ನವದೆಹಲಿ:ಹುಡುಗಿಯೊಬ್ಬಳ ಜತೆ ಸಂಬಂಧ ಹೊಂದಿರುವ ಸ್ನೇಹಿತನ ಜತೆ ವಾಗ್ವಿದಾದಕ್ಕೆ ಇಳಿದು ದ್ವಿತೀಯ ಪಿಯುಸಿಯ ಯುವಕನೊಬ್ಬ ಬರ್ಬರವಾಗಿ ಹತ್ಯೆಯಾಗಿರುವ ಭಯಾನಕ ಘಟನೆ ದೆಹಲಿಯಲ್ಲಿ ನಡೆದಿದೆ.
ಯುವರಾಜ್​ ಅಲಿಯಾಸ್​ ಅನ್ನು ಎಂಬ 20 ವರ್ಷದ ಯುವಕ ಕೊಲೆಯಾಗಿದ್ದಾನೆ. ರಕ್ಷಾಬಂಧನದ ಹಿನ್ನೆಲೆಯಲ್ಲಿ ತಂಗಿಯಿಂದ ರಾಖಿ ಕಟ್ಟಿಸಿಕೊಂಡಿದ್ದ ಯುವರಾಜ್​, ಆಕೆಗೆ ನೀಡಲು ಸಿಹಿ ತರಲು ಅಂಗಡಿಗೆ ಹೋಗಿದ್ದಾಗಲೇ ಕೊಲೆಯಾಗಿದ್ದಾನೆ! ಹುಡುಗಿಯ ವಿಚಾರವಾಗಿ ಯುವರಾಜ್​ ಹಾಗೂ ಸ್ನೇಹಿತರ ನಡುವೆ ನಡೆದ ಜಗಳವೇ ಈ ಕೊಲೆಗೆ ಕಾರಣ ಎನ್ನಲಾಗಿದೆ.
ಯುವರಾಜ್​ನ ಸ್ನೇಹಿತ ಸನ್ನಿ ಎಂಬಾತ ಅಲ್ಲಿಯೇ ಸಮೀಪದ ಮನೆಯೊಂದರ ಹುಡುಗಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆಕೆಯ ವಿಷಯವನ್ನು ಯುವರಾಜ್​ ಬಳಿ ಪ್ರಸ್ತಾಪಿಸಿದ್ದಾನೆ. ಅದೇನು ಇಬ್ಬರ ನಡುವೆ ಮಾತುಕತೆಯಾಗಿದೆಯೋ ಗೊತ್ತಿಲ್ಲ, ಒಟ್ಟಿನಲ್ಲಿ ಆ ಹುಡುಗಿಯ ವಿಚಾರವಾಗಿ ತೀವ್ರ ಸ್ವರೂಪದ ವಾಗ್ವಿವಾದ ಆಗಿದೆ. ಇದರಿಂದ ಸಿಟ್ಟಿಗೆದ್ದ ಸನ್ನಿ ಆತನ ಮೇಲೆ ಹಲ್ಲೆ ಮಾಡಿದ್ದಾನೆ. ಸನ್ನಿ ಜತೆಗಿದ್ದ ಇತರ ಸ್ನೇಹಿತ ಕಲ್ಲಿ ಅಲಿಯಾಸ್​ ಹಿಮಾಂಶು ಕೂಡ ಜತೆಯಾಗಿದ್ದಾನೆ. ಇಬ್ಬರೂ ಸೇರಿ ಯುವರಾಜ್​ನನ್ನು ಚಾಕುವಿನಿಂದ ಇರಿದಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವರಾಜ್​ನನ್ನು ದಾರಿಯಲ್ಲಿ ಹೋಗುವವರು ಯಾರೂ ಆಸ್ಪತ್ರೆಗೆ ಕರೆದುಕೊಂಡು ಹೋಗಲಿಲ್ಲ, ಬದಲಿಗೆ ವಿಡಿಯೋ ಮಾಡುವಲ್ಲಿ ತಲ್ಲೀನರಾಗಿದ್ದರು. ಕೊನೆಗೆ ಅಲ್ಲಿಯೇ ಯುವರಾಜ್​ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಣ್ಣ ತನಗಾಗಿ ಸಿಹಿ ಹಾಗೂ ಉಡುಗೊರೆ ತರುತ್ತಾನೆ ಎಂದು ಕಾದು ಕುಳಿತ ತಂಗಿಗೆ ಸಿಕ್ಕಿದ್ದು ಅಣ್ಣನ ಶವ!(ಏಜೆನ್ಸೀಸ್​)
ಬಾಹುಬಲಿ ನಟ ದುಗ್ಗುಬಾಟಿ ವೈವಾಹಿಕ ಜೀವನದಲ್ಲಿ ಬಿರುಗಾಳಿ? ಎಲ್ಲಾ ಫೋಟೋ ಡಿಲೀಟ್​- ಪತ್ನಿ ಹೇಳಿದ್ದೇನು?

ಇಡಿ, ಸಿಬಿಐ ಮನೆಗೇ ಬರ್ಲಿ ಬಿಡಿ… ಇಲ್ಲೇ ಕಚೇರಿ ಮಾಡಿ ಕೊಡುವೆ: ಕೇಂದ್ರಕ್ಕೆ ತೇಜಸ್ವಿ ಯಾದವ್ ಟಾಂಗ್

ವಿಸ್ಕಿ ಹೀರುವ ಆಸೆಯಲ್ಲಿ 5.35 ಲಕ್ಷ ರೂ. ಕಳಕೊಂಡ ಮಹಿಳೆ: ಮದ್ಯ ಸೇವಿಸೋ ಮೊದ್ಲೇ ಆಗೋಯ್ತು ಎಡವಟ್ಟು…

ಪರಿಹಾರದ ಹಣ ಹಂಚಿಕೆಯಲ್ಲಿ ಅವ್ಯವಹಾರ: ಐವರು ಇಂಜಿನಿಯರ್​ಗಳಿಗೆ ಬೆಳಗಾವಿ ಕೋರ್ಟ್​ನಿಂದ​ ಶಿಕ್ಷೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − three =
Remember me
