ಬೆಂಗಳೂರು:ಸಿನಿ ಪ್ರಿಯರ ನೆಚ್ಚಿನ ತಾರೆಯಾಗಿದ್ದು, ಚಿಕ್ಕ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ ನಟ ಚಿರಂಜೀವಿ ಸರ್ಜಾ ಹಾಗೂ ಅವರ ಪತ್ನಿ ಮೆಘನಾ ದಂಪತಿಯ ಮುದ್ದು ಕಂದನ ಮುಖ ಇಂದು ಪ್ರೇಮಿಗಳ ದಿನ ಅನಾವಣರಗೊಂಡಿದೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಮೇಘನಾ, ಫೆಬ್ರವರಿ 12ರಂದು ರೋಮಾಂಚನಕಾರಿ ಸುದ್ದಿಯೊಂದು ಹೊರ ಬೀಳಲಿದೆ. ಆ ದಿನಕ್ಕಾಗಿ ನಾನು ಕೂಡ ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಆದರೆ ಸಮಯ ತಿಳಿಸಿರಲಿಲ್ಲ. ಬಳಿಕ ಫೆ.13 ರಂದು ಮತ್ತೊಂದು ಪೋಸ್ಟ್ ಹಾಕಿ ರಾತ್ರಿ 12 ಗಂಟೆಗೆ ಜ್ಯೂನಿಯರ್‌ ಚಿರುವನ್ನು ನಿಮಗೆ ಪರಿಚಯ ಮಾಡುತ್ತೇನೆ ಎಂದು ಮತ್ತೊಂದು ಪೋಸ್ಟ್‌ ಹಾಕಿದ್ದರು. ಇಂದು ರಾತ್ರಿ 12 ಗಂಟೆಗೆ ನಮ್ಮ ಪ್ರೀತಿಯ ಸಂಕೇತವಾಗಿರುವ ನನ್ನ ಮಗನನ್ನು ಪರಿಚಯಿಸಲು ಚಿರು ಮತ್ತು ನಾನು ಹೆಮ್ಮೆ ಪಡುತ್ತೇವೆ ಎಂದು ಬರೆದಿದ್ದರು.


A post shared by Meghana Raj Sarja (@megsraj)


ಇದೀಗ ಮೆಘನಾ ರಾಜ್‌ ತಮ್ಮ ಮಗನ ಫೋಟೋ ಹಾಗೂ ವಿಡಿಯೋ ಅನ್ನು ಇಂದು ಬಿಡುಗಡೆ ಮಾಡಿದ್ದಾರೆ. ಚಿರು ಅವರ ಪುತ್ರ ಜ್ಯೂನಿಯರ್‌ ಚಿರು ಹೇಗಿದ್ದಾನೆ ಎಂದು ಆತನನ್ನು ಕಾಣಲು ತುದಿಗಾಲ ಮೇಲೆ ನಿಂತು ಕಾತರರಾಗಿದ್ದ ಅಭಿಮಾನಿಗಳ ನಿರೀಕ್ಷೆ ಕೊನೆಗೂ ಫಲ ಕೊಟ್ಟಿದೆ.
ಮಗನ ಫೋಟೋವನ್ನು ನಟಿ ಮೇಘನಾ ಇನ್‌ಸ್ಟಾಗ್ರಾಮನ್‌ನಲ್ಲಿ ಕಿರು ವಿಡಿಯೋ ಅಪ್‌ಲೋಡ್‌ ಮಾಡಿದ್ದಾರೆ. ಈ ಮೂಲಕ ಮಗನನ್ನು ಚಿತ್ರ ರಸಿಕರು, ಅಭಿಮಾನಿಗಳಿಗೆ ತೋರಿಸಿದ್ದಾರೆ.

2017ರ ಅಕ್ಟೋಬರ್‌ 22 ರಂದು ಚಿರು ಸರ್ಜಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ವಿಡಿಯೋದ ಜತೆ ಮಗುವಿನ ವಿಡಿಯೋವನ್ನು ಮೇಘನಾ ತೋರಿಸಿದ್ದಾರೆ. ಜ್ಯೂನಿಯರ್‌ ಚಿರು ಮಲಗಿಕೊಂಡು ನಗುತ್ತಿರುವ ಫೋಟೋ ಮತ್ತು ಚಿರಂಜೀವಿ ಸರ್ಜಾಗೆ ಮಗುವನ್ನು ತೋರಿಸುವ ಫೋಟೋ ಈ ವಿಡಿಯೋದಲ್ಲಿದೆ.
2018ರ ಮೇ 26 ರಂದು ಚಿರು ಮತ್ತು ಮೇಘನಾ ಸರ್ಜಾ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. 2020 ಅಕ್ಟೋಬರ್‌ 22 ರಂದು ಮೇಘನಾ ಸರ್ಜಾ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು.
ನಮ್ಮನ್ನು ನಾವು ಪ್ರೀತಿಸಬೇಕು…

ಪ್ರತಿ ದಿನವೂ ವ್ಯಾಲೆಂಟೈನ್ಸ್ ಡೇ..

ಇಂದು ಕೃಷ್ಣ-ಮಿಲನಾ ಮದುವೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
