ಬೀಜಿಂಗ್‌:ಮಾಲ್‌ ಹಾಗೂ ಹಲವಾರು ಮಳಿಗೆಗಳಲ್ಲಿ ಮಾಂಸ, ಮೀನುಗಳನ್ನು ಕೂಡ ಈಗ ಸಂಸ್ಕರಿಸಿ ಇಡುವುದು ಮಾಮೂಲು. ಅವುಗಳು ದೇಹಕ್ಕೆ, ಆರೋಗ್ಯಕ್ಕೆ ಅಪಾಯಕಾರಿ ಎನ್ನುವುದರ ಬಗ್ಗೆ ಹಲವಾರು ತಜ್ಞರು ಎಚ್ಚರಿಕೆ ಕೊಡುತ್ತಲೇ ಬಂದಿದ್ದರೂ ಕೆಲವರು ಅವುಗಳನ್ನು ಖರೀದಿಸುತ್ತಿದ್ದಾರೆ.
ಆದರೆ ಇದೀಗ ಕರೊನಾ ತವರು ಚೀನಾದಿಂದಲೇ ಎಚ್ಚರಿಕೆಯೊಂದು ಬಂದಿದೆ. ಸಂಸ್ಕರಿಸಿಟ್ಟ ಚಿಕನ್‌ ಸೇರಿದಂತೆ ಮಾಂಸದ ಉತ್ಪನ್ನಗಳನ್ನು ಖರೀದಿಸುವವರಿಗೆ ಖುದ್ದು ಚೀನಾವೇ ಎಚ್ಚರಿಕೆ ನೀಡಿದ್ದು, ಹೀಗೆ ಖರೀದಿ ಮಾಡಿದರೆ ಅಪಾಯ ಕಟ್ಟಿಟ್ಟದ್ದು ಎಂದು ಹೇಳಿದೆ.
ಚೀನಾದ ಶೆನ್‍ಜೆನ್‌ನಲ್ಲಿನ ಗ್ರಾಹಕರು ಆಮದು ಮಾಡಿಕೊಂಡಿರುವ ಸಂಸ್ಕರಿತ ಆಹಾರದಲ್ಲಿ ಅದರಲ್ಲಿಯೂ ಹೆಚ್ಚಾಗಿ ಚಿಕನ್‌ನಲ್ಲಿ ಕರೊನಾ ಪಾಸಿಟಿವ್‌ ಇರುವುದು ತಿಳಿದುಬಂದಿದೆ ಎಂದು ಚೀನಾ ಹೇಳಿದೆ. ಬ್ರೆಜಿಲ್‌ನಲ್ಲಿ ಆಮದು ಮಾಡಿಕೊಂಡಿರುವ ಈ ಚಿಕನ್‌ ಪ್ಯಾಕೆಟ್‌ನಿಂದ ಕರೊನಾ ದೃಢಪಟ್ಟಿರುವುದಾಗಿ ವರದಿ ಹೇಳಿದೆ.
ಇದನ್ನೂ ಓದಿ:ಮೃತರ ಅಂಗಾಂಗ ದಾನ ಇನ್ನು ಕಡ್ಡಾಯ: ಶೀಘ್ರ ಮಸೂದೆ ಮಂಡನೆ
ಸಂಸ್ಕರಿಸಿ ಇಟ್ಟಿರುವ ಚಿಕನ್‌ನ ಮೇಲ್ಭಾಗವನ್ನು ಪರೀಕ್ಷೆಗೆ ಒಳಪಡಿಸಿದಾಗ ಕರೊನಾ ಸೋಂಕು ದೃಢಪಟ್ಟಿದ್ದು, ಇದನ್ನು ಯಾರೂ ಖರೀದಿ ಮಾಡದಂತೆ ಚೀನಾ ತನ್ನ ಜನತೆಗೆ ಎಚ್ಚರಿಕೆ ನೀಡಿದೆ.
ಚೀನಾದ ಶಾಂಡೊಂಗ್ ಪ್ರಾಂತ್ಯದ ಉತ್ತರ ನಗರವಾದ ಯಾಂಟೈನಲ್ಲಿಆಮದು ಮಾಡಿಕೊಂಡಿರುವ ಸಮುದ್ರ ಆಹಾರಗಳು ಹಾಗೂ ಚಿಕನ್‌ಗಳಲ್ಲಿ ಪಾಸಿಟಿವ್‌ ಇರುವುದು ದೃಢಪಟ್ಟಿದೆ. ಅಷ್ಟೇ ಅಲ್ಲದೇ ಚೀನಾದ ಅನ್ಹುಯಿ ಪ್ರಾಂತ್ಯದ ವುಹು ಎಂಬಲ್ಲಿನ ರೆಸ್ಟೋರೆಂಟ್‌ನಲ್ಲಿ ಈಕ್ವೆಡಾರ್ ಸೀಗಡಿ ಪ್ಯಾಕೇಜ್‌ನ ಹೊರಭಾಗದಲ್ಲಿ ಕೂಡ ಕರೊನಾ ಪಾಸಿಟಿವ್‌ ಇರುವುದು ಬೆಳಕಿಗೆ ಬಂದಿರುವುದಾಗಿ ಚೀನಾ ಹೇಳಿದೆ.
ನಾಯಿಗಳು ಕಚ್ಚಿ ತಿಂದ ಕರೊನಾ ಸೋಂಕಿತನ ಶವ!

ದಫನ್‌ ಆಗಿದ್ದವ ರಾತ್ರಿ ಹೆಂಡತಿಗೆ ಪ್ರತ್ಯಕ್ಷನಾಗಿ ನಾನೇ ನಿನ್ನ ಗಂಡ ಎಂದ!

ಫ್ರಿಜ್‌ ಟ್ರೇ ಬಳಸಿ ಆನ್‌ಲೈನ್‌ ಕ್ಲಾಸ್‌: ಶಿಕ್ಷಕಿಯ ಪ್ಲ್ಯಾನ್‌ಗೆ ಅಪಾರ ಮೆಚ್ಚುಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
