ನೈನಿತಾಲ್:ಉತ್ತರಾಖಂಡದ ಅರಣ್ಯ ಅಧಿಕಾರಿಗಳು ಇದೇ ಮೊದಲ ಬಾರಿಗೆ ಹಿಮಾಲಯ ಪರ್ವತಶ್ರೇಣಿಯಲ್ಲಿ ಸಮುದ್ರಮಟ್ಟದಿಂದ ಸುಮಾರು 2,400 ಎತ್ತರದಲ್ಲಿ ಕಾಳಿಂಗ ಸರ್ಪವನ್ನು (ಒಫಿಯೋಫಾಗಸ್ ಹನ್ನಾ) ಪತ್ತೆ ಹಚ್ಚಿದ್ದಾರೆ.
ಹಿಮಾಲಯದ ತಪ್ಪಲಿನಲ್ಲಿ ಇಷ್ಟು ಎತ್ತರದ ಪ್ರದೇಶದಲ್ಲಿ ವಿಶ್ವದ ಅತ್ಯಂತ ವಿಷಪೂರಿತ ಹಾವು ಎಂದು ಎನಿಸಿರುವ ಕಾಳಿಂಗ ಸರ್ಪ ವಾಸ್ತವ್ಯ ಹೂಡಲು ಹೇಗೆ ಸಾಧ್ಯ ಎಂಬ ಬಗ್ಗೆ ತಜ್ಞರು ತಲೆಕೆಡಿಸಿಕೊಂಡಿದ್ದಾರೆ.
ಈ ಅಪರೂಪದ ಸನ್ನಿವೇಶದ ಬಗ್ಗೆ ವನ್ಯಜೀವಿ ಸಂರಕ್ಷಕರು ಅಧ್ಯಯನ ಶುರು ಮಾಡಿದ್ದಾರೆ. ತನ್ನ ನೈಜ ಇರುವಿಕೆಯ ಪರಿಸರವನ್ನು ಬಿಟ್ಟು ಈ ರೀತಿಯ ಪರಿಸರಕ್ಕೆ ಇಂಥ ವಿಷಪೂರಿತ ಹಾವುಗಳು ಹೇಗೆ ಹೊಂದಿಕೊಳ್ಳುತ್ತಿವೆ ಎಂಬ ಬಗ್ಗೆ ಸಂಶೋಧಕರು ಸಾಕಷ್ಟು ತಲೆಕೆಡಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಇದರ ಬಗ್ಗೆ ಆಳವಾದ ಸಂಶೋಧನೆ ಶುರುವಾಗಿದೆ. ಶೋಧನೆಯ ನೇತೃತ್ವವನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜೀವ್‌ ಚತುರ್ವೇದಿ ಅವರು ವಹಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಈ ಜಾತಿಯ ಹಾವುಗಳು ತಂಪಾದ ಪ್ರದೇಶವನ್ನು ಅರಸಿ ಅಲ್ಲಿಯೇ ನೆಲೆಸುತ್ತವೆ. ಆದರೆ ಇಲ್ಲಿ ಕಂಡುಬಂದಿರುವ ಬೃಹದಾಕಾರದ ಹಾವು, ಬೆಚ್ಚಗಿನ ಪ್ರದೇಶದಲ್ಲಿ ನೆಲೆಸಿರುವುದು ತಿಳಿದಿದೆ. ಈ ಹಿನ್ನೆಲೆಯಲ್ಲಿ ಇದರ ಬಗ್ಗೆ ಇನ್ನಷ್ಟು ಅಧ್ಯಯನದ ಅಗತ್ಯವಿದೆ ಎಂದು ಚತುರ್ವೇದಿ ಹೇಳಿದ್ದಾರೆ.
ಇದನ್ನೂ ಓದಿ:ಮೊಬೈಲ್‌ ಬಳಕೆದಾರರಿಗೆ ಬಿಗ್ ಶಾಕ್‌: ಶೀಘ್ರದಲ್ಲೇ ಏರಲಿದೆ ಕರೆ, ಡಾಟಾ ರೇಟ್‌?
ಚತುರ್ವೇದಿ ಅವರ ಪ್ರಕಾರ, ಇಂದು ಬಹುತೇಕ ಹಾವುಗಳು ಬೆಚ್ಚಗಿನ ಪ್ರದೇಶಗಳಿಗೆ ಒಗ್ಗಿ ಹೋಗಿವೆ. ಇದಕ್ಕೆ ಬಹುಶಃ ಜಾಗತಿಕ ತಾಪಮಾನ ಏರಿಕೆಯೂ ಸಹ ಒಂದು ಕಾರಣ ಇರಬಹುದು. ಜಾಗತಿಕ ತಾಪಮಾನದ ಕಾರಣದಿಂದ ತಂಪಾದ ಪ್ರದೇಶಗಳು ಬೆಚ್ಚಗಿರುತ್ತವೆ. ಈ ಹಿನ್ನೆಲೆಯಲ್ಲಿ ಅದಕ್ಕೆ ಹಾವುಗಳ ಹೊಂದಿಕೊಳ್ಳುತ್ತಿವೆ ಎಂದಿದ್ದಾರೆ.
ಈ ಮೊದಲು ಡೆಹ್ರಾಡೂನ್ ಮೂಲದ ವೈಲ್ಡ್‌ಲೈಫ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ಸಂಶೋಧಕ ಜಿಗ್ನಾಸು ಡೋಲಿಯಾ ಅವರು 2018ರಲ್ಲಿ ಹ್ಯಾಚ್ಲಿಂಗ್ ಪರ್ವತ ಶ್ರೇಣಿಯಲ್ಲಿ ಸಮದ್ರಮಟ್ಟಕ್ಕಿಂತ 2,303 ಮೀಟರ್‌ ಎತ್ತರದಲ್ಲಿ ಸಿಕ್ಕ ಹಾವುಗಳ ಬಗ್ಗೆ ವಿವರಿಸಿದ್ದರು. ಅದಕ್ಕೂ ಮೊದಲು ಅಂದರೆ 2012 ರಲ್ಲಿ ಮುಕ್ತೇಶ್ವರದಲ್ಲಿರುವ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ (ಐವಿಆರ್‌ಐ) ಸಂಶೋಧಕರು  1,840 ಎತ್ತರದ ಪ್ರದೇಶದಲ್ಲಿ, ನಂತರ ಸಿಕ್ಕಿಂನಲ್ಲಿ 1,840 ಮೀಟರ್‌, ಮಿಜೋರಾಂನಲ್ಲಿ 1,170 ಮೀಟರ್‌ ಮತ್ತು ನೀಲಗಿರಿನಲ್ಲಿ 1,830 ಮೀಟರ್‌  ಎತ್ತರದ ಪ್ರದೇಶಗಳಲ್ಲಿ ಹಾವುಗಳು ಪತ್ತೆಯಾಗಿದ್ದವು. ಇವೆಲ್ಲವುಗಳ ಕುರಿತಾಗಿಯೂ ಇದೀಗ ಅಧ್ಯಯನ ಶುರುವಾಗಿದೆ.
ವಿಶ್ವದ ಅತ್ಯಂತ ಶ್ರೀಮಂತ ತೈಲ ಉತ್ಪಾದನಾ ರಾಷ್ಟ್ರ ದಿವಾಳಿಯತ್ತ…

ಮೊಬೈಲ್‌ ಬಳಕೆದಾರರಿಗೆ ಬಿಗ್ ಶಾಕ್‌: ಶೀಘ್ರದಲ್ಲೇ ಏರಲಿದೆ ಕರೆ, ಡಾಟಾ ರೇಟ್‌?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 13 =
Remember me
