ಚಂಡೀಗಢ:ಕಾಲೇಜಿನಿಂದ ಹೊರಕ್ಕೆ ಬರುತ್ತಿದ್ದ ಯುವತಿಯೊಬ್ಬಳನ್ನು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಹರಿಯಾಣದ ಫರಿದಾಬಾದ್​ನಲ್ಲಿ ಕಳೆದ ಸೋಮವಾರ ನಡೆದಿತ್ತು. ಇದರ ಭಯಾನಕ ವಿಡಿಯೋ ಕೂಡ ವೈರಲ್​ ಆಗಿತ್ತು.
ನಿಖಿತಾ ತೋಮರ್ ಎಂಬ 21 ವರ್ಷದ ಯುವತಿ ಗುಂಡಿಗೆ ಬಲಿಯಾಗಿದ್ದಾಳೆ. ಪರೀಕ್ಷೆ ಮುಗಿಸಿ ಈಕೆ ಕಾಲೇಜಿನಿಂದ ಹೊರಬರುತ್ತಿದ್ದಳು. ಈ ಸಂದರ್ಭದಲ್ಲಿ ಆಕೆಯ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು.
ಯುವತಿಯ ಕಾಲೇಜಿನ ಹೊರಗಡೆ ವಾಹನದಲ್ಲಿ ಬಂದಿದ್ದ ಆರೋಪಿ ಆಕೆಯನ್ನು ಬಲವಂತಾಗಿ ಕಾರೊಳಗೆ ಹಾಕಿ ಅಪಹರಿಸಲು ಯತ್ನಿಸಿದ್ದಾನೆ. ಈ ವೇಳೆ ಯುವತಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಆರೋಪಿಗೆ ಮತ್ತೊಬ್ಬ ಸಾಥ್ ನೀಡಿದ್ದು, ಯುವತಿ ಮೇಲೆ ಗುಂಡು ಹಾರಿಸಿದ್ದಾರೆ. ಆರೋಪಿಗಳು ಯುವತಿ ಮೇಲೆ ಗುಂಡು ಹಾರಿಸಿ ವಾಹನ ಹತ್ತಿ ಪರಾರಿಯಾಗಿದ್ದಾರೆ. ಇತ್ತ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಕೂಡಲೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಂಭೀರ ಗಾಯಗೊಂಡಿದ್ದರಿಂದ ಯುವತಿ ಮೃತಪಟ್ಟಿದ್ದಾಳೆ.
ಈ ಪ್ರಕರಣವನ್ನು ಭೇದಿಸಿರುವ ಪೊಲೀಸರಿಗೆ ಲವ್​ ಜಿಹಾದ್​ ವಾಸನೆ ಬಡಿದಿದೆ. ಯುವತಿಯನ್ನು ಮಸ್ಲಿಂ ಧರ್ಮಕ್ಕೆ ಮತಾಂತರ ಮಾಡುವ ಸಂಚು ನಡೆದಿತ್ತು. ಆದರೆ ಆಕೆ ಒಪ್ಪದಿದ್ದ ಕಾರಣ, ಮೊದಲು ಅಪಹರಣ ಮಾಡಲು ನೋಡಿದ್ದಾರೆ, ಅದು ಸಾಧ್ಯವಾಗದಿದ್ದರೆ ಶೂಟ್​ಔಟ್​ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಮೂಲಗಳು ಹೇಳಿವೆ.
ಶೂಟೌಟ್​ ವಿಡಿಯೋ ಸಿಸಿಟಿವಿಯಲ್ಲಿ ಕಂಡಂತೆ:https://twitter.com/rajshekharTOI/status/1320926170716663808
ಆರೋಪಿ ಜತೆ ಸ್ನೇಹ?ಫರೀದಾಬಾದ್‌ನ ಬಲ್ಲಭಗಢದ ಕಾಲೇಜಿನಲ್ಲಿ ಬಿ.ಕಾಂ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದ ನಿಖಿತಾಗೆ ಈಗ ಶೂಟ್​ಔಟ್​ ಪ್ರಕರಣದ ಪ್ರಮುಖ ಆರೋಪಿ ತೌಸೀಫ್‌ ಜತೆ 2018ರಿಂದಲೂ ಸ್ನೇಹ ಇತ್ತು. ತೌಸೀಫ್‌ ಇಸ್ಲಾಂಗೆ ಮತಾಂತರ ಆಗುವಂತೆ ನಿಖಿತಾಗೆ ಒತ್ತಡ ಹಾಕಿದ್ದ. ಆದರೆ ಆಕೆ ಇದಕ್ಕೆ ಒಪ್ಪದೆ ಇದ್ದಿದ್ದರಿಂದ ಈ ರೀತಿ ಕೊಲೆ ಮಾಡಲಾಗಿದೆ. ಇದೊಂದು ಲವ್‌ ಜಿಹಾದ್‌ ಕೊಲೆ ಎಂದು ನಿಖಿತಾ ಸಹೋದರ ಆರೋಪಿಸಿದ್ದಾನೆ.
