ಡೆಹ್ರಾಡೂನ್:ಭ್ರಷ್ಟಾಚಾರ ಆರೋಪ ಹೊತ್ತ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ವಿರುದ್ಧ ಸಿಬಿಐ ನಡೆಸುತ್ತಿರುವ ತನಿಖೆಗೆ ಸುಪ್ರೀಂಕೋರ್ಟ್​ ತಡೆ ನೀಡಿದೆ.ಇವರ ವಿರುದ್ಧ ತನಿಖೆಗೆ ಹೈಕೋರ್ಟ್​ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿಶೇಷ ಮೇಲ್ಮನವಿಯನ್ನು ಪುರಸ್ಕರಿಸಿದ ಸುಪ್ರೀಂಕೋರ್ಟ್​ ತನಿಖೆಗೆ ತಡೆ ನೀಡಿದೆ.ಗೋ ಸೇವಾ ಸೇವಾ ಅಯೋಗದ ಮುಖ್ಯಸ್ಥರ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪ ರಾವತ್​ ಅವರ ಮೇಲಿದೆ. ಈ ಸ್ಥಾನಕ್ಕೆ ತಮ್ಮ ಸಂಬಂಧಿಯೊಬ್ಬರನ್ನು ನೇಮಕ ಮಾಡುವ ಸಲುವಾಗಿ 2016ರಲ್ಲಿ ಬಿಜೆಪಿಯ ಉಸ್ತುವಾರಿಯಾಗಿದ್ದ ತ್ರಿವೇಂದ್ರ ಸಿಂಗ್​ ಅವರು, ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪವಿದೆ.ಇವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಪತ್ರಕರ್ತರೊಬ್ಬರು, ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್​, ರಾವತ್ ವಿರುದ್ಧ ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸುವಂತೆ ಡೆಹ್ರಾಡೂನ್ ಸಿಬಿಐ ಪೊಲೀಸ್ ಅಧೀಕ್ಷಕರಿಗೆ ನಿರ್ದೇಶಿಸಿದ್ದರು.
ಇದನ್ನೂ ಓದಿ:ಕೆ.ಕಲ್ಯಾಣ್​ ಕುಟುಂಬದಲ್ಲಿ ಹುಳಿ ಹಿಂಡಿದ್ದ ಗಂಗಾ ಕುಲಕರ್ಣಿ ಡೆತ್​ನೋಟ್​ ಪತ್ತೆಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ವಿರುದ್ಧದ ಆರೋಪಗಳ ಸ್ವರೂಪವನ್ನು ಪರಿಗಣಿಸಿ, ಸತ್ಯವನ್ನು ಬಿಚ್ಚಿಡುವುದು ಸೂಕ್ತವೆಂದು ಹೈಕೋರ್ಟ್​ ಅಭಿಪ್ರಾಯಪಟ್ಟಿತ್ತು. ಇದು ರಾಜ್ಯದ ಹಿತದೃಷ್ಟಿಯಿಂದ ಮತ್ತು ಅನುಮಾನಗಳನ್ನು ನಿವಾರಿಸಲು ತನಿಖೆ ಅಗತ್ಯ ಇದೆ. ಹೀಗಾಗಿ ನ್ಯಾಯಾಲಯ ಸಿಬಿಐ ತನಿಖೆ ನಡೆಸಬೇಕು ಎಂದು ನ್ಯಾಯಮೂರ್ತಿಗಳು ಹೇಳಿದ್ದರು.ಆದರೆ ಇದನ್ನು ಸುಪ್ರೀಂಕೋರ್ಟ್​ ತಿರಸ್ಕರಿಸಿದೆ. ರಾವತ್​ ಪರವಾಗಿ ವಾದ ಮಂಡಿಸಿದ್ದ ಅಟಾರ್ನಿ ಜನರಲ್​ ಕೆ.ಕೆ.ವೇಣುಗೋಪಾಲ ಅವರು, ಮುಖ್ಯಮಂತ್ರಿ ಸ್ಥಾನದಲ್ಲಿ ಇರುವವರ ವಿರುದ್ಧ ಎಫ್​ಐಆರ್​ ದಾಖಲು ಮಾಡುವ ಸಂದರ್ಭದಲ್ಲಿ ಅವರನ್ನು ವಿಚಾರಿಸಬೇಕು. ಆದರೆ ಯಾವುದೇ ರೀತಿಯ ವಿಚಾರಣೆ ನಡೆಸದೇ ಏಕಾಏಕಿ ಹೀಗೆ ಎಫ್​ಐಆರ್​ ದಾಖಲಿಸಿರುವುದು ನಿಯಮಬಾಹಿರ ಎಂದು ವಾದಿಸಿದ್ದರು. ಇದನ್ನು ಕೋರ್ಟ್​ ಮಾನ್ಯ ಮಾಡಿದೆ.
ಪರವಾನಗಿ ಇಲ್ಲದೇ ಮನೆಯಲ್ಲಿ ತಯಾರಿಸಿದ ಆಹಾರ ಮಾರಿದರೆ 5 ಲಕ್ಷ ದಂಡ, ಶಿಕ್ಷೆ!
ಪರಿಸರ ಮಾಲಿನ್ಯ ಮಾಡಿದ್ರೆ 5 ವರ್ಷ ಶಿಕ್ಷೆ, ₹ 1 ಕೋಟಿ ದಂಡ! ಸುಗ್ರೀವಾಜ್ಞೆ
ಕೆ.ಕಲ್ಯಾಣ್​ ಕುಟುಂಬದಲ್ಲಿ ಹುಳಿ ಹಿಂಡಿದ್ದ ಗಂಗಾ ಕುಲಕರ್ಣಿ ಡೆತ್​ನೋಟ್​ ಪತ್ತೆ
ಅಬ್ಬಾ! ಶ್ರೀರಾಮನ ಮೇಲೆ ಇದೆಂಥ ಪ್ರೀತಿ… ಕೋಲಾರದ ಪಾಚಾಸಾಬ್​ರ ಭಕ್ತಿಗೆ ಅವರೇ ಸಾಟಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 + 11 =
Remember me
