ಛತ್ತೀಸಗಢ:ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪ ಹೊತ್ತ ಛತ್ತೀಸಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ತಂದೆ ನಂದ ಕುಮಾರ್ ಬಘೇಲ್ (86) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇತ್ತೀಚೆಗೆ ಉತ್ತರಪ್ರದೇಶಕ್ಕೆ ಭೇಟಿ ನೀಡಿದ್ದ ನಂದಕುಮಾರ್ ಅವರು, ಮತದಾರರನ್ನು ಉದ್ದೇಶಿಸಿ, ಬ್ರಾಹ್ಮಣರನ್ನು ಗಂಗಾ ನದಿಯಿಂದ ವೋಲ್ಗಾಗೆ ಕಳುಹಿಸಬೇಕು. ಅವರು ವಿದೇಶಿಯರು. ಅವರು ನಮ್ಮ ದೇಶಕ್ಕೆ ಬಂದು ನಮ್ಮನ್ನೇ ಅಸ್ಪ್ರಶ್ಯರು ಎಂದು ಹೇಳುತ್ತಾರೆ. ಅವರು ನಮ್ಮ ಸರ್ವ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಆದ್ದರಿಂದ ಇಂಥ ಬ್ರಾಹ್ಮಣರು ನಮ್ಮ ಹಳ್ಳಿಯನ್ನು ಪ್ರವೇಶ ಮಾಡಬಾರದು. ಆದ್ದರಿಂದ ನಿಮ್ಮ ಹಳ್ಳಿಗಳಲ್ಲಿ ಅವರು ಪ್ರವೇಶ ಮಾಡದಂತೆ ತಡೆಹಿಡಿಯಿರಿ ಎಂದಿದ್ದರು. ಇತರ ಸಮಾಜದ ಜನರೊಂದಿಗೆ ತಾವು ಈ ವಿಷಯವಾಗಿ ಮಾತನಾಡಲಿದ್ದು, ಎಲ್ಲರೂ ಒಗ್ಗೂಡಿ ಬ್ರಾಹ್ಮಣರನ್ನು ಗ್ರಾಮಗಳಿಂದ ಬಹಿಷ್ಕರಿಸೋಣ ಎಂದು ಕರೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ದೂರು ದಾಖಲಾಗಿತ್ತು. ಒಂದು ಸಮಯದಾಯದ ವಿರುದ್ಧ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದರಿಂದ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.ಇನ್ನು ತಮ್ಮ ತಂದೆಯ ನಡವಳಿಕೆಗೆ ಖುದ್ದು ಮುಖ್ಯಂತ್ರಿ ಭೂಪೇಶ್ ಬಘೇಲ್ ವಿಷಾದಿಸಿದ್ದಾರೆ. ತಂದೆಯ ಬಂಧನದ ಕುರಿತಂತೆ ಟ್ವೀಟ್‌ ಮಾಡುವ ಮೂಲಕ ಅವರು ಪ್ರತಿಕ್ರಿಯೆ ನಡೆದಿದ್ದು, ನನ್ನ ಸರ್ಕಾರದಲ್ಲಿ ಯಾರೂ ಕಾನೂನನ್ನು ಮೀರುವಂತಿಲ್ಲ. ಅವರು ನನ್ನ ತಂದೆಯಾಗಿದ್ದರೂ, ಅವರು ಕೂಡ ಕಾನೂನಿನ ಮುಂದೆ ತಲೆಬಾಗಲೇ ಬೇಕು. ಮುಖ್ಯಮಂತ್ರಿಯಾಗಿ ವಿವಿಧ ಸಮುದಾಯಗಳ ನಡುವೆ ಸಾಮರಸ್ಯವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ಅವರು ಒಂದು ಸಮುದಾಯದ ವಿರುದ್ಧ ಟೀಕೆ ಮಾಡಿದ್ದರೆ, ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ. ಇದಕ್ಕೆ ಕಾನೂನು ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನನ್ನ ಮತ್ತು ತಂದೆಯ ರಾಜಕೀಯ ಆಲೋಚನೆಗಳು ಮತ್ತು ನಂಬಿಕೆಗಳು ವಿಭಿನ್ನವಾಗಿವೆ. ನಾನು ಅವರ ಮಗನಾಗಿ ಅವರನ್ನು ಗೌರವಿಸುತ್ತೇನೆ. ಆದರೆ ಮುಖ್ಯಮಂತ್ರಿಯಾಗಿ, ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಇಂತಹ ತಪ್ಪುಗಳಿಗಾಗಿ ನಾನು ಅವರನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದಿದ್ದಾರೆ.
एक पुत्र के रूप में मैं अपने पिता जी का सम्मान करता हूँ लेकिन एक मुख्यमंत्री के रूप में उनकी किसी भी ऐसी गलती को अनदेखा नहीं किया जा सकता जो सार्वजनिक व्यवस्था को बिगाड़ने वाली हो।
हमारी सरकार में कोई भी कानून से ऊपर नहीं है फिर चाहे वो मुख्यमंत्री के पिता ही क्यों न हों।
— Bhupesh Baghel (@bhupeshbaghel)September 5, 2021

VIDEO: ಮೊಟ್ಟೆಯ ಬದಲು ಊಸರವಳ್ಳಿಗೆ ಹುಟ್ಟಿತು ಮರಿ- ಕುತೂಹಲದ ವಿಡಿಯೋ ವೈರಲ್‌

ಶಿಲ್ಪಾ, ರಾಜ್‌ ಕುಂದ್ರಾಗೆ ಮತ್ತೊಂದು ಆಘಾತ- ಮೋಸ ಮಾಡಿ ಪೋರ್ನ್‌ ವಿಡಿಯೋ: ಕೋರ್ಟ್‌ನಲ್ಲಿ ಕೇಸ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + fifteen =
Remember me
