ಲಡಾಖ್​:ಯಾರು ಏನೇ ಕುತಂತ್ರ ಮಾಡಲಿ, ಕದನ ವಿರಾಮ ಉಲ್ಲಂಘಿಸಿ ಶತ್ರು ಸೈನಿಕರು ದಾಳಿಯೇ ಮಾಡಲಿ, ಭಾರತೀಯ ಸೇನೆ ಮಾತ್ರ ಸದಾ ಸಹಾಯಹಸ್ತ ಚಾಚುವಲ್ಲಿ ಹಿಂದೆ ಬಿದ್ದಿಲ್ಲ, ಶತ್ರುಗಳಾದರೂ ಅವರಿಗೆ ನಿಯಮಾನುಸಾರವಾಗಿ ಸಿಗಬೇಕಾದ ಮರ್ಯಾದೆಗಳಿಗೆ ಅನುಸಾರವಾಗಿಯೇ ನಡೆದುಕೊಳ್ಳುತ್ತದೆ. ಭಾರತೀಯ ಸೇನೆಯ ಇಂಥದ್ದೊಂದು ಔದಾರ್ಯ ಮತ್ತೊಮ್ಮೆ ಸಾಬೀತಾಗಿದೆ.
ಲಡಾಖ್​ ಗಡಿಯೊಳಗೆ ಅಕ್ರಮವಾಗಿ ನುಸುಳಿದ ಚೀನಿ ಸೈನಿಕರಿಗೆ ವೈದ್ಯಕೀಯ ನೆರವು, ಆಹಾರ ಮತ್ತು ಬೆಚ್ಚಗಿನ ಬಟ್ಟೆಗಳನ್ನು ಭಾರತೀಯ ಯೋಧರು ನೀಡಿದ್ದಾರೆ. ಇದಕ್ಕೆ ಕಾರಣ, ಆ ಸೈನಿಕ ಆಕಸ್ಮಿಕವಾಗಿ ಭಾರತದ ಗಡಿಯೊಳಗೆ ಪ್ರವೇಶಿಸಿರಬಹುದು ಎಂಬ ಕಾರಣಕ್ಕೆ!
ಲಡಾಖ್‌ನ ಚುಮಾರ್-ಡೆಮ್‌ಚೋಕ್ ಪ್ರದೇಶದಲ್ಲಿ ಚೀನದ ಪೀಪಲ್ಸ್ ಲಿಬರೇಶನ್ ಆರ್ಮಿಯ (ಪಿಎಲ್‌ಎ) ಸೈನಿಕನನ್ನು ಭಾರತೀಯ ಸೇನೆಯು ಬಂಧಿಸಿದೆ. ಆಕಸ್ಮಿಕವಾಗಿ ಭಾರತದ ಗಡಿಗೆ ಪ್ರವೇಶಿಸಿರಬಹುದು ಎನ್ನುವ ಕಾರಣಕ್ಕೆ ಅವನಿಗೆ ಎಲ್ಲ ರೀತಿಯ ನೆರವು ನೀಡಲಾಗಿದೆ. ಇಲ್ಲಿ ಕಠಿಣ ಹವಾಮಾನ ಪರಿಸ್ಥಿತಿಗಳಿಂದ ಅವನನ್ನು ರಕ್ಷಿಸಲು ವೈದ್ಯಕೀಯ ನೆರವು, ಆಹಾರ ಮತ್ತು ಬೆಚ್ಚಗಿನ ಬಟ್ಟೆಗಳನ್ನು ನೀಡಲಾಗಿದೆ ಎಂದು ಭಾರತೀಯ ಸೇನೆ ಹೇಳಿದೆ.
ಇದನ್ನೂ ಓದಿ:ವಿಚ್ಛೇದನಕ್ಕೆ ಪರಸ್ಪರ ಒಪ್ಪಿ ನಂತರ ಒಬ್ಬರು ಮನಸ್ಸು ಬದಲಿಸಿದರೆ ಪರಿಹಾರವೇನು?
ಈ ಸೈನಿಕನನ್ನು ಕಾರಪೋರಲ್ ವಾಂಗ್ ಯಾ ಲಗ್ ಎಂದು ಗುರುತಿಸಲಾಗಿದೆ. ಆ ಚೀನೀ ಸೈನಿಕನ ಬಳಿ ಮಿಲಿಟರಿ ಮತ್ತು ನಾಗರಿಕ ದಾಖಲೆಗಳು ಸಿಕ್ಕಿದ್ದು, ಆತ ಗೂಢಚಾರಿಕೆಗೆ ಬಂದಿದ್ದನಾ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಆತ ಹೇಳಿರುವ ಪ್ರಕಾರ ಕಳೆದುಹೋದ ತನ್ನ ಯಾಕ್ (ಹಸು ರೀತಿಯ ಪ್ರಾಣಿ) ಹುಡುಕುತ್ತಾ ಭಾರತದ ಭಾಗಕ್ಕೆ ಬಂದಿದ್ದನಂತೆ. ಆದ್ದರಿಂದ ಅಕಸ್ಮತ್ತಾಗಿ ಬಂದಿರಬಹುದು ಎಂದು ಊಹಿಸಲಾಗಿದೆ. ವಿಚಾರಣೆ ಬಳಿಕ ಸೇನಾ ನಿಯಮದ ಪ್ರಕಾರ ಅವರನ್ನು ಚೀನಾ ಗಡಿಭಾಗಕ್ಕೆ ವಾಪಸ್ ಕಳುಹಿಸಿಕೊಡುತ್ತೇವೆ’ ಎಂದು ಸೇನಾ ಮೂಲಗಳು ಸ್ಪಷ್ಟಪಡಿಸಿವೆ.
ಈ ಕುರಿತಂತೆ ಕಾಣೆಯಾದ ಸೈನಿಕ ಕುರಿತು ಚೀನ ಸೇನೆ ಹೇಳಿಕೆ ಬಿಡುಗಡೆ ಮಾಡಿದ್ದು, ಹಸ್ತಾಂತರ ಮಾಡುವಂತೆ ಕೇಳಿಕೊಂಡಿದೆ.
ಈ ನಡುವೆಯೇ, ಲಡಾಖ್‌ನ ಪ್ರಮುಖ 13 ಶಿಖರಗಳನ್ನು ಮೈಕೊರೆಯುವ ಚಳಿಯ ನಡುವೆ ಭಾರತ ಆಕ್ರಮಿಸಿಕೊಂಡಿದೆ. ಮೈನಸ್ 25 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಹೊಂದಿದೆ. ಭಾರತವು ಅಮೆರಿಕದಿಂದ ಹೆಚ್ಚಿನ ಯುದ್ಧ ಕಿಟ್ ಮತ್ತು ಚಳಿಗಾಲದ ಬಟ್ಟೆಗಳನ್ನು ಖರೀದಿಸಿದೆ.
ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಚೀನ 60 ಸಾವಿರ ಸೈನಿಕರನ್ನು ನಿಯೋಜಿಸಿದೆ ಎಂದು ಅಮೆರಿಕ ಕಳೆದ ವಾರ ಮಾಹಿತಿ ನೀಡಿತ್ತು.
ಇವಳು ನನ್ನ ಮುದ್ದು ಮಗಳೇ… ಆದರೆ ಸತ್ತಿದ್ದಾಳೆ… ನನಗೆ ಬೇಡ… ಭಯಾನಕ ಕೊಲೆಯ​ ಸುತ್ತ…

ಸಚಿವೆಯನ್ನು ‘ಐಟಂ’ ಎಂದು ಕರೆದು ವಿವಾದ ಎಳೆದುಕೊಂಡ ಮಾಜಿ ಸಿಎಂ

ಎಲ್ಲರೂ ‘ಐಟಂ’ಗಳೇ ಎಂದ ಕಾಂಗ್ರೆಸ್​- ಮಗಳನ್ನು ಹೀಗೆ ಕರೆದ್ರೆ ಸೋನಿಯಾ ಸುಮ್ಮನಿರ್ತಿದ್ರಾ ಎಂದ ಸಚಿವೆ!

₹680 ಕೋಟಿ ಅಕ್ರಮ- ಬಿಬಿಎಂಪಿ ಮುಖ್ಯ ಲೆಕ್ಕಾಧಿಕಾರಿ ಗೋವಿಂದರಾಜ್ ಅಮಾನತು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:9 − one =
Remember me
