ಚೆನ್ನೈ:ಜನಸಾಮಾನ್ಯರಂತೆ ಸರಳ ಜೀವನ ನಡೆಸುತ್ತಾ, ಸದಾ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್‌ ಆಗಿರುತ್ತಾ ಜನರ ಬಳಿಯಲ್ಲಿಯೇ ಇರುವ ಅಪರೂಪದ ಮುಖ್ಯಮಂತ್ರಿಯೆಂದೇ ಪ್ರಸಿದ್ಧರಾದವರು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್‌. ಜಿಮ್‌ ಮಾಡುವ ವಿಡಿಯೋ ಹಾಕುತ್ತಾ, ಸಾಮಾನ್ಯರಂತೆ ರಸ್ತೆಯ ಮೇಲೆ ವಾಕಿಂಗ್‌ ಮಾಡುತ್ತಾ, ಪಾರ್ಕ್‌ನಲ್ಲಿ ಜಾಗಿಂಗ್‌ ಮಾಡುತ್ತಾ… ಹೀಗೆ ಜನರಿಗೆ ಬಹಳ ಹತ್ತಿರವಾಗಿರುವ ಇವರೀಗ ಮತ್ತೊಮ್ಮೆ ಭಾರಿ ಸುದ್ದಿಯಾಗಿದ್ದಾರೆ.
ಅದೇನೆಂದರೆ, ಚೆನ್ನೈನ ಕನ್ನಗಿ ನಗರ ಬಸ್‌ ನಿಲ್ದಾಣದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ನಂತರ ಜನರಿಂದ ತುಂಬಿದ್ದ ಬಸ್ ಒಳಗೆ ಹೋಗಿದ್ದಾರೆ. ನೋಡಲು ಥೇಟ್‌ ಮುಖ್ಯಮಂತ್ರಿ ಸ್ಟಾಲಿನ್‌ ಅಂತೆಯೇ ಇವರು ಕಾಣಿಸುತ್ತಿದ್ದಾರೆ ಅಲ್ಲವೇ ಎಂದು ಜನರು ಅವರನ್ನೇ ದಿಟ್ಟಿಸಿ ನೋಡಿದ್ದಾರೆ. ಆದರೆ ಇಂಥ ಫುಲ್‌ ರಶ್‌ ಬಸ್ಸಿನಲ್ಲಿ ಮುಖ್ಯಮಂತ್ರಿ ಎಂದಾದರೂ ಬರಲು ಸಾಧ್ಯವೇ ಎಂದು ಆ ವ್ಯಕ್ತಿಯನ್ನು ನೋಡಿ ಗುಸುಗುಸು ಮಾತನಾಡುತ್ತಾ ಸುಮ್ಮನಾಗಿದ್ದಾರೆ.
ನಂತರ ಇವರು ಯಾವುದೋ ವ್ಯಕ್ತಿಯಲ್ಲ, ಬದಲಿಗೆ ಸಿಎಂ ಸ್ಟಾಲಿನ್‌ ಅವರೇ ಎಂದು ಕೆಲವರಿಗೆ ಗೊತ್ತಾದಾಗ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾರೆ. ಆಗಲೇ ಉಳಿದವರಿಗೂ ತಿಳಿದದ್ದು ಇವರು ಯಾರೋ ಅಲ್ಲ, ಬದಲಿಗೆ ಖುದ್ದು ಮುಖ್ಯಮಂತ್ರಿಯೇ ಎಂದು! ನಂತರ ಸ್ಟಾಲಿನ್‌ ಅವರು ಪ್ರಯಾಣಿಕರನ್ನು ಮಾತನಾಡಿಸಿ, ಮಹಿಳೆಯರಿಗೆ ತಮ್ಮ ಸರ್ಕಾರ ನೀಡಿರುವ ಉಚಿತ ಬಸ್‌ ಪ್ರಯಾಣ ಸೌಲಭ್ಯಗಳ ಬಗ್ಗೆ ವಿವರಿಸಿದ್ದಾರೆ.
ಈ ವಿಡಿಯೋ ಇದೀಗ ಸಕತ್ ವೈರಲ್‌ ಆಗಿದ್ದು ಮುಖ್ಯಮಂತ್ರಿಯ ಬಗ್ಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಅಂದಹಾಗೆ ಸ್ಟಾಲಿನ್‌ ಅವರು, ಕರೊನಾ ಲಸಿಕೆ ಅಭಿಯಾನವು ನಗರದಲ್ಲಿ ಯಾವ ಪ್ರಗತಿ ಹಂತದಲ್ಲಿದೆ ಎಂದು ಪರಿಶೀಲನೆಗೆ ಹೊರಟಿದ್ದರು. ಈ ಸಮಯದಲ್ಲಿ ಬಸ್ ಏರಿದ್ದಾರೆ.
தி. நகர் – கண்ணகி நகர் வழித்தட பேருந்தில் மாண்புமிகு முதலமைச்சர்@mkstalinஅவர்கள் திடீரென ஆய்வு மேற்கொண்டு, பெண்களிடம் மகளிருக்கான இலவச பேருந்து பயண திட்டம் குறித்து கேட்டறிந்தார்.pic.twitter.com/QbKwZKpB3i
— CMOTamilNadu (@CMOTamilnadu)October 23, 2021

ಇಸ್ಲಾಂಗೆ ಗುಡ್‌ಬೈ ಹೇಳಿ ಹಿಂದೂವಾದ ಇಂಡೋನೇಷ್ಯಾದ ಅಧ್ಯಕ್ಷನ ಪುತ್ರಿ: ಮುಸ್ಲಿಂ ದೇಶದಲ್ಲಿ ಸಂಚಲನ

ಅರ್ಧ ಪರೀಕ್ಷೆ ಬರೆದ ಮೇಲೆ ಪ್ರಶ್ನೆ ಪತ್ರಿಕೆ ಬದಲಾಯಿಸಿದರು! ಕಾನ್‌ಸ್ಟೆಬಲ್‌ ಪರೀಕ್ಷೆಯಲ್ಲಿ ಎಡವಟ್ಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + nineteen =
Remember me
