ನಾಗ್ಪುರ:ಪರಿಚಯದ ಯುವಕನ ಜತೆ ಹೋಟೆಲ್​ ಹೋಗಿದ್ದ ಯುವತಿಯ ಮೇಲೆ ಆತ ಅತ್ಯಾಚಾರ ಎಸಗಿ, ವಿಡಿಯೋ ಮಾಡಿಟ್ಟುಕೊಂಡು ಬ್ಲ್ಯಾಕ್​ಮಾಡುತ್ತಿದ್ದ ಆತಂಕದ ಘಟನೆ ಉತ್ತರ ಪ್ರದೇಶದ ಲಖನೌನಲ್ಲಿ ನಡೆದಿದೆ.
ಆದರೆ ಈ ವ್ಯಕ್ತಿ ತನಗೆ ಜೀವಬೆದರಿಕೆ ಹಾಕುತ್ತಿರುವ ಹಿನ್ನೆಲೆಯಲ್ಲಿ ಯುವತಿಯು ಊರಿನಲ್ಲಿ ದೂರು ದಾಖಲು ಮಾಡಲು ಹೆದರಿ, 800 ಕಿ.ಮೀ ದೂರ ಬಂದು ಮಹಾರಾಷ್ಟ್ರದ ನಾಗ್ಪುರದ ಕೊರಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾಳೆ.
22 ವರ್ಷದ ನೇಪಾಳಿ ಯುವತಿ ಈ ರೀತಿ ಅನ್ಯಾಯಕ್ಕೆ ಒಳಗಾಗಿದ್ದಾಳೆ. 2018 ರಲ್ಲಿ ನೇಪಾಳದಿಂದ ಉತ್ತರ ಪ್ರದೇಶದ ಲಖನೌಗೆ ಕೆಲಸಕ್ಕೆ ಬಂದ ಯುವತಿ ಫೈಜಾಬಾದ್ ರಸ್ತೆಯಲ್ಲಿನ ಬಾಡಿಗೆ ಮನೆಯಲ್ಲಿ ಕಳೆದ ಮಾರ್ಚ್‌ವರೆಗೂ ವಾಸವಿದ್ದಳು. ಬಾಡಿಗೆ ಮನೆಯ ಓನರ್​ ಆಗಿರುವ ಮಹಿಳೆ ಈಕೆಗೆ ದುಬೈನಲ್ಲಿರುವ ಸಾಫ್ಟ್‌ವೇರ್ ಇಂಜಿನಿಯರ್ ಪ್ರವೀಣ ರಾಜ್ಪಾಲ್ ಯಾದವ್ ಎಂಬಾತನನ್ನು ಪರಿಚಯಿಸಿದ್ದಳು. ಇಬ್ಬರು ವಿಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದರು.
ಇದನ್ನೂ ಓದಿ:ಆಸ್ತಿಯಲ್ಲಿ ಪಾಲು ಬೇಡ ಎಂದು ಬರೆದುಕೊಟ್ಟಾಕೆ ಮತ್ತೆ ಭಾಗ ಕೇಳಬಹುದೇ?
ಕಳೆದ ಕೆಲ ದಿನಗಳ ನಂತರ ಲಖನೌಗೆ ಬಂದ ಪ್ರವೀಣ ರಾಜ್ಪಾಲ್ ಯಾದವ್ ಹೋಟೆಲ್ ಒಂದರಲ್ಲಿ ರೂಂ ಬುಕ್ ಮಾಡಿದ್ದಾನೆ. ನಂತರ ಯುವತಿಯನ್ನು ಕರೆದಿದ್ದಾನೆ. ಈಕೆ ಅವನು ಹೇಳಿದಂತೆ ಅಲ್ಲಿಗೆ ಹೋಗಿದ್ದಾಳೆ. ನಂತರ ಅತ್ಯಾಚಾರ ಮಾಡಿದ ಆತ ಅದರ ವಿಡಿಯೋ, ಫೋಟೋ ಮಾಡಿಕೊಂಡಿದ್ದಾನೆ. ಯಾರಿಗಾದರೂ ವಿಷಯ ತಿಳಿಸಿದರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಪೀಡಿಸುತ್ತಿದ್ದ.
ಇದರಿಂದ ಹೆದರಿ ಯುವತಿ, ನಾಗ್ಪುರಕ್ಕೆ ಬಂದು ಕೇಸು ದಾಖಲು ಮಾಡಿದ್ದಾಳೆ. ಯಾರು ಎಲ್ಲಿ ಬೇಕಾದರೂ ಕೇಸು ದಾಖಲು ಮಾಡಲು ಈಗ ಕಾನೂನಿನ ಅಡಿ ಅವಕಾಶ ಇದೆ. ಹೀಗೆ ಕೇಸ್​ ದಾಖಲು ಮಾಡಿದಾಗ ಘಟನೆ ನಡೆದ ಸಂಬಂಧಪಟ್ಟ ಠಾಣೆಗೆ ಅದನ್ನು ಹಸ್ತಾಂತರಿಸಲಾಗುತ್ತದೆ.
ಇದರ ಪ್ರಯೋಜನ ಪಡೆದ ಯುವತಿ ಇದೀಗ ಕೇಸು ದಾಖಲು ಮಾಡಿದ್ದಾಳೆ ಎಂದು ನಾಗ್ಪುರ ಡಿಸಿಪಿ ಹೇಳಿದ್ದಾರೆ. ಅವರು ಇದನ್ನೀಗ ಲಖನೌಗೆ ಕಳುಹಿಸಿಕೊಡುವ ತಯಾರಿಯಲ್ಲಿದ್ದಾರೆ.
ಅತ್ತೆಯ ಮೇಲೆ ಅಳಿಯನಿಂದ ಅತ್ಯಾಚಾರ! ಪೊಲೀಸರಿಗೆ ಹೆದರಿ ಆತ್ಮಹತ್ಯೆಗೆ ಯತ್ನ

ಮುತ್ತಪ್ಪ ರೈ ಮಗನಿಗೆ ಡ್ರಗ್ಸ್​ ನಂಟು? ನಸುಕಿನಲ್ಲಿಯೇ ಸಿಸಿಬಿ ಶಾಕ್​- ಮನೆ ಮೇಲೆ ದಾಳಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seven − 2 =
Remember me
