ನವದೆಹಲಿ:ಮುಂದಿನ ವರ್ಷ 18 ವಯಸ್ಸು ನಿಮಗೆ ಆಗುವುದಾದರೆ, ನೀವು ಈಗಲೇ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಲು ಅರ್ಜಿ ಸಲ್ಲಿಸಬಹುದು. ಹೀಗೊಂದು ಹೊಸ ಪ್ರಕಟಣೆಯನ್ನು ಚುನಾವಣಾ ಆಯೋಗ ಹೊರಡಿಸಿದೆ. ಇದರ ಅರ್ಥ 17 ವರ್ಷಕ್ಕಿಂತ ಮೇಲ್ಪಟ್ಟರು ಈಗ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಲು ಮುಂಚಿತವಾಗಿ ಅರ್ಜಿ ಸಲ್ಲಿಸಬಹುದು ಎನ್ನುವುದಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಚುನಾವಣಾ ಪಟ್ಟಿಯನ್ನು ಜನವರಿ 1ರಂದು ಮಾತ್ರ ನವೀಕರಿಸಲಾಗುತ್ತಿದೆ. ಆದ್ದರಿಂದ 18 ವರ್ಷ ಪೂರೈಸಿದ ಯುವ ಜನರು ನೋಂದಣಿಗಾಗಿ ವರ್ಷ ವರ್ಷ ಕಾಯಬೇಕಿತ್ತು. ಒಂದು ವೇಳೆ ಈ ಮಧ್ಯದ ಅವಧಿಯಲ್ಲಿ ಚುನಾವಣೆಗಳು ನಡೆದರೆ 18 ವರ್ಷ ತುಂಬಿದರೂ ಮತ ಚಲಾಯಿಸುವ ಅವಕಾಶ ಸಿಗುತ್ತಿಲ್ಲ. ಆದ್ದರಿಂದ ಈಗ ಈ ಹೊಸ ನಿಯಮ ಜಾರಿಗೆ ತರಲಾಗಿದೆ.
ಈ ಮೊದಲು ಪ್ರತಿವರ್ಷದ ಜನವರಿ 1ರಂದು ಮಾತ್ರ ಚುನಾವಣಾ ಪಟ್ಟಿಯನ್ನು ನವೀಕರಿಸಲಾಗುತ್ತಿತ್ತು. ಇನ್ನು ಮುಂದೆ, ಜ.1ರ ಜತೆಗೆ ಏಪ್ರಿಲ್ 1, ಜುಲೈ 1 ಮತ್ತು ಅಕ್ಟೋಬರ್ 1 ಹೀಗೆ ನಾಲ್ಕು ಬಾರಿ ನವೀಕರಿಸಲಾಗುತ್ತದೆ. ಆದ್ದರಿಂದ ಅರ್ಹ ಯುವಕ- ಯುವತಿಯರಿಗೆ ಅದೇ ಸಾಲಿನಲ್ಲಿ ಬರುವ ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶ ಸಿಗುತ್ತದೆ.
ಪ್ರಾಥಮಿಕ ಪ್ರಕ್ರಿಯೆ ಬಳಿಕ ಅರ್ಜಿದಾರರು ಎಲೆಕ್ಟೊರಲ್ ಫೋಟೋ ಐಡೆಂಟಿಟಿ ಕಾರ್ಡ್ (ಇಪಿಐಸಿ) ಅಥವಾ ಮತದಾರರ ಗುರುತಿನ ಚೀಟಿ ಪಡೆದುಕೊಳ್ಳುತ್ತಾರೆ.
ಚುನಾವಣಾ ಆಯೋಗವು 18-19ರ ವಯಸ್ಸಿನ 1,736,181 ಹೊಸ ಮತದಾರರನ್ನು ನೋಂದಣಿ ಮಾಡಿಕೊಂಡಿದೆ. ಕಳೆದ ವರ್ಷ 14,526,678 ಹೊಸ ಮತದಾರರನ್ನು ಪಟ್ಟಿಗೆ ಸೇರಿಸಲಾಗಿತ್ತು. ಇದಲ್ಲದೆ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ನೋಂದಣಿಯನ್ನು ಜೋಡಿಸುವ ಪ್ರಕ್ರಿಯೆಯನ್ನು ಕೂಡ ಚುನಾವಣಾ ಆಯೋಗ ಆರಂಭಿಸಿದೆ.
ECI led by Chief Election Commissioner Shri Rajiv Kumar and Election Commissioner Shri Anup Chandra Pandey has directed the CEOs/EROs/AEROs of all States to work out tech-enabled solutions such that the youth are facilitated to file their advance applications: ECI— ANI (@ANI)July 28, 2022
ECI led by Chief Election Commissioner Shri Rajiv Kumar and Election Commissioner Shri Anup Chandra Pandey has directed the CEOs/EROs/AEROs of all States to work out tech-enabled solutions such that the youth are facilitated to file their advance applications: ECI

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − eleven =
Remember me
