ಬೆಂಗಳೂರು:ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿರುವ ಇಂಜಿನಿಯರಿಂಗ್ ಸೀಟುಗಳ ಭರ್ತಿಗೆ ನಡೆಸುವ ಕಾಮೆಡ್-ಕೆ ಪರೀಕ್ಷೆಯು ಮಂಗಳವಾರ ದೇಶದಾದ್ಯಂತ 228 ಕೇಂದ್ರಗಳಲ್ಲಿ ನಡೆಯಿತು. ಪರೀಕ್ಷೆ ನೋಂದಾಯಿಸಿದ್ದ 66,304 ಅಭ್ಯರ್ಥಿಗಳ ಪೈಕಿ ಶೇ.67(44,741) ಹಾಜರಾಗಿದ್ದಾರೆ. ಕರ್ನಾಟಕದಲ್ಲಿ 23 ನಗರಗಳಲ್ಲಿ 71 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ನೋಂದಾಯಿಸಿಕೊಂಡಿದ್ದ 21,352 ಅಭ್ಯರ್ಥಿಗಳ ಪೈಕಿ ಶೇ.80(17,295) ಹಾಜರಾಗಿದ್ದಾರೆ.
ರಾಜ್ಯದಲ್ಲಿ 180 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಅಂದಾಜು 20 ಸಾವಿರ ಸೀಟುಗಳ ಭರ್ತಿಗೆ ಈ ಪರೀಕ್ಷೆ ನಡೆಯಿತು. ಯಾವುದೇ ಕೇಂದ್ರದಲ್ಲಿ ನಕಲು ಪ್ರಕರಣ ವರದಿಯಾಗಿಲ್ಲ.
ಕರ್ನಾಟಕದ ಹೊರತಾಗಿ ಬೇರೆ ರಾಜ್ಯಗಳಲ್ಲಿ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ಸಾಧ್ಯವಾಗದೇ ಇದ್ದರಿಂದ ಆನಂತರ ಬೇರೆ ಕೇಂದ್ರಗಳಿಗೆ ಅಭ್ಯರ್ಥಿಗಳನ್ನು ಸ್ಥಳಾಂತರಿಸಿ ಪರೀಕ್ಷೆ ನಡೆಸಿದೆ. ರಾಜ್ಯದ ಕೇಂದ್ರಗಳಲ್ಲಿ ಯಾವುದೇ ತೊಂದರೆ ಸಂಭವಿಸಿಲ್ಲ.
ತಾತ್ಕಾಲಿಕ ಕೀ-ಉತ್ತರಗಳನ್ನು ಸೆ.17ರಂದು ಹಾಗೂ ಅಂತಿಮ ಉತ್ತರಗಳನ್ನು ಸೆ.23ರಂದು ಬಿಡುಗಡೆ ಮಾಡಲಿದೆ. ಸೆ.26ರಂದು ಸ್ಕೋರ್ ಕಾರ್ಡ್‌ಗಳನ್ನು ಅಪ್‌ಲೋಡ್ ಮಾಡುವುದಾಗಿ ಕಾಮೆಡ್-ಕೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಸ್.ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರೀಡಾಪಟುಗಳಿಗೆ ಗುಡ್‌ ನ್ಯೂಸ್‌: ಗಡಿ ಭದ್ರತಾ ಪಡೆಯಲ್ಲಿದೆ 269 ಹುದ್ದೆಗಳು

ಕೇಂದ್ರ ಸರ್ಕಾರಿ ಉದ್ಯೋಗಕ್ಕೆ ಯುಪಿಎಸ್ಸಿಯಿಂದ ಅರ್ಜಿ ಆಹ್ವಾನ: 28 ಹುದ್ದೆಗಳು ಖಾಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
