ಲಂಡನ್‌:ಸುಮಾರು 47 ವರ್ಷದ ಸಿನಿಮಾ ನಿರ್ದೇಶಕ ಮದುವೆಯಾಗದೇ ಅವಿವಾಹಿತನಾಗಿ ಉಳಿದ ಕಾರಣಕ್ಕೆ ಕೋಪಗೊಂಡ ಹೆತ್ತವರೇ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಕೊಲೆಯ ನಂತರ ಮೃತದೇಹವನ್ನು ತುಂಡು ತುಂಡು ಮಾಡಿ ಕಸದ ಬುಟ್ಟಿಗೆ ಎಸೆದಿದ್ದಾರೆ!
ಇಂಥದ್ದೊಂದು ಅಮಾನುಷ ಘಟನೆ ನಡೆದಿರುವುದು ಬ್ರಿಟನ್‌ನಲ್ಲಿ. ಇರಾನಿನ ಸಿನಿಮಾ ನಿರ್ದೇಶಕ ಬಾಬಕ್​ ಖೋರಮ್‌ದೀನ್‌ ಪಾಲಕರಿಂದ ಕೊಲೆಯಾದವರು.
ಇರಾನ್‌ ಮೂಲದ ಬಾಬಕ್‌ ಪಾಲಕರ ಜತೆ ಲಂಡನ್‌ನಲ್ಲಿ ವಾಸವಾಗಿದ್ದರು. ಟೆಹ್ರಾನ್​ ವಿಶ್ವವಿದ್ಯಾಲಯದಲ್ಲಿ ಫಿಲ್ಮ್​ ಮೇಕಿಂಗ್​ನಲ್ಲಿ ಅವರು ಸ್ನಾತಕೋತ್ತರ ಪದವಿ ಪಡೆದಿದ್ದರು. 47 ವರ್ಷವಾಗಿದ್ದರೂ ವಿವಾಹವಾಗಿರಲಿಲ್ಲ. ಇದೇ ವಿಚಾರವಾಗಿ ಬಾಬಕ್ ಮತ್ತು ಪಾಲಕರ ಜತೆ ಜಗಳವಾಗಿದೆ.
🎥 پدر#بابک_خرمدین: از هیچ کدام از قتل‌هایی که کردم عذاب وجدان ندارم!
کابوسی به سراغم نمی‌آمد چون احساس گناهی نمی‌کردم
کسانی که کُشتم فساد اخلاقی بالایی داشتندpic.twitter.com/bV0wMLgVYI
— خبرگزاری تسنیم 🇮🇷 (@Tasnimnews_Fa)May 19, 2021

’ಇನ್ನೂ ಮಗನಿಗೆ ಮದುವೆ ಮಾಡಿಲ್ಲ ಎಂದು ಎಲ್ಲರೂ ಕೇಳುತ್ತಿದ್ದರಿಂದ ನಮಗೆ ಅವಮಾನವಾಗುತ್ತಿತ್ತು. ಮಾತ್ರವಲ್ಲದೇ ನಮಗೆ ಆತ ಕಿರುಕುಳ ನೀಡುತ್ತಿದ್ದ. ನಮ್ಮ ಪ್ರಾಣಕ್ಕೆ ಅಪಾಯವಿತ್ತು. ನಾವು ಸುರಕ್ಷಿತವಾಗಿ ಇರಲಿಲ್ಲ. ಇದೇ ಕಾರಣಕ್ಕೆ ಮಗನನ್ನು ಕೊಲೆ ಮಾಡಿದೆವು. ನಮ್ಮ ಗೌರವವನ್ನು ನಾವು ಇಟ್ಟುಕೊಳ್ಳಲು ಕೊಲೆ ಮಾಡಿದ್ದು, ಯಾವುದೇ ಪಶ್ಚಾತ್ತಾಪ ಇಲ್ಲ’ ಎಂದು ಪಾಲಕರು ಹೇಳಿದ್ದಾರೆ.
2010ರಲ್ಲಿ ಬಾಬಕ್​ ಲಂಡನ್​ಗೆ ಹೋಗಿದ್ದರು. ನಂತರ ಇರಾನ್​ಗೆ ವಾಪಸ್​ ಬಂದು ಸಿನಿಮಾ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದರು. ಬಾಬಕ್​ ಕೊಲೆಯನ್ನು ಮರ್ಯಾದಾ ಹತ್ಯೆ ಎಂದು ಪರಿಗಣಿಸಲಾಗುತ್ತಿದೆ. ಹಲವು ಕಿರುಚಿತ್ರಗಳನ್ನು ನಿರ್ದೇಶಿಸುವ ಮೂಲಕ ಬಾಬಕ್​ ಜನಪ್ರಿಯರಾಗಿದ್ದರು. ಆದರೆ ಅವರ ಜೀವನ ದುರಂತ ಅಂತ್ಯ ಕಂಡಿದೆ ಎಂದು ಇರಾನ್‌ ಪತ್ರಿಕೆಗಳು ವರದಿ ಮಾಡಿವೆ.
ಪರಸ್ತ್ರೀ ಜತೆ ದೈಹಿಕ ಸಂಪರ್ಕ ಹೊಂದಿದರೆ ವಿವಾಹಿತನಿಗೆ ಆಕೆಯೂ ಪತ್ನಿಯಾಗುತ್ತಾಳಾ?

ಎಮರ್ಜೆನ್ಸಿ ಇದೆ, ಅರ್ಜೆಂಟಾಗಿ ಸೆಕ್ಸ್‌ಗೆ ಹೋಗ್ಬೇಕು, ಇ- ಪಾಸ್‌ ಕೊಡಿ ಎಂದು ಅರ್ಜಿ: ಮುಂದಾದದ್ದೇ ರೋಚಕ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
