ಲಾಸ್‌ ಏಂಜಲೀಸ್‌:ಅಮೆರಿಕದ ಲಾಲ್‌ ಏಂಜಲೀಸ್‌ನಲ್ಲಿ ಭಾರತೀಯ ಕಾಲಮಾನದ ನಸುಕಿನ 5.30ರ ವೇಳೆಗೆ ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು, ಇದರಲ್ಲಿ ಚೀನಾದ ಯುವತಿಗೆ ಆಸ್ಕರ್‌ ಪ್ರಶಸ್ತಿ ಲಭಿಸಿದೆ.
93ನೇ ಆಸ್ಕರ್​ ಪ್ರಶಸ್ತಿಗೆ ಕ್ಲೋಯಿ ಜಾವ್​ ಭಾಜನರಾಗಿದ್ದಾರೆ. ಇವರ ನೋಮಡ್​ಲ್ಯಾಂಡ್​ ಚಿತ್ರದ ನಿರ್ದೇಶನಕ್ಕಾಗಿ ‘ಅತ್ಯುತ್ತಮ ನಿರ್ದೇಶಕಿ’ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಮೂಲಕ ಆಸ್ಕರ್​ನಲ್ಲಿ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ಪಡೆದ ಏಷ್ಯಾದ ಮೊದಲ ಮಹಿಳೆ ಎಂಬ ಹೆಮ್ಮೆ ಕ್ಲೋಯಿ ಅವರದ್ದು.
ಆಸ್ಕರ್​ ಇತಿಹಾಸದಲ್ಲಿ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ಪಡೆದ ಎರಡನೇ ಮಹಿಳೆಯಾಗಿಯೂ ಇವರು ಹೊರಹೊಮ್ಮಿದ್ದಾರೆ. ಡೆನ್ಮಾರ್ಕ್​ನ ‘ಅನದರ್​ ರೌಂಡ್​’ ಸಿನಿಮಾಗೆ ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್​ ಫಿಲ್ಮ್​ ಗೌರವ ಸಿಕ್ಕಿದೆ. ಕನ್ನಡದ ಜಲ್ಲಿಕಟ್ಟು ಸಿನಿಮಾ ಕೂಡ ಈ ಪ್ರಶಸ್ತಿಗೆ ಪ್ರವೇಶ ಪಡೆದಿತ್ತು. ಆದರೆ ಅಂತಿಮ ಸುತ್ತಿಗೆ ನಾಮನಿರ್ದೇಶನಗೊಳ್ಳುವಲ್ಲಿ ಇದು ವಿಫಲವಾಗಿದೆ.
‘ಪ್ರಾಮಿಸಿಂಗ್​ ಎಂಗ್​ ವುಮನ್’​ ಚಿತ್ರಕ್ಕೆ ಎಮೆರಲ್ಡ್​ ಫೆನಲ್​ ಅವರಿಗೆ ಬೆಸ್ಟ್​ ಒರಿಜಿನಲ್​ ಸ್ಕ್ರೀನ್​ಪ್ಲೇ ಪ್ರಶಸ್ತಿ ಬಂದಿದೆ. ಜೂಡಸ್​ ಆ್ಯಂಡ್‌ ಬ್ಲ್ಯಾಕ್‌ ಮೇಷಿಯಾ ಚಿತ್ರದ ನಟನೆಗಾಗಿ ಡ್ಯಾನಿಯಲ್​ ಕಲೂಯಾ ಅವರು ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ.
‘ಮಿನಾರಿ’ ಸಿನಿಮಾದಲ್ಲಿ ನಟಿಸಿರುವ 73ರ ಪ್ರಾಯದ ಯು ಜಂಗ್​ ಯಾನ್​ ಅವರಿಗೆ ಅತ್ತುತ್ತಮ ಪೋಷಕ ನಟಿ ಪ್ರಶಸ್ತಿ ಸಿಕ್ಕಿದೆ. ಟೆನೆಟ್​ ಚಿತ್ರಕ್ಕೆ ಅತ್ಯುತ್ತಮ ವಿಷ್ಯುವಲ್‌ ಎಫೆಕ್ಟ್​ ಪ್ರಶಸ್ತಿ ಸಿಕ್ಕಿದ್ದು, ಅತ್ಯುತ್ತಮ ಧ್ವನಿ ವಿನ್ಯಾಸ ಮತ್ತು ಅತ್ಯುತ್ತಮ ಸಂಕಲನ ಪ್ರಶಸ್ತಿಯನ್ನು ‘ಸೌಂಡ್​ ಆಫ್​ ಮೆಟಲ್​’ ಚಿತ್ರ ಬಾಚಿಕೊಂಡಿದೆ. ಅತ್ಯುತ್ತಮ ಕೇಶವಿನ್ಯಾಸ ಹಾಗೂ ಅತ್ಯುತ್ತಮ ಮೇಕಪ್​ ವಿಭಾಗದಲ್ಲಿ ‘ಮಾ ರೇನೀಸ್​ ಬ್ಲ್ಯಾಕ್​ ಬಾಟಮ್​’ ಚಿತ್ರ ಪ್ರಶಸ್ತಿ ಪಡೆದಿದ್ದರೆ ಅತ್ಯುತ್ತಮ ಛಾಯಾಗ್ರಹಣ ಮತ್ತು ಅತ್ಯುತ್ತಮ ನಿರ್ಮಾಣ ವಿನ್ಯಾಸ ಪ್ರಶಸ್ತಿ ಮಾಂಕ್​ ಚಿತ್ರಕ್ಕೆ ಸಿಕ್ಕಿದೆ.
ಬ್ರಹ್ಮಚರ್ಯಪಾಲಕನಾಗಿದ್ದೆ… ಮನೆಕಟ್ಟಿ ಮುಗಿಯವವರೆಗೆ ವಾಚ್‌ಮನ್ನೂ ಆದೆ!

ಆಕ್ಸಿಜನ್‌ ಇದ್ದರೂ ಸೋಂಕಿತರ ಪ್ರಾಣ ಕಾಪಾಡಲಾಗದೇ ಕಣ್ಣೀರಿಟ್ಟ ವೈದ್ಯರು- ಉಸಿರು ನಿಲ್ಲುವ ಮುನ್ನವೇ ನಡೆಯಿತು ಪವಾಡ!

ಅರಬ್‌ ರಾಷ್ಟ್ರದಲ್ಲಿ ಹಾರಿತು ಭಾರತದ ಬಾವುಟ- ವಿದ್ಯುದ್ದೀಪಗಳಿಂದ ಅಲಂಕರಿಸಿ ಭಿನ್ನವಾಗಿ ನೀಡಿದರು ಸ್ಥೈರ್ಯ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 19 =
Remember me
