ನೈನಿತಾಲ್ (ಉತ್ತರಾಖಂಡ):ಸುಮ್ಮನೇ ಕಾಳಿಂಗ ಸರ್ಪವನ್ನು ನೆನೆಸಿಕೊಂಡರೇನೇ ಮೈಯೆಲ್ಲಾ ಝುಂ ಎನಿಸುತ್ತದೆಯಲ್ಲವೆ? ಅಂಥದ್ದೊಂದು ಭಯಾನಕ ಎನಿಸುವ ಸರ್ಪ ನಿಮ್ಮ ಎದುರಿಗೆ ಬಂದು ಬಿಟ್ಟರೆ? ಹೋಗಲಿ ಮನೆಯೊಳಕ್ಕೆ ಬಂದುಬಿಟ್ಟರೆ…?
ಅಬ್ಬಾ… ದಯವಿಟ್ಟು ಇಂಥದ್ದೆಲ್ಲಾ ಕಲ್ಪನೆ ಮಾಡಿಕೊಳ್ಳಲೂ ಹೇಳಬೇಡಿ ಎಂದು ಉದ್ಗರಿಸುವವರೇ ಹೆಚ್ಚು.
ಆದರೆ ನಿಜವಾಗಿಯೂ ಅಂಥದ್ದೊಂದು ಘಟನೆ ಉತ್ತರಾಖಂಡದ ನೈನಿತಾಲ್‌ನ ಮನೆಯೊಂದರಲ್ಲಿ ನಡೆದಿದೆ. ಕಾಳಿಂಗ ಸರ್ಪ ಸೀದಾ ಹೋಗಿ ಮಂಚದ ಅಡಿಗೆ ಅಡಗಿ ಕುಳಿತಿದೆ.
A#KingCobra rescued by Forest Department's Rapid Response Team from a house at Nainital! 🎥DFO Nainital.@moefcc@ndtv@CentralIfs@AnimalsWorId@Uttkhand_Forest@nature@Discovery@MadrasCrocBank@REPTILESMag@mygovindia@MygovU@uttarakhandpost@ndtvindia@ZeeNews@dodo@IUCNpic.twitter.com/kXWameDNzf
— Akash K. Verma, IFS. (@verma_akash)August 11, 2020

ಈ ಮನೆಯವರು ಅದನ್ನು ನೋಡಿದ ತಕ್ಷಣ ಅರಣ್ಯ ಇಲಾಖೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಇಲಾಖೆ ಕ್ಷಿಪ್ರ ಕಾರ್ಯ ಪಡೆಯನ್ನು ಈ ಮನೆಗೆ ಕಳುಹಿಸಲಾಯಿತು. ಹಾವು ಹಿಡಿಯುವ ತಜ್ಞನೊಬ್ಬ ಸರ್ಪವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
Release of the#King#Cobrain it's natural habitat.@moefcc@UttarakhandIFS@uttarakhandpost@CentralIfs@dodo@UNBiodiversity@MadrasCrocBank@REPTILESMagpic.twitter.com/kfmECfLLFT
— Akash K. Verma, IFS. (@verma_akash)August 11, 2020

ನಂತರ ಈ ಹಾವನ್ನು ಕಾಡಿನೊಳಕ್ಕೆ ಬಿಟ್ಟು ಬರಲಾಗಿದೆ. ಅರಣ್ಯಾಧಿಕಾರಿ ಅಕಾಶ್ ಕುಮಾರ್ ವರ್ಮಾ ತಮ್ಮ ಟ್ವೀಟರ್ ಖಾತೆಯಲ್ಲಿ ಹಾವು ಹಿಡಿಯುವುದರಿಂದ ಅದನ್ನು ಕಾಡಿಗೆ ಬಿಟ್ಟು ಬರುವವರೆಗಿನ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಈ ಮೈ ಝುಂ ಎನಿಸುವ ವಿಡಿಯೋ ಇದೀಗ ಭಾರಿ ವೈರಲ್‌ ಆಗಿದ್ದು, ಸಾವಿರಾರು ಮಂದಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಪ್ಯಾಂಟಿನೊಳಗೆ ಹಾವು: ರಾತ್ರಿಯಿಡೀ ಕದಲದೇ ಕಳೆದ! ವಿಡಿಯೋ ನೋಡಿ

ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಪತ್ನಿ ಡೆಲಿವರಿ: ಶ್ಲಾಘನೆಗಳ ಮಹಾಪೂರ

ಹೋಟೆಲ್‌ನಲ್ಲಿ ರಾತ್ರಿ ಕಳೆದ ಪ್ರೇಮಿಗಳು ಮಾರನೆಯ ದಿನ ಶವವಾದರು!

ಅತ್ಯಂತ ಕ್ರೂರವಾಗಿ ಲಾಕಪ್‌ ಡೆತ್‌ ಮಾಡಿದ್ದ ಆರೋಪಿ ಪೊಲೀಸ್‌ ಕರೊನಾಕ್ಕೆ ಬಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − five =
Remember me
