ಬೀಜಿಂಗ್​:ದಶಕಗಳ ಕಾಲ ಜಾರಿಯಲ್ಲಿದ್ದ ಒಂದು-ಮಗು ನೀತಿಯಿಂದ ಚೀನಾದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಅಂದರೆ, ಶೇ.33ರಷ್ಟು ಜನಸಂಖ್ಯೆ ಕಡಿಮೆಯಾಗಿದೆ. ಜನಸಂಖ್ಯೆ ತೀರಾ ಕಡಿಮೆಯಾದರೆ ದೇಶದ ಆರ್ಥಿಕತೆ ಕುಸಿದು ಹೋಗುತ್ತಿರುವ ಬಗ್ಗೆ ಭಾರಿ ಆತಂಕ ಸೃಷ್ಟಿಸಿದ್ದ ಚೀನಾ 2016ರಲ್ಲಿ ನಿಯಮಗಳನ್ನು ಬದಲಾಯಿಸಿ ಒಂದು ಮಗುವಿನಿಂದ ಎರಡು ಮಗುವಿಗೆ ನೀತಿ ಬದಲಿಸಿತು.
ಆದರೆ ಕಳೆದ ವರ್ಷ ಅಂದರೆ 2020ರಲ್ಲಿ ಬಿಡುಗಡೆಯಾದ ಚೀನಾದ ಸಾರ್ವಜನಿಕ ಭದ್ರತಾ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ 2020ರಲ್ಲಿ ನೋಂದಾಯಿತ ಜನನಗಳ ಸಂಖ್ಯೆ 10.04 ದಶಲಕ್ಷಕ್ಕೆ ಇಳಿದಿದೆ. ಇದು ಹಿಂದಿನ ವರ್ಷಕ್ಕಿಂತ 30 ಪ್ರತಿಶತಕ್ಕಿಂತಲೂ ಕಡಿಮೆಯಾಗಿದೆ. ಸತತ 4 ವರ್ಷಗಳಿಂದಲೂ ಮಕ್ಕಳ ಜನನ ಪ್ರಮಾಣ ಕಡಿಮೆಯಾಗಿದೆ ಎಂದು ಅದರಲ್ಲಿ ಉಲ್ಲೇಖವಾಗಿದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ ಲಿಂಗ ಸಮತೋಲನದಲ್ಲೂ ವ್ಯತ್ಯಾಸವಾಗಿದ್ದು, ಶೇಕಡಾ 52.7 ರಷ್ಟು ಬಾಲಕರು ಇದ್ದರೆ, ಶೇ. 47.3 ಪ್ರತಿಶತ ಬಾಲಕಿಯರು ಇದ್ದಾರೆ ಎಂದೂ ವರದಿ ತಿಳಿಸಿದೆ. ಇದರಿಂದ ಚೀನಾ ಕಂಗೆಟ್ಟು ಹೋಗಿದೆ. ಈ ಪರಿಯಲ್ಲಿ ಜನಸಂಖ್ಯೆ ಕುಸಿದರೆ ತಮ್ಮ ದೇಶದ ಪಾಡೇನು? ಇರುವವರೆಲ್ಲರೂ ವಯಸ್ಸಾಗಿಬಿಟ್ಟರೆ ಉದ್ಯೋಗ, ಆರ್ಥಿಕತೆಯಲ್ಲಿ ಸಮಸ್ಯೆ ಉಂಟಾಗುತ್ತದೆ ಎಂದು ಈ ಕಮ್ಯುನಿಸ್ಟ್​ ಸರ್ಕಾರ ಚಿಂತೆ ಮಾಡುತ್ತಿದೆ.
ಮೊದಲ ಬಾರಿಗೆ ಮದುವೆಯಾಗುವ ಚೀನಾದ ಜನರ ಸಂಖ್ಯೆ 2013ರಲ್ಲಿ 23.8 ದಶಲಕ್ಷ ಇದ್ದರೆ 2019ರಲ್ಲಿ ಅದರ ಪ್ರಮಾಣದ 13.9 ದಶಲಕ್ಷಕ್ಕೆ ಇಳಿದಿದೆ. ಹೀಗಾದರೆ ಜನಸಂಖ್ಯೆಯ ಗತಿಯೇನು ಎಂದುಕೊಂಡಿರುವ ಚೀನಾ ಸರ್ಕಾರ ಹೊಸ ಪ್ಲ್ಯಾನ್​ ಶುರು ಮಾಡಿದೆ.
