ಮುಂಬೈ:ಇಲ್ಲೊಬ್ಬ ಬಾರ್​ಗರ್ಲ್​ ಸತ್ತ ವ್ಯಕ್ತಿಯನ್ನೇ ಮದ್ವೆಯಾದಂತೆ ನಕಲಿ ದಾಖಲಿ ಸೃಷ್ಟಿಸಿ ಆತನ 20 ಕೋಟಿ ರೂಪಾಯಿಗಳನ್ನು ಗುಳುಂ ಮಾಡಿದ್ದಾಳೆ! ಈ ಬಾರ್​ಗರ್ಲ್​ಗೆ ಕ್ರೈಸ್ತ ಪಾದ್ರಿ ಹಾಗೂ ಇನ್ನೊಬ್ಬ ಖದೀಮ ಸಾಥ್​ ನೀಡಿದ್ದು, ಮೂವರೂ ಈಗ ಪೊಲೀಸರ ಅತಿಥಿ.
ಈ ಘಟನೆ ನಡೆದಿರುವುದು ಮುಂಬೈನಲ್ಲಿ. ಅಂಜಲಿ ಅಗರ್ವಾಲ್ (30), ಥಾಮಸ್ ರಾಮುಲ್ ಗೋಡ್ಪವಾರ್ (50) ಮತ್ತು ಮಹೇಶ್ ಕಾಟ್ಕರ್ (37) ಬಂಧಿತರು.
ಆಗಿದ್ದೇನು?ಅಂಜಲಿ ಬಾರ್​​ನಲ್ಲಿ ಕೆಲಸ ಮಾಡುತ್ತಿದ್ದಾಕೆ. ಬಾರ್​ಗೆ ಬರುತ್ತಿದ್ದ ಶ್ರೀಮಂತ ವ್ಯಕ್ತಿಯ ಪರಿಚಯ ಈಕೆಗೆ ಆಗಿತ್ತು. ಆತ ಸಿರಿವಂತ ಎಂದು ತಿಳಿಯುತ್ತಲೇ ಹೇಗಾದರೂ ಆತನ ಸ್ನೇಹ ಬೆಳೆಸಬೇಕೆಂದು ಈಕೆ ಹಾತೊರೆಯುತ್ತಿದ್ದಳು. ಅಂತೂ ಆತನನ್ನು ತನ್ನ ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯೂ ಆಗಿದ್ದಳು.
ಈ ಮಧ್ಯೆಯೇ ಆ ವ್ಯಕ್ತಿ ಮೃತಪಟ್ಟರು. ತನ್ನೆಲ್ಲ ಪ್ಲ್ಯಾನ್​ ಹಾಳಾಯಿತೆಂದು ಸುಮ್ಮನೆ ಕುಳಿತುಕೊಳ್ಳದ ಅಂಜಲಿ, ಆತನ ಜತೆ ತಾನು ಮದುವೆಯಾದಂತೆ ನಕಲಿ ಮ್ಯಾರೇಜ್​ ಸರ್ಟಿಫಿಕೇಟ್​ ಸೃಷ್ಟಿಸಿದಳು. ಇದಕ್ಕೆ ಪಾದ್ರಿ ಥಾಮಸ್ ರಾಮುಲ್ ಗೋಡ್ಪವಾರ್ ಮತ್ತು ಮಹೇಶ್ ಕಾಟ್ಕರ್ ಸಾಥ್​ ನೀಡಿದರು.
ತನ್ನ ಗಂಡ ಸತ್ತುಹೋಗಿದ್ದು, ಆತನ ಆಸ್ತಿಗೆ ತಾನೇ ಒಡತಿ ಎಂಬಂತೆ ಬಿಂಬಿಸಿ, ಆ ಮೃತ ವ್ಯಕ್ತಿಯ 19.70 ಕೋಟಿ ಮೌಲ್ಯದ ಆಸ್ತಿಯನ್ನು ಕಬಳಿಸುವಲ್ಲಿ ಯಶಸ್ವಿಯಾದಳು. ಈ ವಿಚಾರ ತಿಳಿದ ಬಳಿಕ ಮೃತ ವ್ಯಕ್ತಿಯ ತಾಯಿ, ನೌಪಾದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ತನಿಖೆ ನಡೆಸಿದಾಗ ಮೋಸದಾಟ ಬಯಲಿಗೆ ಬಂದಿದ್ದು ಎಲ್ಲರನ್ನೂ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಮಾಲೋಜಿ ಶಿಂಧೆ ಹೇಳಿದ್ದಾರೆ. ಮೂವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಕ್ಟೋಬರ್ 7 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು (ಏಜೆನ್ಸೀಸ್​)
ಇಂಜಿನಿಯರಿಂಗ್​ ಪರೀಕ್ಷೆಯಲ್ಲೂ ಇದೆಂಥ ಗೋಲ್​ಮಾಲ್? ರಷ್ಯನ್​ ಹ್ಯಾಕರ್ಸ್​ ನೆರವು ಪಡೆದಿದ್ದ 820 ವಿದ್ಯಾರ್ಥಿಗಳು!
ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ರಾಮದುರ್ಗದ ಲಾರಿ ಚಾಲಕನ ದುರ್ಮರಣ- ನಾಲ್ವರಿಗೆ ಗಂಭೀರ ಗಾಯ
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:13 + 19 =
Remember me
