ಬ್ರಿಟನ್​:ಸದ್ಯ ಎಲ್ಲವೂ ರೆಡಿಮೇಡ್​ ಆಗಿ ಬಾಟಲಿ, ಡಬ್ಬಗಳನ್ನು ಸಿಗುತ್ತಿರುವ ಕಾಲ. ಗಾಳಿಯೊಂದು ಬಾಕಿ ಇದೆ, ಅದನ್ನೂ ಮಾರಾಟ ಮಾಡುವ ಕಾಲ ಯಾವಾಗ ಬರುತಪ್ಪಾ ಎಂದು ಕೇಳಿದವರೇ ಹೆಚ್ಚು. ಮಿತಿ ಮೀರುತ್ತಿರುವ ಮಾಲಿನ್ಯದಿಂದಾಗಿ ಇಂಥದ್ದೊಂದು ಪ್ರಶ್ನೆಗಳನ್ನು ತೀರಾ ಇತ್ತೀಚೆಗೆ ಜನರು ಕೇಳಲು ಶುರುಮಾಡಿದ್ದರು.
ಸದ್ಯ ಅಂಥದ್ದೊಂದು ಕಾಲ ಬರದಿರಲಪ್ಪಾ… ಎಲ್ಲರಿಗೂ ಶುದ್ಧವಾದ ಗಾಳಿ ವಾತಾವರಣದಲ್ಲಿಯೇ ಸಿಗಲಿ, ಅದನ್ನೂ ಮಾರಾಟ ಮಾಡುವಂಥ ಕೆಟ್ಟ ಕಾಲ ನಾವು ಬದುಕಿರುವವರೆಗೂ ಬರದಿದ್ದರೆ ಸಾಕು ಎಂದವರೇ ಹೆಚ್ಚು.
ಆದರೆ ಏನು ಆಗಬಾರದು ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದರೋ, ಅದು ಆಗಿ ಹೋಗಿದೆ. ಬಾಟಲಿಯಲ್ಲಿ ಶುದ್ಧಗಾಳಿಯನ್ನು ಹಿಡಿದಿಟ್ಟು ಅದನ್ನು ಮಾರಾಟ ಮಾಡಲಾಗುತ್ತಿದೆ!
ಅಚ್ಚರಿ ಎನಿಸುವ ಇಂಥದ್ದೊಂದು ಪ್ರಕ್ರಿಯೆಗೆ ಲಂಡನ್​ ಚಾಲನೆ ನೀಡಿದೆ. ಇದಾಗಲೇ ಹೊಸ ರೂಪದ ಕೋವಿಡ್​ನಿಂದ ಜಗತ್ತನ್ನು ಬೆಚ್ಚಿಬೀಳಿಸಿರುವ ಲಂಡನ್​ನಲ್ಲಿ ಇದೀಗ ಶುದ್ಧಗಾಳಿಯ ಮಾರಾಟವೂ ಆರಂಭವಾಗಿದೆ.
ಬೇರೆ ಬೇರೆ ನಾಲ್ಕು ದೇಶಗಳಿಂದ ಶುದ್ಧಗಾಳಿಯನ್ನು ತರಿಸಿಕೊಂಡು ಅದನ್ನು ಬಾಟಲಿಯಲ್ಲಿ ತುಂಬಿ ಮಾರಾಟ ಮಾಡುತ್ತಿರುವುದಾಗಿ ಸರ್ಕಾರ ಹೇಳಿದೆ. ಸದ್ಯ ಬ್ರಿಟನ್ನರಿಗೆ ಶುದ್ಧಗಾಳಿಯ ಅವಶ್ಯಕತೆ ಇದ್ದು, ಉಳ್ಳವರು ಈ ಬಾಟಲಿಯನ್ನು ಖರೀದಿ ಮಾಡಿ ಶುದ್ಧ ಗಾಳಿಯನ್ನು ಸೇವನೆ ಮಾಡುತ್ತಿದ್ದಾರೆ.
ಅಂದ ಹಾಗೆ 500 ಮಿಲಿ ಗಾಳಿಗೆ ಎರಡೂವರೆ ಸಾವಿರ ರೂಪಾಯಿಯಂತೆ ಮಾರಾಟವಾಗುತ್ತಿದೆ. ವೆಬ್​ಸೈಟ್​ ಮೂಲಕ ಈ ಗಾಳಿಯನ್ನು ಯಾರು ಬೇಕಾದರೂ ಖರೀದಿ ಮಾಡಲು ಅವಕಾಶ ಕೂಡ ಕಲ್ಪಿಸಲಾಗಿದೆ. ಪ್ರತಿ ಬಾಟಲಿಯು ಕಾರ್ಕ್ ಸ್ಟಾಪರ್‌ನೊಂದಿಗೆ ಬರುತ್ತದೆ. ಆದ್ದರಿಂದ ಜನರು ಅದನ್ನು ಒಂದು ಕ್ಷಣ ತೆರೆದು ಉಸಿರಾಡಬಹುದು ಮತ್ತೆ ಮತ್ತೆ ಮುಚ್ಚಿಡಬೇಕು. ಮತ್ತೊಮ್ಮೆ ಉಸಿರಾಡಬೇಕೆಂದರೆ ಮತ್ತೆ ಹಾಗೆಯೇ ಮಾಡಬೇಕು!
ವಿಶೇಷ ಸ್ಥಾನ ರದ್ದತಿ ಪರಿಣಾಮ? ಡಿಡಿಸಿ ಚುನಾವಣೆ- ಬಿಜೆಪಿ ಜಯಭೇರಿ; ಮೈತ್ರಿಕೂಟ ಫಸ್ಟ್​

ಹುಡುಗನೊಬ್ಬ ಕಾಡ್ತಿದ್ದಾನೆ- ರಾತ್ರಿ ಬೇಕು ಅಂತಾನೆ, ಬೆಳಗ್ಗೆ ಬೇಡ ಅಂತಾನೆ; ಏನು ಮಾಡೋದು?

ಜಗತ್ತಿನ ನಾಲ್ಕನೇ ಸಿರಿವಂತರ ಕುಟುಂಬದ ಕುಡಿಯ ಹೆಸರು ಬಹಿರಂಗ: ಇದರಲ್ಲಿದೆಯೊಂದು ವಿಶೇಷ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 + one =
Remember me
