ಭೋಪಾಲ್:ಪಾನೀಪುರಿಗಳನ್ನು ಕೊಳಚೆ ನೀರು, ಮೂತ್ರದ ನೀರು ಬಳಸಿ ಮಾಡುವ ವಿಡಿಯೋಗಳು ಸಾಕಷ್ಟು ವೈರಲ್‌ ಆಗಿವೆ. ಅದೇ ರೀತಿ ರಸ್ತೆ ಬದಿಯ ವ್ಯಾಪಾರಿಗಳು ಗಲೀಜು ನೀರು ಬಳಸಿ ಅಥವಾ ಎಂಜಲು ಹಚ್ಚಿ ಆಹಾರ ತಯಾರಿಸುವುದು ಕೂಡ ವೈರಲ್‌ ಆಗಿವೆ.ಇದೀಗ ತರಕಾರಿ ಮಾರಾಟಗಾರನೊಬ್ಬ ಕೊತ್ತಂಬರಿ ಸೊಪ್ಪನ್ನು ಚರಂಡಿ ನೀರಿನಿಂದ ಶುಚಿಗೊಳಿಸಿ ಮಾರಾಟ ಮಾಡುವ ವಿಡಿಯೋ ಒಂದು ವೈರಲ್‌ ಆಗಿದೆ. ಅಂದ ಹಾಗೆ ಇದು, ಭೋಪಾಲ್‍ನ ಸಿಂಧಿ ಮಾರ್ಕೆಟ್‍ನಲ್ಲಿ ನಡೆದಿದ್ದು, ಇದನ್ನು ಯಾರೋ ವಿಡಿಯೋ ಮಾಡಿ ಹಾಕಿದ್ದಾರೆ.ಈ ವಿಡಿಯೋದಲ್ಲಿ ತರಕಾರಿ ಮಾರಾಟಗಾರನೊಬ್ಬ ಚರಂಡಿ ನೀರಿನಲ್ಲಿ ಕೊತ್ತಂಬರಿ ಸೊಪ್ಪನ್ನು ತೊಳೆಯುವುದನ್ನು ನೋಡಬಹುದು. ಅದನ್ನು ನೋಡಿದಾಗ ಆತನಿಗೆ ಬೈದು ಹೀಗೆ ಗಲೀಜು ನೀರಿನಲ್ಲಿ ಸೊಪ್ಪು ತೊಳೆಯಬೇಡ ಎಂದು ಪದೇ ಪದೇ ಹೇಳುತ್ತಾನೆ. ಆದರೆ ಮಾರಾಟಗಾರ ಅವನಿಗೇ ಬುದ್ಧಿ ಹೇಳಿ ತನ್ನ ಕೆಲಸ ಮುಂದುವರಿಸುತ್ತಾನೆ.ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಮಾರಾಟಗಾರನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು, ಸ್ಥಳೀಯ ಆರೋಗ್ಯ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಮಾರಾಟಗಾರನ ಬಗ್ಗೆ ತಿಳಿದು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ. ಅಂದಹಾಗೆ ತರಕಾರಿಗಳನ್ನು ಕೊಳಚೆ ನೀರಿನಲ್ಲಿ ತೊಳೆಯುವ ಹಲವು ವಿಡಿಯೋಗಳು ಕೂಡ ಇದಾಗಲೇ ಸಾಕಷ್ಟು ವೈರಲ್‌ ಆಗಿವೆ ಅನ್ನಿ. ಆದರೂ ಜನರು ಪಾನೀಪುರಿಯನ್ನಾಗಲಿ, ರೋಡ್‌ ಸೈಡ್‌ ಆಹಾರವನ್ನಾಗಲೀ, ತರಕಾರಿಯನ್ನಾಗಲಿ ಖರೀದಿಸುವುದನ್ನು ಬಿಟ್ಟಿಲ್ಲ, ಬಿಡಲ್ಲ ಎನ್ನುವುದೂ ಸತ್ಯವೇ.
ವಿಡಿಯೋ ನೋಡಿ:

सावाधान देखिए आपकी सेहत से कैसे हो रहा खिलवाड़, कंही पर ऐसी सब्जी तो नही खरीद रहे ,भोपाल के सिंधी कॉलोनी में नाली के पानी से धुक रही सब्जी@bhupendrasinghoजी@CollectorBhopal@digpolicebhopal मामले पर संज्ञान लेकर उचित कार्यवाही का आग्रह है ,@KamalPatelBJP@DrPRChoudharypic.twitter.com/10Em39YxPz— sudhirdandotiya (@sudhirdandotiya)October 26, 2021
सावाधान देखिए आपकी सेहत से कैसे हो रहा खिलवाड़, कंही पर ऐसी सब्जी तो नही खरीद रहे ,भोपाल के सिंधी कॉलोनी में नाली के पानी से धुक रही सब्जी@bhupendrasinghoजी@CollectorBhopal@digpolicebhopal मामले पर संज्ञान लेकर उचित कार्यवाही का आग्रह है ,@KamalPatelBJP@DrPRChoudharypic.twitter.com/10Em39YxPz
ನಾಳೆ ಮೀಟ್‌ ಆಗ್ತೇನೆ ಸರ್‌, ಆ ವಿಷ್ಯ ಮಾತನಾಡ್ವಾ ಎಂದಿದ್ರು… ವಿಧಿ ಇಷ್ಟೊಂದು ಕ್ರೂರನಾ? ಭಾವುಕರಾದ ಸಿಎಂ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − four =
Remember me