ಹೀಗೆಯೇ ಎಲ್ಲರೂ ಒಂದು ಮಕ್ಕಳನ್ನು ಪಡೆಯುತ್ತಾ ಹೋದರೆ ವಿವಾಹದ ದರದಲ್ಲಿ ತೀವ್ರ ಕುಸಿತದಿಂದಾಗಿ ಚೀನಾದ ಕಮ್ಯುನಿಸ್ಟ್ ಪಕ್ಷದ ಆಡಳಿತಕ್ಕೆ ಅಪಾಯವನ್ನುಂಟುಮಾಡಬಹುದು ಎಂದು ಹೇಳಿರುವ ಸರ್ಕಾರ ಹೆಚ್ಚೆಚ್ಚು ಯುವಕರು ಶೀಘ್ರದಲ್ಲಿ ಮದುವೆಯಾಗಲು ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತಿದೆ. ಮಾತ್ರವಲ್ಲದೇ ಮದುವೆಯಾದ ದಂಪತಿ ಸದಾ ಒಟ್ಟಿಗೆ ಇರಿಸಲು ಬೇಕಾಗುವ ಎಲ್ಲಾ ಅನುಕೂಲಗಳನ್ನು ಸರ್ಕಾರದಿಂದಲೇ ಮಾಡಲಾಗುತ್ತಿದೆ.
ಇದಕ್ಕಾಗಿ ಸಿ.ಸಿ.ಪ ಯ ಯುವ ಶಾಖೆಯಾದ ಕಮ್ಯುನಿಸ್ಟ್ ಯೂತ್ ಲೀಗ್, ಮ್ಯಾಚ್‌ಮೇಕಿಂಗ್ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಭಾವಿ ಪತಿ- ಪತ್ನಿಗಾಗಿ ಯುವಕರು, ಅವರ ಪಾಲಕರು ಅಲೆದಾಡುವ ಚಿಂತೆಯೇ ಇಲ್ಲ. ಈ ಸಂಘಟನೆಗಳೇ ಇದೀಗ ಈ ಕಾರ್ಯವನ್ನು ವಹಿಸಿಕೊಂಡಿವೆ. ಮ್ಯಾಚ್​ಮೇಕಿಂಗ್​ ಮಾಡಿ ಬೇಗ ಅವರ ಮದುವೆ ಮಾಡಿಸುವುದೂ ಅಲ್ಲದೇ, ಒಟ್ಟಿಗೆ ಇರುವಂತೆ ಮಾಡುತ್ತಿದೆ.
ಅವಳೀಗ ಎರಡು ಮಕ್ಕಳ ತಾಯಿ- ಆದ್ರೂ ನನ್​ ಗಂಡನ ಬಗ್ಗೆ ಯಾಕೋ ಅನುಮಾನ; ಏನು ಮಾಡಲಿ?

ಮುಸ್ಲಿಂ ಹೆಣ್ಣುಮಕ್ಕಳಿಗೆ 18 ವರ್ಷ ಆಗದಿದ್ದರೂ ಪ್ರೌಢಾವಸ್ಥೆಗೆ ಬಂದರೆ ಮದುವೆಗೆ ಸ್ವತಂತ್ರರು; ಹೈಕೋರ್ಟ್​

ಜೀವನ ಫಿಲ್ಮ್​ ಇದ್ದಂಗೆ- ಕೆಲವು ವೇಳೆ ಸೂಪರ್​ಹಿಟ್​ ಆಗುತ್ತೆ, ಕೆಲವು ಸಲ ಫ್ಲಾಪ್​ ಆಗತ್ತೆ: ಗಳಗಳನೆ ಅತ್ತ ರಾಗಿಣಿ

ರೈತ ಮುಖಂಡರಿಂದ ಜೀವಕ್ಕೆ ಅಪಾಯವಿದೆ- ಹಿಂಸಾಚಾರದ ಕುರಿತು ನಟ ದೀಪ್​ ಸಿಧು ಹೇಳಿರುವ ಮಾಹಿತಿ ಇಲ್ಲಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
