ನವದೆಹಲಿ:ಪ್ರತಿ ತಿಂಗಳೂ ಅಡುಗೆ ಅನಿಲದ ಬೆಲೆ ಏರುಗತಿಯಲ್ಲಿಯೇ ಸಾಗುತ್ತಿದೆ. ಕಳೆದ ತಿಂಗಳು ಅಂದರೆ ಸೆಪ್ಟೆಂಬರ್‌ಗೆ ಅನ್ವಯ ಆಗುವಂತೆ ಪ್ರತಿ ತಿಂಗಳೂ 25 ರೂಪಾಯಿ ಏರಿಕೆ ಆಗುತ್ತಲೇ ಸಾಗಿತ್ತು. ಇದರ ಬೆನ್ನಲ್ಲೇ ಇದೀಗ ವಾಣಿಜ್ಯ ಬಳಕೆ ಸಿಲಿಂಡರ್‌ ಬಳಸುವ ಗ್ರಾಹಕರಿಗೆ ಶಾಕ್‌ ನೀಡಲಾಗಿದೆ.
ಅದೇನೆಂದರೆ ಅಕ್ಟೋಬರ್ 1 ರಿಂದ ಅನ್ವಯ ಆಗುವಂತೆ ವಾಣಿಜ್ಯ ಬಳಕೆ ಸಿಲಿಂಡರ್ ಅನ್ನು 43.5 ರೂಪಾಯಿಗೆ ಏರಿಸಲಾಗಿದೆ. ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್ ಗೆ 43.5 ರೂ.ಗಳವರೆಗೆ ಹೆಚ್ಚಿಸಿದೆ.
ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆ 1693 ರೂ.ಗಳಿಂದ ಪ್ರತಿ ಸಿಲಿಂಡರ್ ಗೆ 1736.5 ರೂ.ಗೆ ಏರಿಕೆಯಾಗಿದೆ.
ಆದರೆ ಸಂತಸದ ಸಂಗತಿಯೆಂದರೆ, ಅಡುಗೆ ಇಂಧನದ ಬೆಲೆಯಲ್ಲಿ ಸದ್ಯ ಯಾವುದೇ ಏರಿಕೆಯಾಗಿಲ್ಲ.
ಸೆಪ್ಟೆಂಬರ್ 1ರಂದು ಬೆಲೆ ಏರಿಕೆಯಾದಂತೆ ಅಡುಗೆ ಇಂಧನದ ಬೆಲೆ ಸದ್ಯ ದೆಹಲಿ: 884.50 ರೂ, ಬೆಂಗಳೂರು: 887.5 ರೂ, ಮುಂಬೈ: 884.50 ರೂ, ಕೋಲ್ಕತಾ: 911 ರೂ, ಚೆನ್ನೈ: 900.50 ರೂ ಹಾಗೂ ಹೈದರಾಬಾದ್: 937 ರೂ ಇವೆ.
ಖಾಲಿ ಇವೆ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು: 1.83 ಲಕ್ಷ ರೂ.ವರೆಗೆ ಸಂಬಳ: ಇಲ್ಲಿದೆ ಸಂಪೂರ್ಣ ವಿವರ

ರಾಜೀವಗಾಂಧಿ ಹತ್ಯೆ- 30 ವರ್ಷಗಳ ಬಳಿಕ ಮರಳಿದ ರಕ್ತಸಿಕ್ತ ಕ್ಯಾಪ್‌… ಕಣ್ಣೀರಾದ ಐಪಿಎಸ್‌ ಅಧಿಕಾರಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + nine =
Remember me
