ನವದೆಹಲಿ:ಕಾಂಗ್ರೆಸ್‌ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾರಿ ಎಡವಟ್ಟು ನಡೆದುಹೋಗಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಪಕ್ಷದ ಬಾವುಟವನ್ನು ಏರಿಸುತ್ತಿದ್ದಂತೆಯೇ ಅದು ಹರಿದು ಹೋಗಿ ಕೆಳಕ್ಕೆ ಬೀಳುವ ಹಂತದಲ್ಲಿತ್ತು. ಕೂಡಲೇ ಸೋನಿಯಾ ಗಾಂಧಿ ಅದನ್ನು ಹಿಡಿದುಕೊಂಡರು. ದಾರ ಕಟ್ಟಾಗಿದ್ದರಿಂದ ಈ ಎಡವಟ್ಟು ನಡೆದಿದೆ.
ಪ್ರತಿವರ್ಷ ಡಿ.28ರಂದು ಕಾಂಗ್ರೆಸ್‌ ಸಂಸ್ಥಾಪನಾ ದಿನಾಚರಣೆ ಆಚರಿಸಲಾಗುತ್ತಿದೆ. ಇಂದು ಅದರ 137ನೇ ಸಂಸ್ಥಾಪನಾ ದಿನಾಚರಣೆ ಇದ್ದು, ಇದರ ಅಂಗವಾಗಿ ದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರು ಧ್ವಜಾರೋಹಣ ಮಾಡಲು ಮುಂದಾದರು. ಆಗ ಕಾರ್ಯಕರ್ತರೊಬ್ಬರು ಧ್ವಜಕ್ಕೆ ಕಟ್ಟಿದ್ದ ದಾರವನ್ನು ಜಗ್ಗಿದ ಸಂದರ್ಭದಲ್ಲಿ ಅದು ಬಿದ್ದು ಹೋಗಿದೆ. ಇದರ ವಿಡಿಯೋ ಭಾರಿ ವೈರಲ್‌ ಆಗಿದೆ.
ಆ ಕ್ಷಣದಲ್ಲಿ ಮಡಚಿಕೊಂಡಿದ್ದ ಧ್ವಜವನ್ನು ಸೋನಿಯಾ ಗಾಂಧಿ ಅವರು ಬಿಡಿಸಿ ಸಾಂಕೇತಿಕವಾಗಿ ಪ್ರದರ್ಶನ ಮಾಡಿದರು. ಬಳಿಕ ಪಕ್ಷದ ಕಾರ್ಯಕರ್ತರು ಅದನ್ನು ಸರಿಯಾಗಿ ಕಟ್ಟಿ, ಮತ್ತೆ ಧ್ವಜಾರೋಹಣ ಮಾಡಿದ್ದಾರೆ. ಈ ವೇಳೆ ಕಾಂಗ್ರೆಸ್​ ಜಿಂದಾಬಾದ್ ಎಂಬ ಘೋಷಣೆಯನ್ನೂ ಕೂಗಲಾಯಿತು. ಕಾಂಗ್ರೆಸ್​ ನಾಯಕರಾದ ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ಕೆ.ಸಿ.ವೇಣುಗೋಪಾಲ್​ ಇತರರು ಇದ್ದರು. ನಂತರ ಸೇವಾದಳದ ಕಾರ್ಯಕರ್ತರು ರಾಷ್ಟ್ರ ಗೀತೆ ಗಾಯನ ಮಾಡಿ ಕಾರ್ಯಕ್ರಮ ಮುಂದುವರೆಸಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ:
#WATCH| Congress flag falls off while being hoisted by party's interim president Sonia Gandhi on the party's 137th Foundation Day#Delhipic.twitter.com/A03JkKS5aC— ANI (@ANI)December 28, 2021
#WATCH| Congress flag falls off while being hoisted by party's interim president Sonia Gandhi on the party's 137th Foundation Day#Delhipic.twitter.com/A03JkKS5aC
Sign in to your account
Please enter an answer in digits:eleven − eight =
Remember me
