ಲಖನೌ:ಉತ್ತರ ಪ್ರದೇಶದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಯೋಗಿ ಆದಿತ್ಯನಾಥ ಅವರು ಎರಡನೆಯ ಬಾರಿ ಸಿಎಂ ಗದ್ದುಗೆ ಏರಲಿದ್ದು, ನಾಳೆ (25) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಈ ನಡುವೆಯೇ ಅವರಿಗೆ ಭಾವನಾತ್ಮಕ ಸಂದೇಶವೊಂದು ಬಂದಿದೆ. ಅದೇನೆಂದರೆ ‘ದಯವಿಟ್ಟು ಒಮ್ಮೆ ಬಂದು ಅಮ್ಮನನ್ನು ಭೇಟಿಯಾಗು, ಅವರೊಂದಿಗೆ ಮಾತನಾಡು, ಅವರಿಗೆ ತೀರಾ ವಯಸ್ಸಾಗಿದ್ದು, ನಿನ್ನ ನಿರೀಕ್ಷೆಯಲ್ಲೇ ಇದ್ದಾರೆ. ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಮುನ್ನ ಒಮ್ಮೆ ಬಂದು ಅವರನ್ನು ಭೇಟಿಯಾಗು, ಅವರಿಂದ ಆಶೀರ್ವಾದ ಪಡೆದುಕೊಂಡು ಹೋಗು’ ಅಂತ ಮನವಿ ಮಾಡಿದ್ದಾರೆ.
ಹೀಗೆ ಮನವಿ ಮಾಡಿಕೊಂಡಿರುವವರು ಯೋಗಿ ಆದಿತ್ಯನಾಥ್‌ ಅವರ ಅಕ್ಕ ಶಶಿ ಸಿಂಗ್​.
ಅಂದಹಾಗೆ ತಮ್ಮ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರೂ, ಭವಿಷ್ಯದ ಪ್ರಧಾನಿ ಎಂದು ಅನಿಸಿಕೊಂಡಿದ್ದರೂ ಅವರ ಅಕ್ಕ ಶಶಿ ಮಾತ್ರ ತೀವ್ರ ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಉತ್ತರಾಖಂಡದ ಹಳ್ಳಿಯಲ್ಲಿ ತಮ್ಮ ಕುಟುಂಬಸ್ಥರ ಜತೆ ಇರುವ ಅವರು, ಸಣ್ಣ ಚಹಾ ಅಂಗಡಿಯನ್ನು ಇಟ್ಟುಕೊಂಡಿದ್ದಾರೆ.ನಿಮ್ಮ ತಮ್ಮ ಉತ್ತರ ಪ್ರದೇಶ ಸಿಎಂ ಆಗಿದ್ದರೂ ನೀವು ಅಥವಾ ನಿಮ್ಮ ಕುಟುಂಬದ ಇತರ ಸದಸ್ಯರು ಯಾಕೆ ರಾಜಕೀಯದಿಂದ ದೂರ ಇದ್ದಾರೆ? ನೀವ್ಯಾಕೆ ಟೀ ಮಾರಿ, ಸಣ್ಣ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದೀರಿ ಅಂತ ಹಲವರು ಶಶಿ ಸಿಂಗ್ ಅವರನ್ನು ಕೇಳಿದ್ದಾರೆ. ಆದರೆ ರಾಜಕೀಯ ನಮಗೆ ಬೇಡ ಅಂತಾರೆ ಶಶಿ ಸಿಂಗ್. ನಾನು ದುಡಿದು ತಿನ್ನುತ್ತೇನೆ, ಆದ್ದರಿಂದಲೇ ನಮ್ಮ ಬಗ್ಗೆ ಯಾರು ಏನು ಹೇಳಿದರೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಕುಟುಂಬ ರಾಜಕಾರಣ ಯೋಗಿ ಆದಿತ್ಯನಾಥ್ ಅವರಿಗೂ ಇಷ್ಟವಿಲ್ಲ, ನಮಗೂ ಇಷ್ಟವಿಲ್ಲ ಎಂದಿದ್ದಾರೆ.
ಇನ್ನು ಯೋಗಿ ಅವರ ತಾಯಿ ಸಾವಿತ್ರಿ ದೇವಿ ಅವರ ಸ್ಥಿತಿಯೂ ಭಿನ್ನವಾಗಿಲ್ಲ. ಅವರು ಕೂಡ ಚಿಕ್ಕ ಮನೆಯಲ್ಲಿ ಬಡತನದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ.