ಈ ಹಿನ್ನೆಲೆಯಲ್ಲಿ ಪರೀಕ್ಷೆ ಮುಗಿಸಿ ಬರುವುದನ್ನೇ ತೌಸೀಫ್‌ ತನ್ನ ಸ್ನೇಹಿತ ರೇಹಾನ್‌ ಜತೆ ಕಾರಿನಲ್ಲಿ ಕೂತು ಹೊಂಚು ಹಾಕುತ್ತಿದ್ದ. ಆಕೆ ಹೊರಗೆ ಬರುತ್ತಿದ್ದಂತೆಯೇ ಅಪಹರಣ ಮಾಡಿ ಕರೆದುಕೊಂಡು ಹೋಗುವ ಪ್ಲ್ಯಾನ್​ ಮಾಡಲಾಗಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಗುಂಡಿನ ದಾಳಿ ನಡೆಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಸದ್ಯ ಫರೀದಾಬಾದ್‌ ಪೊಲೀಸರು ಎಫ್‌ಐಆರ್‌ನಲ್ಲಿ ಎಲ್ಲೂ ಕೂಡ ಲವ್‌ ಜಿಹಾದ್‌ ಬಗ್ಗೆ ಪ್ರಸ್ತಾಪಿಸಿಲ್ಲ, ತನಿಖೆ ನಡೆಸುತ್ತಿದ್ದಂತೆ ರಿಪೋರ್ಟ್‌ಗೆ ತಿದ್ದುಪಡಿ ತರಲಾಗುವುದು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಇದಕ್ಕೆ ಕಾರಣವೂ ಇದೆ. ಅದೇನೆಂದರೆ, ಈ ಪ್ರಕರಣ ಲವ್​ ಜಿಹಾದೋ ಅಥವಾ ಇನ್ನೊಂದೆಡೆ ಆರೋಪಿಸಲಾದಂತೆ ಇದು ಇವರಿಬ್ಬರ ನಡುವಿನ ಸ್ನೇಹ ಸಂಬಂಧ ಮುರಿದುಬಿದ್ದುದಕ್ಕೋ ಎನ್ನುವುದು ತಿಳಿಯುತ್ತಿಲ್ಲ ಎಂದಿದ್ದಾರೆ ಪೊಲೀಸರು.
ಅದೇನೆಂದರೆ, ತೌಸೀಪ್​ ಜತೆ ಸ್ನೇಹದಿಂದ ಇದ್ದ ನಿಖಿತಾ ನಂತರ ಆತನ ಸ್ನೇಹ ಬಿಟ್ಟಿದ್ದಳು. ಆದರೆ ತೌಸೀಫ್‌ ಆಕೆಯ ಮನೆ ಬಳಿ ಬರುವುದು, ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸುವ ಕೆಲಸ ಮಾಡಿದ್ದ. ಆದ್ದರಿಂದ ನಿಖಿತಾ ಮನೆಯವರು ಪೊಲೀಸರಿಗೆ ದೂರು ಕೂಡ ನೀಡಿದ್ದಳು. ಇದರಿಂದಾಗಿ ತೌಸೀಫ್‌ನ ವೈದ್ಯಕೀಯ ಶಿಕ್ಷಣ ಅರ್ಧಕ್ಕೆ ನಿಂತಿತ್ತು. ಈ ಹಿನ್ನೆಲೆಯಲ್ಲಿ ದ್ವೇಷದಿಂದ ಕೊಲೆ ಮಾಡಿರುವುದಾಗಿ ಹೇಳಲಾಗುತ್ತಿದೆ. ಎಲ್ಲಾ ಆಯಾಮಗಳಿಂದ ತನಿಖೆ ನಡೆಸಿದ ಬಳಿಕ ಸತ್ಯಾಂಶ ಹೊರಬರಲಿದೆ ಎಂದಿದ್ದಾರೆ ಪೊಲೀಸರು.
ಅಯ್ಯೋ… ವಿಡಿಯೋದಲ್ಲಿ ಇರುವುದು ನಾನಲ್ಲ: ಕೊಡಗು ಜಿಲ್ಲಾಧಿಕಾರಿ ಅನೀಸ್​

ಈಕೆಯ ಎದೆಹಾಲಿಗೆ ಲಕ್ಷ ಲಕ್ಷ ರೂಪಾಯಿ- ಮನೆಯಲ್ಲೇ ಕೂತು ಸಿಕ್ಕಾಪಟ್ಟೆ ಸಂಪಾದನೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × 2 =
Remember me
