ಅಹಮದಾಬಾದ್​:ಕಾಂಗ್ರೆಸ್​ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ್ದ ಗುಜರಾತ್​ನ ಮಾಜಿ ಶಾಸಕ ಅಕ್ಷಯ್​ ಪಟೇಲ್​ ಅವರನ್ನು ಬಿಜೆಪಿ 25 ಕೋಟಿ ರೂಪಾಯಿಗೆ ಖರೀದಿಸಿದೆ ಎಂದು ಇತ್ತೀಚಿಗೆ ರಾಹುಲ್​ ಗಾಂಧಿ ಆರೋಪಿಸಿದ್ದರು.
ಅದಕ್ಕೆ ತಿರುಗೇಟು ನೀಡಿರುವ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ಕಾಂಗ್ರೆಸ್​ಗೆ ತನ್ನ ಶಾಸಕರ ಮೇಲೆ ಸ್ವಲ್ಪವೂ ಗೌರವವಿಲ್ಲ ಎಂದು ಕಿಡಿಕಾರಿದರು. ಜತೆಗೆ, ಕಾಂಗ್ರೆಸ್ ಪಕ್ಷದ ಇಡೀ ರಾಜ್ಯ ಘಟಕವನ್ನೇ 25 ಕೋಟಿ ರೂಪಾಯಿಗೆ ಖರೀದಿ ಮಾಡಬಹುದು ಎಂದರು.
ಇದನ್ನೂ ಓದಿ:ಬಿಜೆಪಿ ನಾಯಕರ ಹತ್ಯೆಯ ಹಿಂದೆ ಲಷ್ಕರ್ ಎ ತೊಯ್ಬಾ ಕೈವಾಡ
ಸುರೇಂದ್ರ ನಗರ್ ಸಮೀಪದ ಲಿಂಬ್ಡಿ ಎಂಬಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಅವರು ಮಾತನಾಡುತ್ತಿದ್ದರು. ಈಗಿನ ಕಾಂಗ್ರೆಸ್ ಪಕ್ಷ ಗಾಂಧೀಜಿಯವರ ಮೌಲ್ಯಗಳಿಂದ ದೂರವಾಗಿದೆ. ಗಾಂಧೀಜಿ ಕಾಲದ ಕಾಂಗ್ರೆಸ್​ ಆಗಿ ಉಳಿದಿಲ್ಲ, ಈಗಿನ ಕಾಂಗ್ರೆಸ್ ಕೇವಲ ರಾಹುಲ್ ಗಾಂಧಿಯ ಕಾಂಗ್ರೆಸ್ ಪಕ್ಷವಾಗಿದೆ. ಇದು ದೊಡ್ಡ ದುರಂತ ಎಂದು ಹೇಳಿದರು.
ಶಾಸಕರ ಖರೀದಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ತನ್ನ ಶಾಸಕರುಗಳಿಗೆ ಗೌರವ ಕೊಡುತ್ತಿಲ್ಲ. ಅವರ ಪಕ್ಷಕ್ಕಾಗಿ ದುಡಿದವರ ಬಗ್ಗೆ ಹೀಯಾಳಿಕೆ ಮಾತನಾಡುತ್ತದೆ, ಬಿಕರಿಯಾಗಿದ್ದಾರೆ ಎನ್ನುವ ಕೆಟ್ಟ ಪದ ಬಳಕೆ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.ಕಾಂಗ್ರೆಸ್​ನ ಇಡೀ ಗುಜರಾತ್​​ ಘಟಕವೇ 25 ಕೋಟಿ ರೂಪಾಯಿಗೆ ಬಿಕರಿಯಾಗಬಹುದು ಎಂದು ಮುಖ್ಯಮಂತ್ರಿ ಕಿಡಿ ಕಾರಿದರು.
ಪ್ರವಾಸದಲ್ಲಿರುವ ಪ್ರಧಾನಿ ಭದ್ರತೆಗೆ ನಿಯೋಜನೆಗೊಂಡಿದ್ದ 23 ಮಂದಿಗೆ ಕರೊನಾ

ಕರೊನಾ ಹುಷಾರಾಗಿಲ್ಲ ಎಂದು ನಕಲಿ ರಿಪೋರ್ಟ್​ ಪಡೆಯುತ್ತಲೇ ಇದ್ದ ಸಂಪತ್​ರಾಜ್​ ಪರಾರಿ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × four =
Remember me
