ಅಮೃತ್‌ಸರ:ಪಂಜಾಬ್‌ನಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಆಮ್‌ ಆದ್ಮಿ ಪಕ್ಷ (ಆಪ್‌) ಗದ್ದುಗೆ ಏರಿದೆ. ಭರ್ಜರಿ ಗೆಲುವಿನೊಂದಿಗೆ ಭಗವಂತ್‌ ಮಾನ್‌ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಸಚಿವ ಸಂಪುಟ ರಚನೆಯಾಗಿದ್ದು, ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಭರ್ಜರಿ ಗೆಲುವಿನ ಉತ್ಸಾಹದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಪಂಜಾಬ್‌ನ ಹೊಸ ಸಚಿವರಿಗೆ ಕೆಲವೊಂದು ಟಾಸ್ಕ್‌ ಕೊಟ್ಟಿದ್ದಾರೆ. ‘ಪಂಜಾಬ್‌ನ ಘಟಾನುಘಟಿಗಳನ್ನು ಸೋಲಿಸಿ ಯಶಸ್ಸು ಗಳಿಸಿರುವ ನಿಮಗೆಲ್ಲಾ ಅಭಿನಂದನೆಗಳು ಎಂದಿರುವ ಕೇಜ್ರಿವಾಲ್‌, ಪಂಜಾಬ್‌ನ ಬೆಳವಣಿಗೆ ಕುರಿತು ಇಡೀ ದೇಶದಲ್ಲಿ ಚರ್ಚೆ ಆಗುತ್ತಿದೆ. ಇದು ಶ್ಲಾಘನಾರ್ಹ ಕಾರ್ಯವಾಗಿದೆ. ನೂತನ ಮುಖ್ಯಮಂತ್ರಿ ಮಾನ್‌ ಅವರು ಅಧಿಕಾರ ಸ್ವೀಕರಿಸಿ ಮೂರೇ ದಿನಗಳಲ್ಲಿ ಹಲವಾರು ಕಾರ್ಯಗಳನ್ನು ಹಮ್ಮಿಕೊಂಡಿದ್ದು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ ಎಂದು ಶ್ಲಾಘಿಸಿದರು.
ಇದರ ನಡುವೆಯೇ ಮಾತಿನ ಭರದಲ್ಲಿ ಸಿಎಂ ಕೇಜ್ರಿವಾಲ್‌, ಸಚಿವರನ್ನು ಉದ್ದೇಶಿಸಿ, ದಿನಕ್ಕೆ ಇರುವುದು 24 ಗಂಟೆ ಮಾತ್ರ. ನೀವೆಲ್ಲರೂ ದಿನದ 30 ಗಂಟೆ ದುಡಿಯಬೇಕು. ಹೀಗಾದರೆ ಮಾತ್ರ ಜನರ ಆಶಯಗಳನ್ನು ಈಡೇರಿಸಲು ಸಾಧ್ಯ ಎಂದರು. ಇವರ ಈ ಮಾತಿಗೆ ಅರೆಕ್ಷಣ ನೂತನ ಸಚಿವರು ಅರೆಕ್ಷಣ ಕಕ್ಕಾಬಿಕ್ಕಿಯಾಗಿದ್ದು ನಿಜ. ದಿನಪೂರ್ತಿ ಕೆಲಸ ಮಾಡಬೇಕು, ವಿಶ್ರಮಿಸದೇ ಜನೋಪಯೋಗಿ ಕಾರ್ಯದಲ್ಲಿ ತೊಡಗಬೇಕು ಎಂದು ಹೇಳುವ ಬದಲು ದಿನದ 30 ಗಂಟೆ ಎಂದು ಹೇಳಿರುವುದೇ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್‌ ಆಗುತ್ತಿದೆ.
ರಾಜಕೀಯ ಮುಖಂಡರು ಮಾತಿನ ಭರದಲ್ಲಿ ಆಡುವ ಎಡವಟ್ಟು ಮಾತುಗಳನ್ನೇ ಕಾಯುತ್ತಿರುವ ಕೆಲವರು ಇದೀಗ ಕೇಜ್ರಿವಾಲ್‌ ಅವರ ಈ ವಿಡಿಯೋ ಶೇರ್‌ ಮಾಡಿಕೊಂಡು ಥಹರೇವಾರಿ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ. ವಿವಿಧ ಬಗೆಯ ಮೀಮ್ಸ್‌ಗಳೂ ಶೇರ್‌ ಆಗುತ್ತಿವೆ.
ಶಿಲ್ಪಾ ಮಂಜುನಾಥ್‌ ಎನ್ನುವವರು ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಿರುವ ಕೇಜ್ರಿವಾಲ್‌ ವಿಡಿಯೋ ಇಲ್ಲಿದೆ ನೋಡಿ…


ಕೇಸರಿ ಧ್ವಜವೇ ಒಂದು ದಿನ ರಾಷ್ಟ್ರಧ್ವಜ ಆಗತ್ತೆ- ಇದಕ್ಕೆ ಕಾರಣ ಏನೆಂದರೆ… ಕಲ್ಲಡ್ಕ ಪ್ರಭಾಕರ್‌ ಹೇಳಿಕೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 10 =
Remember me
