ಕಠ್ಮಂಡು (ನೇಪಾಳ):ನೇಪಾಳದ ಕಠ್ಮಂಡುವಿನಲ್ಲಿ ಕಾಂಗ್ರೆಸ್​ ನಾಯಕ, ಸಂಸದ ರಾಹುಲ್​ ಗಾಂಧಿ, ಯುವತಿಯೊಬ್ಬರ ಜತೆ ಪಾರ್ಟಿಯಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಮದ್ಯದ ಬಾಟಲುಗಳಿಂದ ತುಂಬಿರುವ ಈ ಪಾರ್ಟಿಯಲ್ಲಿ ರಾಹುಲ್​ ಗಾಂಧಿ ಮದ್ಯ ಹೀರುತ್ತಿರುವ ಯುವತಿಯೊಬ್ಬಳ ಜತೆ ಕಾಣಿಸಿಕೊಂಡಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಇದು ಪಬ್​, ನೈಟ್​ಕ್ಲಬ್​ನಲ್ಲಿ ನಡೆಯುತ್ತಿರುವ ಪಾರ್ಟಿ ಎಂಬಿತ್ಯಾದಿಯಾಗಿ ಸುದ್ದಿಯಾಗಿದ್ದು, ಜಾಲತಾಣದಲ್ಲಿ ಇದರ ಬಗ್ಗೆ ಥಹರೇವಾರಿ ಕಮೆಂಟ್​ಗಳು ಬರುತ್ತಿವೆ.
ಬಿಜೆಪಿಯ ಬೆಂಬಲಿಗರು ಈ ವಿಡಿಯೋ ಹಂಚಿಕೊಂಡು, ಕಾಂಗ್ರೆಸ್​ನ ಪ್ರಧಾನಿ ಅಭ್ಯರ್ಥಿ ಇವರು ಎಂದು ಲೇವಡಿ ಮಾಡಿದ್ದಾರೆ.
ಈ ವೈರಲ್​ ವಿಡಿಯೋದ ಬಗ್ಗೆ ಕಿಡಿ ಕಾರಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ, ರಾಹುಲ್​ ಗಾಂಧಿಯವರು ತಮ್ಮ ಸ್ನೇಹಿತೆಯ ಮದುವೆಗೆ ಕಠ್ಮಂಡುವಿಗೆ ಹೋಗಿದ್ದಾರೆ. ಅದರಲ್ಲಿ ತಪ್ಪೇನಿದೆ? ಇದೇನು ನೈಟ್​ಕ್ಲಬ್​ ಅಲ್ಲ. ಮದುವೆ ಪಾರ್ಟಿಯಲ್ಲಿ ಭಾಗವಹಿಸುವುದು ಅಪರಾಧ ಎಂದು ಎಲ್ಲಿಯಾದರೂ ಉಲ್ಲೇಖವಾಗಿದೆಯಾ ಎಂದು ತಿರುಗೇಟು ನೀಡಿದ್ದಾರೆ. ಮದುವೆ ಮತ್ತು ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗವಹಿಸುವುದು ನಮ್ಮ ಸಂಸ್ಕೃತಿ ಮತ್ತು ನಾಗರಿಕತೆಯ ವಿಷಯವಾಗಿದೆ. ಮದುವೆಯಾಗುವುದು, ಯಾರೊಂದಿಗಾದರೂ ಸ್ನೇಹಿತರಾಗುವುದು ಅಥವಾ ಅವರ ಮದುವೆಯಲ್ಲಿ ಪಾಲ್ಗೊಳ್ಳುವುದು ಈ ದೇಶದಲ್ಲಿ ಇನ್ನೂ ಅಪರಾಧವಾಗಲಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಬಿಜೆಪಿಯವರು ರಾಹುಲ್​ ಗಾಂಧಿಯ ಈ ವಿಡಿಯೋ ವೈರಲ್​ ಮಾಡುವುದನ್ನು ಬಿಟ್ಟು ಮೊದಲು ನಿಮ್ಮ ಕೆಲಸ ನೋಡಿಕೊಳ್ಳಿ. ದೇಶದಲ್ಲಿ ಹಲವಾರು ಸಮಸ್ಯೆಗಳಿವೆ. ಅದರತ್ತ ಮೊದಲು ಗಮನ ಹರಿಸಿ. ಆಮೇಲೆ ರಾಹುಲ್​ ಗಾಂಧಿ ಎಲ್ಲಿ ಹೋಗುತ್ತಾರೆ, ಏನು ಮಾಡುತ್ತಾರೆ ಎನ್ನುವುದುನ್ನು ನೋಡಿ ಎಂದು ಕಿಡಿ ಕಾರಿದ್ದಾರೆ.
“ರಾಹುಲ್ ಗಾಂಧಿ ಕಠ್ಮಂಡುವಿನಲ್ಲಿ ವೈಯಕ್ತಿಕ ಭೇಟಿಯಲ್ಲಿದ್ದಾರೆ. ಅದರಲ್ಲಿ ತಪ್ಪೇನಿದೆ? ಬಿಜೆಪಿಯವರು ಮೊದಲು ವಿದ್ಯುತ್ ಬಿಕ್ಕಟ್ಟು, ಹಣದುಬ್ಬರಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಏಕೆ ಉತ್ತರಿಸುತ್ತಿಲ್ಲ, ಅದನ್ನು ಬಿಟ್ಟು ರಾಹುಲ್​ ಬಗ್ಗೆ ಚಿಂತೆಯೇಕೆ ಎಂದು ಪ್ರಶ್ನಿಸಿದ್ದಾರೆ.
ತೆಲಂಗಾಣದಲ್ಲಿ ರಾಹುಲ್​ ಗಾಂಧಿಗೆ ಭಾರಿ ಮುಖಭಂಗ: ಉಸ್ಮಾನಿಯಾ ವಿವಿಯಲ್ಲಿ ನೋ ಎಂಟ್ರಿ!

ಕೋರ್ಟ್​ ಕಟಕಟೆಯಲ್ಲಿ ನೆಹರೂ, ಎಡ್ವಿನಾ ಲವ್​ ಸ್ಟೋರಿ: ಇಬ್ಬರ ನಡುವಿನ ಪತ್ರ ಬಹಿರಂಗಕ್ಕೆ ನಕಾರ

Sign in to your account
Please enter an answer in digits:19 − 10 =
Remember me
