ತ್ರಿಪುರ:ತೃತೀಯ ಲಿಂಗಿಯರನ್ನು ಪೊಲೀಸರು ವಿವಸ್ತ್ರಗೊಳಿಸಿ ದೌರ್ಜನ್ಯ ಮೆರೆದ ಅಮಾನವೀಯ ಘಟನೆ ತ್ರಿಪುರದಲ್ಲಿ ನಡೆದಿದೆ. ಈ ಸಂಬಂಧ ತೃತೀಯ ಲಿಂಗಿ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ನಮ್ಮನ್ನು ಬಂಧಿಸಿ, ಲಿಂಗತ್ವ ಸಾಬೀತುಪಡಿಸಿಕೊಳ್ಳಲು ವಿವಸ್ತ್ರಗೊಳಿಸಿದ್ದಾರೆ ಎಂದು ಅವರು ನೋವು ತೋಡಿಕೊಂಡಿದ್ದಾರೆ.
‘ರಾತ್ರಿ ಹೋಟೆಲ್‌ವೊಂದರಲ್ಲಿ ಪಾರ್ಟಿ ಮುಗಿಸಿಕೊಂಡು ನಮ್ಮ ಸಮುದಾಯದ ನಾಲ್ವರು ಮನೆಗೆ ವಾಪಸ್‌ ಆಗುತ್ತಿದ್ದ ವೇಳೆ ಪೊಲೀಸರು ನಮ್ಮನ್ನು ಬಂಧಿಸಿದರು. ನಮ್ಮ ಮೇಲೆ ಸುಲಿಗೆ ಆರೋಪ ಹೊರಿಸಿದರು. ಪಶ್ಚಿಮ ಅಗರ್ತಲಾ ಮಹಿಳಾ ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋದರು. ನಮ್ಮ ಲಿಂಗತ್ವವನ್ನು ಸಾಬೀತುಪಡಿಸಿ ಎಂದು ಆವಾಜ್‌ ಹಾಕಿದರು. ನಾವು ತೃತೀಯ ಲಿಂಗಿಯರು ಎಂದು ಹೇಳಿದರೂ ಕೇಳಲಿಲ್ಲ. ಅಲ್ಲಿ ಇದ್ದ ಪುರುಷ ಮತ್ತು ಮಹಿಳಾ ಪೊಲೀಸ್‌ ಅಧಿಕಾರಿಗಳು ನಮ್ಮನ್ನು ವಿವಸ್ತ್ರಗೊಳಿಸಿದರು. ನಿಮ್ಮ ಲಿಂಗತ್ವವನ್ನು ಸಾಬೀತುಪಡಿಸಿ ಎಂದು ಪೊಲೀಸರು ನಮ್ಮ ಬಟ್ಟೆಗಳನ್ನು ಬಿಚ್ಚಿಸಿದ್ದಾರೆ’ ಎಂದು ಅವರು ನೋವು ತೋಡಿಕೊಂಡರು.
ವಿಚಿತ್ರ ಎಂದರೆ ಕೇವಲ ಪುರುಷ ಪೊಲೀಸರು ಮಾತ್ರವಲ್ಲದೇ, ಮಹಿಳಾ ಪೊಲೀಸರೂ ಇವರ ಬಟ್ಟೆ ಬಿಚ್ಚಿಸಿದ್ದಾರೆ. ಸಾಲದು ಎಂಬುದಕ್ಕೆ ಇವರ ವಿಗ್‌ ಮತ್ತು ಒಳ ಉಡುಪುಗಳನ್ನು ಪೊಲೀಸ್‌ ಠಾಣೆಯಲ್ಲೇ ಇರಿಸಿಕೊಂಡಿದ್ದಾರೆ! ಇದೀಗ ತಮಗಾಗಿರುವ ದೌರ್ಜನ್ಯಕ್ಕೆ ನ್ಯಾಯ ಬೇಕು ಎಂದು ಸಂತ್ರಸ್ತೆಯರು ಪ್ರತಿಭಟನೆ ಶುರು ಮಾಡಿದ್ದಾರೆ. ತಮ್ಮ ವಿರುದ್ಧ ಏನೂ ಸಾಕ್ಷ್ಯಾಧಾರ ಇಲ್ಲದಿದ್ದರೂ ದೌರ್ಜನ್ಯ ಎಸಗಲಾಗಿದೆ. ನಮಗೆ ನ್ಯಾಯ ಕೊಡಿಸಿ ಎಂದು ಅವರು ಕೋರಿದ್ದಾರೆ.
ಸುಪ್ರೀಂ ಕೋರ್ಟ್‌ನ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ನೀಡಿರುವ ತೀರ್ಪಿನ ವಿರುದ್ಧ ತೃತೀಯಲಿಂಗಿ ಸಮುದಾಯದ ಗೌಪ್ಯತೆ ಹಕ್ಕನ್ನು ಉಲ್ಲಂಘಿಸಲಾಗಿದೆ. ಇದರ ಅಡಿ ಪೊಲೀಸರ ವಿರುದ್ಧ ಕ್ರಮ ಜರುಗಿಸಿ ಎಂದು ಅವರು ಕೋರಿದ್ದಾರೆ.
ಐಪಿಸಿ ಸೆಕ್ಷನ್‌ 151ರಡಿ (ಐದಕ್ಕಿಂತ ಹೆಚ್ಚು ಮಂದಿ ಗುಂಪು ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಶಾಂತಿಗೆ ಭಂಗವುಂಟುಮಾಡುವುದು) ಈ ನಾಲ್ವರನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗುವುದು ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.
‘ಅವ್ನು ಕಿಸ್‌ ಕೊಟ್ಟಿರೋ ದೃಶ್ಯ ಪ್ರಸಾರ ಮಾಡ್ಬೇಡಿ ಪ್ಲೀಸ್‌’ ಎಂದು ಹಣಕ್ಕಾಗಿ ಎಲ್ಲಾ ಅರ್ಪಿಸಿಕೊಂಡ ನಟಿಯ ಮನವಿ!

‘ನನ್ನ ಮಗಳಿನ್ನೂ ಚಿಕ್ಕೋಳು, ಏನೂ ಗೊತ್ತಿಲ್ಲ… ಅಶ್ಲೀಲ ವಿಡಿಯೋ ಕೇಸ್‌ನಲ್ಲಿ ಓಟಿಪಿ ಕೊಟ್ಟಿದ್ದೇ ಮಿಸ್ಟೆಕ್‌’ ಎಂದ ಶಾಸಕ

ಉ.ಪ್ರದೇಶ ಚುನಾವಣೆ ಬೆನ್ನಲ್ಲೇ ಯೋಗಿ ಸರ್ಕಾರಕ್ಕೆ ಬಿಗ್‌ ಶಾಕ್‌: ಆಪ್ತ ಸಚಿವ, ಶಾಸಕರು ಔಟ್‌!

ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ನಟ ಯಶ್‌- ಅಭಿಮಾನಿಗಳಿಂದಲೇ ಟ್ರೋಲ್‌, ಕಮೆಂಟ್‌ಗಳ ಮೂಲಕ ಆಕ್ರೋಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 10 =
Remember me
