ಚೆನ್ನೈ:ಉತ್ತರ ಪ್ರದೇಶದ ಹಾಪುರ್​ ಜಿಲ್ಲೆಯಲ್ಲಿ ಹುಟ್ಟುಹಬ್ಬ ಆಚರಣೆ ವೇಳೆಗೆ ಗನ್​ನಿಂದ ಕೇಕ್​ ಕತ್ತರಿಸಿದ ಕಾರಣಕ್ಕೆ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿ ಕ್ರಮ ತೆಗೆದುಕೊಂಡಿದ್ದಾರೆ. ಅದೇ ಇನ್ನೊಂದೆಡೆ ತಮಿಳು ನಟ ವಿಜಯ್ ಸೇತುಪತಿ ತಲ್ವಾರ್​ನಿಂದ ಕೇಕ್​ ಕತ್ತರಿಸಿ ಇದೀಗ ಛೀಮಾರಿಗೆ ಗುರಿಯಾಗಿದ್ದಾರೆ.
ತಾವು ಮಾಡಿರುವ ಘನಕಾರ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿದ್ದ ಹಾಪುರ್​ದ ಯುವಕರು ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದರು. ಕೂಡಲೇ ಅವರನ್ನು ಬಂಧಿಸಲಾಗಿದೆ. ಅದೇ ರೀತಿ ಇತ್ತ ನಟ ವಿಜಯ್​ ಕೂಡ ತಲ್ವಾರ್ ನಿಂದ ಕೇಕ್ ಕತ್ತರಿಸಿ ಸಂಭ್ರಮಿಸಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕೆಲವು ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಹಾಡಿ ಕೊಂಡಾಡಿದ್ದರೆ, ಹಲವರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿನಿಮಾ ತಾರೆಯರಿಗೆ ಅಭಿಮಾನಿಗಳು ಹೆಚ್ಚು. ತಮ್ಮ ನೆಚ್ಚಿನ ನಟರು ಮಾಡುವುದಕ್ಕೇ ಅನುಸರಿಸಿ ಅಪರಾಧ ಕೃತ್ಯಕ್ಕೆ ಇಳಿಯುತ್ತಿರುವವರು ಅದೆಷ್ಟೋ ಮಂದಿ. ಅಂಥದ್ದರ ನಡುವೆ ಇಂಥದ್ದೊಂದು ಕೆಲಸ ಮಾಡಿರುವುದು ಅತ್ಯಂತ ದುರದೃಷ್ಟಕರ ಎಂದು ಕಮೆಂಟಿಗರು ನಟನಿಗೆ ಛೀಮಾರಿ ಹಾಕಲು ಶುರು ಮಾಡಿದ್ದಾರೆ.
🙏🏻pic.twitter.com/dRRrYrmRd1
— VijaySethupathi (@VijaySethuOffl)January 16, 2021

ಕಮೆಂಟ್​ಗಳನ್ನು ನೋಡಿದ ನಂತರ ಈ ನಟನಿಗೆ ಜ್ಞಾನೋದಯವಾಗಿದೆ. ನಂತರ ಜನತೆಯಲ್ಲಿ ಅವರು ಕ್ಷಮೆ ಕೋರಿದ್ದಾರೆ. ಸುದೀರ್ಘ ಪತ್ರ ಬರೆದು ಕ್ಷಮೆ ಕೋರಿರುವ ನಟ ವಿಜಯ್​, ಓರ್ವ ನಟನಾಗಿ ಮಾದರಿಯಾಗಬೇಕಿದ್ದ ನಾನು ಕೆಟ್ಟ ಉದಾಹರಣೆಯಾದಂತಾಗಿದೆ. ಇನ್ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸುವುದಾಗಿ ತಿಳಿಸಿದ್ದಾರೆ.
ಹುಟ್ಟುಹಬ್ಬ ಮಾಡಿ ಅರೆಸ್ಟ್​ ಆದ್ರು! 20 ಸೆಕೆಂಡ್​ ವಿಡಿಯೋದಲ್ಲಿ ಅಂಥದ್ದೇನಿದೆ ನೋಡಿ…

ಎಚ್‍ಎಎಲ್ ಶಿಕ್ಷಣ ಸಂಸ್ಥೆಯಲ್ಲಿ ಬೋಧಕ- ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ

‘ಚೆನ್ನಾಗ್​ ಹೇಳಿದ್ರಿ…’ ಡೈಲಾಗ್​ ಖ್ಯಾತಿಯ ಹಿರಿಯ ನಟಿ ಸರ್ವಮಂಗಳ ವಿಧಿವಶ

ಸಂಸಾರ ಮಾಡಲು ಗಂಡ ಒಪ್ಪದಿದ್ದರೆ ಏನಾದರೂ ಪರ್ಯಾಯ ಮಾರ್ಗಗಳಿವೆಯೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × two =
Remember me
