ನವದೆಹಲಿ:ತ್ರಿವಳಿ ತಲಾಖ್​, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳ ಕುರಿತಂತೆ ಮಹತ್ವದ ತೀರ್ಪು ನೀಡಿದ ಸುಪ್ರೀಂಕೋರ್ಟ್​ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ (ಯು.ಯು.ಲಲಿತ್)​ ಅವರ ಹೆಸರನ್ನು ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ (ಸಿಜಿಐ) ಸ್ಥಾನಕ್ಕೆ ಶಿಫಾರಸು ಮಾಡಲಾಗಿದೆ.
ಹಾಲಿ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಅವರು ಆಗಸ್ಟ್ 26ರಂದು ನಿವೃತ್ತಿ ಹೊಂದಲಿದ್ದಾರೆ. ಈ ಹಿನ್ನೆಲೆಯಲ್ಲಿ, ಆ ಸ್ಥಾನಕ್ಕೆ ನ್ಯಾಯಮೂರ್ತಿ ಲಲಿತ್​ ಅವರ ಹೆಸರನ್ನು ಶಿಫಾರಸು ಮಾಡಿ ನ್ಯಾಯಮೂರ್ತಿ ಎನ್‌.ವಿ.ರಮಣ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ತಮ್ಮ ಉತ್ತರಾಧಿಕಾರಿಯನ್ನು ಶಿಫಾರಸು ಮಾಡುವಂತೆ ಕಾನೂನು ಸಚಿವಾಲಯ ಕೋರಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ರಮಣ್​ ಅವರು ಈ ಶಿಫಾರಸು ಮಾಡಿದ್ದಾರೆ.
ಒಂದು ವೇಳೆ ಇದು ಅಂತಿಮಗೊಂಡರೆ ನ್ಯಾಯಮೂರ್ತಿ ಲಲಿತ್​ ಅವರು ಸುಪ್ರೀಂಕೋರ್ಟ್​ನ 49ನೇ ಮುಖ್ಯನ್ಯಾಯಮೂರ್ತಿ ಆಗಲಿದ್ದಾರೆ. ನ್ಯಾಯಮೂರ್ತಿ ಲಲಿತ್​ ಅವರು ಸುಪ್ರೀಂಕೋರ್ಟ್​ ನ್ಯಾಯಮೂರ್ತಿಯಾಗುವ ಮೊದಲು ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿದ್ದರು. ವಕೀಲಿ ವೃತ್ತಿಯಲ್ಲಿ ಇರುವವರು ನೇರವಾಗಿ ಸುಪ್ರೀಂಕೋರ್ಟ್​ ನ್ಯಾಯಮೂರ್ತಿಯಾಗಿ ನೇಮಕಗೊಂಡು, ಈಕೆ ನೇಮಕಗೊಂಡ 6ನೇ ಹಿರಿಯ ವಕೀಲರು ಎನಿಸಿಕೊಂಡಿದ್ದಾರೆ.
ಅಂದಹಾಗೆ ನ್ಯಾಯಮೂರ್ತಿಗಳಾಗಿ ಲಲಿತ್​ ಅವರು ಕೆಲವು ಐತಿಹಾಸಿಕ ತೀರ್ಪುಗಳನ್ನು ನೀಡಿದ್ದಾರೆ. ಭಾರಿ ವಿವಾದವನ್ನೂ ಸೃಷ್ಟಿಸಿದ್ದ ತ್ರಿವಳಿ ತಲಾಖ್​ ತೀರ್ಪು ನೀಡಿದ್ದೂ ಇವರ ನೇತೃತ್ವದ ಪೀಠವೇ. ಬಟ್ಟೆ ಧರಿಸಿದ್ದಾಗ ಖಾಸಗಿ ಅಂಗ ಮುಟ್ಟಿದರೆ ಲೈಂಗಿಕ ದೌರ್ಜನ್ಯ ಅಲ್ಲ ಎಂದು ಬಾಂಬೆ ಹೈಕೋರ್ಟ್​ ನೀಡಿದ್ದ ಭಾರಿ ಟೀಕೆಗೆ ಗುರಿಯಾಗಿದ್ದ ತೀರ್ಪನ್ನು ರದ್ದು ಮಾಡಿದ್ದು ಕೂಡ ನ್ಯಾ.ಲಲಿತ್​ ಅವರ ನೇತೃತ್ವದ ಪೀಠ. ಹೈಕೋರ್ಟ್​ ನೀಡಿರುವ ತೀರ್ಪಿನಂತೆ ಹೋದರೆ ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಬದಲು ಅವರನ್ನೇ ಶಿಕ್ಷಿಸಿದಂತಾಗುತ್ತದೆ ಎಂದಿದ್ದ ನ್ಯಾ.ಲಲಿತ್​ ನೇತೃತ್ವದ ಪೀಠ, ಲೈಂಗಿಕ ಉದ್ದೇಶದಿಂದ ಸ್ಪರ್ಶಿಸುವ ಯಾವುದೇ ಸ್ಪರ್ಶ ಕಾನೂನು ಉಲ್ಲಂಘನೆಯಾಗಿದೆ ಎಂದು ಹೇಳಿತ್ತು.(ಏಜೆನ್ಸೀಸ್)
ಜ್ಞಾನವಾಪಿ ಕೇಸ್​ನಲ್ಲಿ ಮುಸ್ಲಿಂ ಪರ ವಾದಿಸುತ್ತಿದ್ದ ವಕೀಲ ಯಾದವ್​ಗೆ​ ಹೃದಯಾಘಾತ: ಕೋರ್ಟ್​ಗೆ ಉತ್ತರಿಸುವ ಮುನ್ನವೇ ನಿಧನ

ಸಿದ್ದರಾಮೋತ್ಸವದ ಸಂಭ್ರಮದಲ್ಲಿದ್ದ ಶಾಸಕ ಪಾಟೀಲ್​ಗೆ ಆಘಾತ: ವಾಪಸ್​ ಬರುವಾಗ ಕಾಲು ಮುರಿತ!

ಶಾಸಕನ ಹುಟ್ಟುಹಬ್ಬಕ್ಕೆ ಯುವತಿಯರ ಅಶ್ಲೀಲ ನೃತ್ಯ: ಮಧ್ಯರಾತ್ರಿ ಗಲಾಟೆಯಾದರೂ ಪೊಲೀಸರು ಗಪ್​ಚುಪ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
