ನವದೆಹಲಿ: ವಿಜ್ಞಾನ ವಿಷಯದಲ್ಲಿ ಅತೀವ ಆಸಕ್ತಿ ಹೊಂದಿರುವ ಗುಜರಾತ್‌ನ ಸೂರತ್‌ನ ಇಬ್ಬರು ವಿದ್ಯಾರ್ಥಿನಿಯರು ಕ್ಷುದ್ರ ಗ್ರಹವೊಂದನ್ನು ಕಂಡುಹಿಡಿಯುವ ಮೂಲಕ ಇದೀಗ ಭಾರಿ ಶ್ಲಾಘನೆಗೆ ಒಳಗಾಗಿದ್ದಾರೆ.
ಈ ಕ್ಷುದ್ರ ಗ್ರಹವು ಇನ್ನು ಕೆಲವೇ ದಿನಗಳಲ್ಲಿ ಭೂಮಿಯ ಸಮೀಪದಿಂದ ಹಾದು ಹೋಗಲಿದೆ. ಅದನ್ನು ಈ ಬಾಲಕಿಯರು ಪತ್ತೆ ಹಚ್ಚಿದ್ದಾರೆ. ವೈದೇಹಿ ವೆಕರಿಯ ಸಂಜಯ್‌ಭಾಯಿ ಹಾಗೂ ರಾಧಿಕಾ ಲಖನಿ ಪ್ರಫ‌ುಲ್ಲಭಾಯಿ ಎಂಬ ಬಾಲಕಿಯರು ಈ ಸಾಧನೆ ಮಾಡಿದ್ದಾರೆ.
ಈ ರೀತಿಯ ಯಾವುದೇ ಸಂಶೋಧನೆ ಮಾಡಿದರೆ ಅದನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಪ್ರಮಾಣೀಕರಿಸುವುದು ಅತಿ ಮುಖ್ಯ. ಆದರೆ ಈ ವಿದ್ಯಾರ್ಥಿನಿಯರು ಮಾಡಿರುವ ಸಂಶೋಧನೆಗೆ ನಾಸಾದಿಂದ ಕೂಡ ಮಾನ್ಯತೆ ಸಿಕ್ಕಿದೆ.
ಇದನ್ನೂ ಓದಿ:ಫ್ರಾನ್ಸ್‌ನಿಂದ ರಫೇಲ್‌ ವಿಮಾನದಲ್ಲಿ ಬರಲಿದ್ದಾರೆ ಕರುನಾಡ ವಿದ್ಯಾರ್ಥಿ
ತಮ್ಮ ಆಕಸ್ಮಿಕ ಸಂಶೋಧನೆಯಿಂದ ವಿಶ್ವಮಾನ್ಯತೆ ಸಿಕ್ಕಿರುವುದು ಖುದ್ದು ಈ ಬಾಲಕಿಯರಿಗೇ ನಂಬಲು ಆಗುತ್ತಿಲ್ಲವಂತೆ.
ಅಷ್ಟಕ್ಕೂ ಈ ವಿದ್ಯಾರ್ಥಿನಿಯರಿಗೆ ವಿಜ್ಞಾನ ಅದರಲ್ಲಿಯೂ ಬಾಹ್ಯಾಕಾಶದ ಬಗ್ಗೆ ಇಷ್ಟೊಂದು ಕುತೂಹಲ ಮೂಡಲು ಕಾರಣವಾದದ್ದು, ಶಾಲಾ ವಿದ್ಯಾರ್ಥಿಗಳಿಗಾಗಿ ಕೆಲ ತಿಂಗಳ ಹಿಂದೆ ಆಯೋಜಿಸಲಾಗಿದ್ದ ವಿಜ್ಞಾನ ಕಾರ್ಯಕ್ರಮ. ಈ ಎರಡು ತಿಂಗಳ ಕಾರ್ಯದಲ್ಲಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.ಭಾರತದ “ಸ್ಪೇಸ್‌ ಇಂಡಿಯಾ’, ಟೆಕ್ಸಾಸ್‌ನ ಹಾರ್ಡಿನ್‌ ಸೈಮನ್ಸ್‌ ವಿಶ್ವವಿದ್ಯಾಲಯ, ಅಂತಾರಾಷ್ಟ್ರೀಯ ಆ್ಯಸ್ಟ್ರೋನಾಮಿಕಲ್‌ ರೀಸರ್ಚ್‌ ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಆಸಕ್ತಿ ಕೆರಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹವಾಯ್‌ನಲ್ಲಿರುವ ಪ್ಯಾನ್‌ಸ್ಟಾರ್ಸ್‌ ಎಂಬ ಅತ್ಯಾಧುನಿಕ ಟೆಲಿಸ್ಕೋಪ್‌ ಬಳಸುವುದನ್ನು ಇಲ್ಲಿ ಕಲಿಸಿಕೊಡಲಾಗಿತ್ತು. ಈ ಬಗ್ಗೆ ಸಾಕಷ್ಟು ಕುತೂಹಲ ಹೊಂದಿದ್ದ ವಿದ್ಯಾರ್ಥಿನಿಯರು ಗ್ರಹವೊಂದು ಚಲಿಸುತ್ತಿರುವುದನ್ನು ಪತ್ತೆ ಹಚ್ಚುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ರೈಲು ಪ್ರಯಾಣಿಕನಿಗೆ ಮರುಜೀವ ನೀಡಿದ ಭದ್ರತಾ ಸಿಬ್ಬಂದಿ! ಸಿಸಿಟಿವಿಯಲ್ಲಿ ಸೆರೆ

ರೈಲು ಪ್ರಯಾಣಿಕನಿಗೆ ಮರುಜೀವ ನೀಡಿದ ಭದ್ರತಾ ಸಿಬ್ಬಂದಿ! ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × 1 =
Remember me