ಅಜಯ್​ ಯೋಗಿ ಆದಿತ್ಯನಾಥ ಆಗಿದ್ದು ಹೀಗೆ…
ಯೋಗಿ ಆದಿತ್ಯನಾಥ್ ಅವರು ಹುಟ್ಟಿದ್ದು 1972 ರ ಜೂನ್​ 5ರಂದು, ಗರ್ವಾಲಿ ರಜಪೂತ ಸಮುದಾಯದಲ್ಲಿ. ಉತ್ತರಾಖಂಡ್‌ನ ಪೌರಿ ಗರ್ವಾಲ್ ಜಿಲ್ಲೆಯ ಯಮಕೇಶ್ವರ ತೆಹಸಿಲ್‌ನ ಪಂಚೂರ್ ಗ್ರಾಮದಲ್ಲಿ ಇವರ ಜನನ. ತಂದೆಯ ಹೆಸರು ಆನಂದ್ ಸಿಂಗ್ ಬಿಷ್ತ್ ಮತ್ತು ತಾಯಿಯ ಹೆಸರು ಸಾವಿತ್ರಿ ದೇವಿ. ಇವರ ಬಾಲ್ಯದ ಹೆಸರು ಅಜಯ್ ಸಿಂಗ್ ಬಿಷ್ತ್.
1989 ರಲ್ಲಿ, ಅವರು ಋಷಿಕೇಶದ ಭಾರತ್ ಮಂದಿರ ಇಂಟರ್ ಕಾಲೇಜ್‌ನಿಂದ 12 ನೇ ತರಗತಿಯಲ್ಲಿ ಉತ್ತೀರ್ಣರಾದ ಇವರು 1992 ರಲ್ಲಿ ಹೇಮಾವತಿ ನಂದನ್ ಬಹುಗುಣ ಗದ್ವಾಲ್ ವಿಶ್ವವಿದ್ಯಾಲಯದಿಂದ ಗಣಿತಶಾಸ್ತ್ರದಲ್ಲಿ ಬಿಎಸ್ಸಿ ಮಾಡಿದರು.
ಅವರ ಬದುಕು ತಿರುವು ಪಡೆದದ್ದು 1993 ರಲ್ಲಿ, ಗೋರಖ್‌ಪುರಕ್ಕೆ ಬಂದರು ಮತ್ತು ಇಲ್ಲಿ ಅವರು ಗೋರಖ್‌ನಾಥ್ ದೇವಸ್ಥಾನದ ಮಹಂತ್ ಇಲ್ಲೀಲನಾಥ್ ಜಿ ಅವರನ್ನು ಯೋಗಿ ಭೇಟಿಯಾದರು. ಆದಿತ್ಯನಾಥ್ ಕ್ರಮನಾಥ್ ಎಂಬುವವರಿಂದ ಸನ್ಯಾಸ ದೀಕ್ಷೆಯನ್ನು ಪಡೆದರು. 1994 ರಲ್ಲಿ ಸನ್ಯಾಸಿಯಾದರು. ಇದರಿಂದಾಗಿ ಅವರ ಹೆಸರನ್ನು ಅಜಯ್ ಸಿಂಗ್ ಬಿಷ್ತ್ ನಿಂದ ಯೋಗಿ ಆದಿತ್ಯನಾಥ್ ಎಂದು ಬದಲಾಯಿಸಲಾಯಿತು.
1998 ರಲ್ಲಿ, ಯೋಗಿ ಭಾರತೀಯ ಜನತಾ ಪಕ್ಷದ ಟಿಕೆಟ್‌ ಪಡೆದು ಮೊದಲ ಬಾರಿಗೆ ಗೋರಖ್‌ಪುರ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದರು. ಅವರು ಆ ಚುನಾವಣೆಯಲ್ಲಿ ಗೆದ್ದರು ಕೂಡ. ಲೋಕಸಭೆ ಚುನಾವಣೆಯಲ್ಲಿ ಅವರು ಅತ್ಯಂತ ಕಿರಿಯ ಸಂಸದರಾಗಿದ್ದರು. ಆಗ ಅವರಿಗೆ ಕೇವಲ 26 ವರ್ಷ ವಯಸ್ಸಾಗಿತ್ತು. 1999ರ ಲೋಕಸಭೆ ಚುನಾವಣೆಯಲ್ಲಿ ಅವರು ಮತ್ತೆ ಸಂಸದರಾಗಿ ಆಯ್ಕೆಯಾದರು. ಅವರ ಹೆಸರು ಅತ್ಯಂತ ಕಿರಿಯ ಸಂಸದ ಎಂಬ ದಾಖಲೆಯನ್ನು ಹೊಂದಿದೆ.
VIDEO: ಖಾಲಿ ವಿಮಾನದಲ್ಲಿ ಗಗನಸಖಿಯ ರೀಲ್ಸ್​ಗೆ ನೆಟ್ಟಿಗರು ಫಿದಾ: ವಿಡಿಯೋ ವೈರಲ್​

‘ಸಾರಿ… ನಿಮ್​ ಮದ್ವೆಯಾಗಿದೆ ಅಂತ ಗೊತ್ತಾಗ್ಲಿಲ್ಲ… ನೀವು ಮುಸ್ಲಿಂ ಮಹಿಳೆಯಾಗಿರೋದ್ರಿಂದ ಹೀಗೆ…’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
