂಟರ್‌ ನೆಟ್‌ವರ್ಕ್‌ಗಳಿಂದ ಬಾಹ್ಯಾಕಾಶದಲ್ಲಿ ನಾಸಾ ಸ್ಥಾಪಿಸಿರುವ ಜೆಟ್‌ ನೆಟ್‌ವರ್ಕ್‌ ಲ್ಯಾಬೊರೇಟರಿ (ಜೆಪಿಎಲ್‌) ಸಂಶೋಧನ ಕೇಂದ್ರದ ಮೇಲೆ ದಾಳಿ ನಡೆಸಲಾಗಿತ್ತು. ಆದರೆ ಜೆಪಿಎಲ್‌ ತನ್ನ ನೆಟ್‌ವರ್ಕ್‌ಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದರಿಂದ ಏನೂ ಮಾಡಲಾಗಿರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:ಸಿಎಎ ವಿರುದ್ಧದ ಹೋರಾಟಕ್ಕೆ ಮಹಿಳೆಯರಿಗೆ ದಿನಗೂಲಿ! ಸಾಕ್ಷ್ಯ ಒದಗಿಸಿದ ಪೊಲೀಸರು
ಇದೇ ವೇಳೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ಮಾಹಿತಿ ನೀಡಿದ್ದು, ನಮ್ಮ ಉಪಗ್ರಹಗಳ ಮೇಲೆ ಸೈಬರ್‌ ದಾಳಿಗೆ ಯತ್ನಗಳು ನಡೆದಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ, ಆ ದಾಳಿಗಳು ಎಲ್ಲಿಂದ ನಡೆದಿವೆ ಎಂಬುದು ನಮಗೆ ತಿಳಿದಿಲ್ಲ. ಒಂದು ವೇಳೆ ಚೀನಾ ದಾಳಿ ನಡೆಸಿದ್ದರೂ ಅದರಿಂದ ನಮ್ಮ ಉಪಗ್ರಹಗಳಿಗೆ ಏನೂ ಆಗಿಲ್ಲ. ಹೀಗಾಗಿ ಅವರ ದಾಳಿ ವಿಫಲವಾಗಿದೆ. ಅಂತಹ ದಾಳಿಗಳಿಂದ ಏನೂ ಸಮಸ್ಯೆಯಾಗದ ರೀತಿಯಲ್ಲಿ ಇಸ್ರೊ ತನ್ನ ಉಪಗ್ರಹಗಳನ್ನು ಸಿದ್ಧಪಡಿಸಿದೆ ಎಂದಿದ್ದಾರೆ.
ಇಂತಹ ಸೈಬರ್‌ ದಾಳಿಗೆ ಪ್ರತಿ-ಬಾಹ್ಯಾಕಾಶ ಸಾಮರ್ಥ್ಯಗಳ ಭಾಗವಾಗಿ ಹಾಗೂ ಬಾಹ್ಯಾಕಾಶದಲ್ಲಿ ಶತ್ರುವನ್ನು ಎದುರಿಸಲು ಅಗತ್ಯವಾಗಿರುವ ಉಪಗ್ರಹ ವಿರೋಧಿ ಕ್ಷಿಪಣಿ ತಂತ್ರಜ್ಞಾನ(ಎ-ಸ್ಯಾಟ್‌)ವನ್ನು ಕಳೆದ ವರ್ಷ ಭಾರತ ಉಡಾವಣೆ ಮಾಡಿತ್ತು.
ಈ ಉಪಗ್ರಹ ಶತ್ರುಗಳ ಉಪಗ್ರಹಗಳನ್ನು ನಾಶಮಾಡುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಭಾರತದ ಪ್ರತಿ-ಬಾಹ್ಯಾಕಾಶ ತಂತ್ರಗಳನ್ನು ಮೀರಿದ ಹಾಗೂ ಭಾರಿ ಶಕ್ತಿ ಹೊಂದಿರುವ ಪ್ರತಿ-ಬಾಹ್ಯಾಕಾಶ ತಂತ್ರಗಳನ್ನು ಚೀನಾ ಹೊಂದಿದೆ ಎಂದು ಸಿಎಎಸ್ಐ ತನ್ನ ವರದಿಯಲ್ಲಿ ತಿಳಿಸಿದೆ.
ಬಿಳಿಗಿರಿರಂಗನಬೆಟ್ಟದ ಕಾಡಿನ ನಡುವೆ ಸಿಲುಕಿದ ಅಪ್ಪ-ಮಗ: ಹೀರೋ ಆಗಿ ಬಂದ ಪೊಲೀಸ್​

ನಿಮ್ಮ ಮದ್ವೆ ಆಗಿದ್ದೇ 1986ರಲ್ಲಿ; ಹೆಂಡ್ತಿ ಜತೆ 1982ರಲ್ಲಿ ಕ್ಯಾಸಿನೊಗೆ ಹೇಗೆ ಹೋದ್ರಿ?: HDKಗೆ ಟ್ರೋಲಿಗರ ಪ್ರಶ್ನೆ

ಉಗ್ರ ಸಂಘಟನೆ ಬಿಟ್ಟುಬಿಡಿ, ದಯವಿಟ್ಟು ಮನೆಗೆ ವಾಪಸಾಗಿ- ಗರ್ಭಿಣಿ ಪತ್ನಿಯ ಕಣ್ಣೀರ ಸಂದೇಶ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 + eighteen =
Remember me
